ಕಾಫಿ ಎಸ್ಟೇಟ್ ಮಾಲೀಕರಾಗುವ ಕನಸು ನನಸಾಗುವ ಅವಕಾಶ ಇಲ್ಲಿದೆ...
ಬೆಂಗಳೂರು, ಫೆಬ್ರವರಿ 8: ರಜಾ ಕಳೆಯುವುದಕ್ಕೆ, ಬೇಸರವಾದಾಗ ಹೋಗಿ ಇದ್ದು ಬರೋದಿಕ್ಕೆ ಒಂದು ಫಾರ್ಮ್ ಹೌಸ್ ಇರಬೇಕು ಅನ್ನೋದು ನಿಮ್ಮ ಕನಸು ಅಥವಾ ಆಸೆಯಾಗಿದ್ದರೆ ಖಂಡಿತಾ ಈ ಲೇಖನ ನೀವು ಓದಲೇಬೇಕು. ತೀರಾ ಭಾರ ಎನಿಸದ ಬೆಲೆ, ಪಶ್ಚಿಮ ಘಟ್ಟದ ಮಧ್ಯೆ ಸೊಗಸಾದ ಕಾಫಿ ಎಸ್ಟೇಟ್..ಜತೆಗೆ ಹಾಕಿದ ಬಂಡವಾಳಕ್ಕೆ ವರ್ಷಾವರ್ಷ ಹಣ ಬರುತ್ತದೆ.

ನೀವೇ ನಿಂತು ತೋಟದ ದೇಖ-ರೇಖಿ ಮಾಡಬೇಕು ಅಂತೇನೂ ಇಲ್ಲ. ಅಯ್ಯೋ ಎಲ್ಲಿ ಅನ್ನೋದೇ ಹೇಳಲಿಲ್ಲವಲ್ಲಾ ಅಂತೀರಾ! ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಬೆಲೆ ಎಕರೆಗೆ ಇಪ್ಪತ್ತು ಲಕ್ಷ, ಎರಡು ಎಕರೆಗೆ 40 ಲಕ್ಷ ರುಪಾಯಿ ಮಾತ್ರ.

ಈ ಯೋಜನೆಗೆ ಪೆಪ್ಪರ್ ಹಿಲ್ಸ್ ಪ್ರಾಜೆಕ್ಟ್ ಅಂತ ಹೆಸರಿಡಲಾಗಿದೆ. ಈಗಾಗಲೇ ಇಲ್ಲಿ ನೆಟ್ಟಿರುವ ಮರಗಳಿಗೆ ಎರಡು ವರ್ಷವಾಗಿದೆ. ಇದರಿಂದ ನೀವು ವರ್ಷಕ್ಕೆ ಎರಡರಿಂದ ಮೂರು ಲಕ್ಷ ರುಪಾಯಿ ಆದಾಯ ಕೂಡ ನಿರೀಕ್ಷಿಸಬಹುದು. ಮತ್ತು ಈ ಆದಾಯಕ್ಕೆ ತೆರಿಗೆ ಕೂಡ ಇಲ್ಲ. ಇದರ ಜತೆಗೆ ಇನ್ನಷ್ಟು ಅನುಕೂಲಗಳಿವೆ. ಪಟ್ಟಿ ಓದಿಕೊಳ್ಳಿ.

* ಸಂಪೂರ್ಣ ನಿರ್ವಹಣೆ ಹಾಗೂ ಎಸ್ಟೇಟ್ ನ ರಕ್ಷಣಾ ಜವಾಬ್ದಾರಿ ವೈಬೆಜ್ ಕ್ಲಬ್ ನವರದು
* ಈ ಸ್ಥಳ ರಾಷ್ಟ್ರೀಯ ಹೆದ್ದಾರಿಗೆ ಬಹಳ ಹತ್ತಿರವಿದೆ
* ಇಲ್ಲಿ ಇಸ್ರೇಲಿ ತಂತ್ರಜ್ಞಾನ ಬಳಸಿರುವುದರಿಂದ ಕಡಿಮೆ ನಿರ್ವಹಣೆ ಖರ್ಚು ಹಾಗೂ ಇಳುವರಿ ಚೆನ್ನಾಗಿ ಬರುತ್ತದೆ
* ಫಾರ್ಮ್ ಹೌಸ್ ಖರೀದಿಸಿದರೆ ವೈಬೆಜ್ ಕ್ಲಬ್ ಗೆ ಉಚಿತ ಸದಸ್ಯತ್ವ. ಕ್ಲಬ್ ನ ರೆಸಾರ್ಟ್ ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿದೆ
ನಿಮಗೆ ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕು, ತಿಳಿದುಕೊಳ್ಳಬೇಕು ಅಂತನ್ನಿಸಿದರೆ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications