Petrol Price Today : ಮತ್ತೆ ಏರಿದೆ ಇಂಧನ ದರ: ಏ.4ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ತಿಳಿಯಿರಿ
ನವದೆಹಲಿ, ಏಪ್ರಿಲ್ 4: ದೇಶದಲ್ಲಿ ಕೆಲವು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದು (ಏಪ್ರಿಲ್ 4,2022) ಪೆಟ್ರೋಲ್, ಡೀಸೆಲ್ ಹೆಚ್ಚಳವಾಗಿದೆ. ಕಳೆದ 14 ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್‌ಗೆ 8.40 ರೂಪಾಯಿ ಏರಿಕೆ ಆಗಿದೆ.
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಏಪ್ರಿಲ್ 4ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 40 ಪೈಸೆ ಏರಿಕೆ ಹೊಂದಿ, ಪ್ರತಿ ಲೀಟರ್‌ಗೆ ರೂ. 103.81 ಆಗಿದೆ. ಇನ್ನು ಡಿಸೇಲ್ ಬೆಲೆಯು ಕೂಡಾ ಲೀಟರ್‌ಗೆ 40 ಪೈಸೆ ಹೆಚ್ಚಳವಾಗಿ, 95.07ಗೆ ತಲುಪಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಸುಮಾರು 137 ದಿನಗಳ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ದರ ಕಳೆದ 14 ದಿನಗಳಲ್ಲಿ ಒಂದೆರಡು ದಿನ ಮಾತ್ರ ಸ್ಥಿರವಾಗಿದ್ದು, ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

ಬೆಂಗಳೂರು ಸೇರಿ ಇತರ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ
ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 42 ಪೈಸೆ ಏರಿಕೆ ಹೊಂದಿ, 109.41 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆಯು ಕೂಡಾ ಏರಿಕೆಯಾಗಿದೆ. ಡಿಸೇಲ್ ಬೆಲೆಯು 40 ಪೈಸೆ ಏರಿಕೆಯಾಗಿದ್ದು, 93.23 ರೂ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 109.34 ರೂಪಾಯಿ, ಡೀಸೆಲ್ ದರ 99.42 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 113.45 ರೂಪಾಯಿ, ಡೀಸೆಲ್ ದರ 98.22 ರೂಪಾಯಿ ಆಗಿದೆ.

ವಾಣಿಜ್ಯ ನಗರಿ ಪೆಟ್ರೋಲ್, ಡೀಸೆಲ್ ದರ
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳವಾಗಿದ್ದು,, ರೂ. 118.83 ಗೆ ತಲುಪಿದರೆ, ಡೀಸೆಲ್ ಬೆಲೆ 43 ಪೈಸೆ ಹೆಚ್ಚಳವಾಗಿ ರೂ. 103.07 ಆಗಿದೆ. ಇನ್ನು ಹೈದರಾಬಾದ್‌ನಲ್ಲಿ ಪೆಟ್ರೋಲ್ ದರ 109.41 ರೂಪಾಯಿ ಆಗಿದ್ದರೆ, ಡೀಸೆಲ್ ದರ 103.75 ರೂಪಾಯಿ ಆಗಿದೆ. ಇನ್ನು ರಾಜ್ಯ ರಾಜಧಾನಿ ಪೈಕಿ ಚಂಡೀಗಢದಲ್ಲಿ ಅತೀ ಕಡಿಮೆ ಡೀಸೆಲ್ ದರವಿದೆ. ಪ್ರತಿ ಲೀಟರ್‌ಗೆ 89.34 ರೂಪಾಯಿ ಆಗಿದೆ. ಇನ್ನು ಪೆಟ್ರೋಲ್ ದರವು ಕೂಡಾ ಚಂಡೀಗಢದಲ್ಲಿ ಕಡಿಮೆ ಇದೆ. 103.17 ರೂಪಾಯಿ ಆಗಿದೆ.

ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?
ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯು ನೂರರ ಗಡಿ ದಾಟಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ನೂರರ ಗಡಿಯನ್ನು ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು 101 ರೂಪಾಯಿಯಿಂದ 116 ರೂಪಾಯಿ ಆಸುಪಾಸಿನಲ್ಲಿದೆ. ಇನ್ನು ಡೀಸೆಲ್ ದರವು ದೇಶದ ಒಂದೆರಡು ಪ್ರಮುಖ ನಗರದಲ್ಲಿ ನೂರರ ಗಡಿಯನ್ನು ದಾಟಿದೆ. ಹೈದರಾಬಾದ್, ಮುಂಬೈನಲ್ಲಿ, ತಿರುವನಂತಪುರ, ಭುವನೇಶ್ವದಲ್ಲಿ ಡೀಸೆಲ್ ದರವು ನೂರರ ಗಡಿಯನ್ನು ದಾಟಿದೆ. ಉಳಿದಂತೆ ಇತರೆ ನಗರಗಳಲ್ಲಿ 90 ರೂಪಾಯಿ ಆಸುಪಾಸಿನಲ್ಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ
ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 104.6 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.












Click it and Unblock the Notifications