ಮತ್ತೆ 80 ಪೈಸೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ
ನವದೆಹಲಿ, ಮಾರ್ಚ್ 30; ದೇಶದಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಕಳೆದ 9 ದಿನಗಳಲ್ಲಿ 8 ಬಾರಿ ದರಗಳು ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.
ಬುಧವಾರ ನವದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 80 ಪೈಸೆ ಏರಿಕೆಯಾಗಿದೆ. ಇದರಿಂದಾಗಿ ಲೀಟರ್ ಪೆಟ್ರೋಲ್ ದರ 101.01 ರೂ. ಆಗಿದೆ. ಡೀಸೆಲ್ ದರ 92.27 ರೂ. ಆಗಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 85 ಪೈಸೆ, ಡೀಸೆಲ್ ಬೆಲೆ ಲೀಟರ್‌ಗೆ 85 ಪೈಸೆ ಏರಿಕೆ ಕಂಡಿದೆ. ಈ ನಗರದಲ್ಲಿ ಲೀಟರ್ ಪೆಟ್ರೋಲ್ ದರ 115.88 ರೂ. ಮತ್ತು ಡೀಸೆಲ್ ದರ 100.10 ರೂ..

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 75 ಪೈಸೆ ಏರಿಕೆ ಕಂಡಿದೆ. ಬುಧವಾರ ನಗರದಲ್ಲಿನ ಪೆಟ್ರೋಲ್ ದರ 106.69 ರೂ. ಗೆ ಏರಿಕೆಯಾಗಿದೆ. ಲೀಟರ್ ಡೀಸೆಲ್ ದರ 76 ಪೈಸೆ ಏರಿಕೆ ಬಳಿಕ ಲೀಟರ್‌ಗೆ 96.76 ರೂ. ಆಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 84 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀಟರ್ ಪೆಟ್ರೋಲ್ ದರ 110.52 ರೂ. ಆಗಿದೆ. ಡೀಸೆಲ್ ದರ ಲೀಟರ್‌ಗೆ 80 ಪೈಸೆ ಏರಿಕೆ ಕಂಡಿದೆ. ಇದರಿಂದಾಗಿ ದರ 95.42 ರೂ. ಏರಿಕೆಯಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆ ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತದೆ. ಆದ್ದರಿಂದ ರಾಜ್ಯದಿಂದ ರಾಜ್ಯಕ್ಕೆ ದರಗಳಲ್ಲಿ ವ್ಯತ್ಯಾಸ ಇರುತ್ತದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಾಲ್ಕೂವರೆ ತಿಂಗಳ ಬಳಿಕ ಮಾರ್ಚ್ 22ರಂದು ಏರಿಕೆಯಾಗಿತ್ತು. ಬಳಿಕ 9 ದಿನಗಳಲ್ಲಿ 8 ಬಾರಿ ತೈಲ ದರಗಳು ಏರಿಕೆ ಕಂಡಿವೆ. ಒಟ್ಟಾರೆ 5 ರೂ. ಏರಿಕೆಯಾದಂತೆ ಆಗಿದೆ.
ಜೂನ್ 2017ರಲ್ಲಿ ಪ್ರತಿದಿನ ತೈಲ ಬೆಲೆ ಪರಿಷ್ಕರಣೆ ಮಾಡಲು ಅವಕಾಶ ನೀಡಲಾಯಿತು. ಅಲ್ಲಿಯ ತನಕ ತಿಂಗಳಿಗೆ ಎರಡು ಬಾರಿ ಮಾತ್ರ ಬೆಲೆಗಳಲ್ಲಿ ಪರಿಷ್ಕರಣೆ ಆಗುತ್ತಿತ್ತು.
ಹೋಟೆಲ್ ದರ ಏರಿಕೆ; ಪೆಟ್ರೋಲ್ & ಡೀಸೆಲ್ ದರ ಏರಿಕೆ, ಅಡುಗೆ ಅನಿಲ ಮತ್ತು ಅಡುಗೆ ಎಣ್ಣೆಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಹೋಟೆಲ್‌ಗಳಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಊಟ, ಉಪಹಾರದ ಬೆಳೆಗಳು ಏರಿಕೆಯಾಗಲಿವೆ.












Click it and Unblock the Notifications