ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಪ್ಲಸ್ ನಿರ್ಧಾರ; ಶೇ. 3ರಷ್ಟು ಬೆಲೆ ಏರಿಕೆ

|
Google Oneindia Kannada News

ತೈಲ ಉತ್ಪಾದಕ ದೇಶಗಳ (OPEC) ಸಭೆಗೆ ಮುನ್ನ ಜಾಗತಿಕ ತೈಲ ಬೆಲೆಗಳು ಏರಿಕೆ ಕಂಡಿವೆ. ಒಂದು ಬ್ಯಾರಲ್‌ಗೆ ಮೂರು ಡಾಲರ್‌ಗೂ ಹೆಚ್ಚು ಮೊತ್ತದಷ್ಟು ಬೆಲೆ ಏರಿಕೆಯಾಗಿದೆ. ಒಂದು ಬ್ಯಾಲರ್ ಕಚ್ಛಾ ತೈಲ ಈಗ ೯೬.೬೪ ಡಾಲರ್ (ಸುಮಾರು ೭,೭೦೦ ರೂಪಾಯಿ) ಬೆಲೆ ಮುಟ್ಟಿದೆ.

ಪೆಟ್ರೋಲಿಯಂ ರಫ್ತು ದೇಶಗಳು ಹಾಗು ಅವುಗಳ ಸಹಭಾಗಿದಾರರನ್ನು ಸೇರಿಸಿ ಒಕೆಪ್ ಪ್ಲಸ್ ಎಂದು ಗುರುತಿಸಲಾಗುತ್ತದೆ. ಈ ಸಂಘಟನೆ ಅಥವಾ ಗುಂಪಿನ ಸಭೆ ನಡೆದಿದ್ದು, ತೈಲ ಉತ್ಪಾದನೆ ಮೊತ್ತವನ್ನು ತುಸು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ. ಒಪೆಕ್ ಸಭೆಯಲ್ಲಿ ಈ ನಿರ್ಧಾರ ಬರುವುದು ನಿರೀಕ್ಷಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆಗೆ ಮುನ್ನವೇ ಸೋಮವಾರ ತೈಲ ಬೆಲೆಗಳು ಹೆಚ್ಚಳ ಕಂಡಿದ್ದವು.

ಬ್ರಿಟನ್‌ ಹಿಂದಿಕ್ಕಿ ವಿಶ್ವದ ಐದನೇ ಆರ್ಥಿಕತೆಯಾದ ಭಾರತಬ್ರಿಟನ್‌ ಹಿಂದಿಕ್ಕಿ ವಿಶ್ವದ ಐದನೇ ಆರ್ಥಿಕತೆಯಾದ ಭಾರತ

ವರದಿಗಳ ಪ್ರಕಾರ, ಸೋಮವಾರ ನಡೆದ ಒಪೆಕ್ ಪ್ಲಸ್ ಸಭೆಯಲ್ಲಿ ಅಕ್ಟೋಬರ್ ತಿಂಗಳಿಗೆ ತೈಲ ಉತ್ಪಾದನೆ ಕಡಿಮೆ ಮಾಡುವ ಗುರಿ ಇಡಲಾಯಿತು. ಆ ತಿಂಗಳಲ್ಲಿ ದಿನವೊಂದಕ್ಕೆ 1 ಲಕ್ಷ ಬ್ಯಾರಲ್‌ನಷ್ಟು ತೈಲ ಉತ್ಪಾದನೆಯನ್ನು ಕಡಿಮೆಗೊಳಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸೌದಿ ಅರೇಬಿಯಾ ಮೊದಲಾದ ಹಲವು ತೈಲ ಉತ್ಪಾದಕ ದೇಶಗಳು ಒಪೆಕ್ ಪ್ಲಸ್ ಸಭೆಯ ನಿರ್ಧಾರಕ್ಕೆ ಬೆಂಬಲ ನೀಡಿವೆ.

OPEC Decides To Cut Crude Oil Production, Prices Rise by 3 pc

ರಷ್ಯಾ ವಿರೋಧ:

ಇದೇ ವೇಳೆ, ಒಪೆಕ್ ದೇಶಗಳ ಗುಂಪಿನ ಸದಸ್ಯನಾಗಿರುವ ರಷ್ಯಾ ಮಾತ್ರ ತೈಲ ಉತ್ಪಾದನೆ ಕಡಿಮೆಗೊಳಿಸುವ ನಿರ್ಧಾರವನ್ನು ವಿರೋಧಿಸಿದೆ. ಒಪೆಕ್ ಸಭೆಗೆ ಮುನ್ನವೇ ರಷ್ಯಾ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿತ್ತು. ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯು ತನ್ನ ಮೂಲವೊಂದನ್ನು ಉಲ್ಲೇಖಿಸುತ್ತಾ, ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಒಪೆಕ್ ಪ್ಲಸ್ ನಿರ್ಧಾರವನ್ನು ರಷ್ಯಾ ಬೆಂಬಲಿಸುವುದಿಲ್ಲ ಎಂದು ಬರೆದಿದೆ.

ರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚುರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚು

ತೈಲ ಉತ್ಪನ್ನವನ್ನು ಕಡಿಮೆಗೊಳಿಸಿದರೆ ತನ್ನಿಂದ ತೈಲ ಖರೀದಿಸುತ್ತಿರುವ ಭಾರತ, ಚೀನಾ ಮೊದಲಾದ ಏಷ್ಯನ್ ಗ್ರಾಹಕರು ಕೈತಪ್ಪಬಹುದು ಎಂಬುದು ರಷ್ಯಾದ ಭಯ. ಅದಕ್ಕಾಗಿಯೇ, ತನ್ನ ಗ್ರಾಹಕರಿಗೆ ಸರಬರಾಜು ವ್ಯತ್ಯಯವಾಗದ ರೀತಿಯಲ್ಲಿ ಅದೇ ಪ್ರಮಾಣದಲ್ಲಿ ತೈಲ ಉತ್ಪಾದನೆ ಮುಂದುವರಿಸಲು ರಷ್ಯಾ ತೀರ್ಮಾನಿಸಿರುವುದು ತಿಳಿದುಬಂದಿದೆ.

ಸೌದಿ ಅರೇಬಿಯಾ ಬಳಿಕ ವಿಶ್ವದಲ್ಲಿ ರಷ್ಯಾವೇ ಅತಿದೊಡ್ಡ ತೈಲು ಉತ್ಪಾದಕ ದೇಶವಾಗಿದೆ. ಉಕ್ರೇನ್ ವಿರುದ್ಧ ಯುದ್ಧ ಮಾಡಿದ ಬಳಿಕ ರಷ್ಯಾ ಮೇಲೆ ಹಲವು ದೇಶಗಳು ಆರ್ಥಿಕ ದಿಗ್ಬಂಧನ ಹಾಕಿವೆ. ಆದರೆ, ರಷ್ಯಾದ ತೈಲಕ್ಕೆ ಬೇಡಿಕೆ ಇದೆ. ರಷ್ಯಾಗೂ ತನ್ನ ತೈಲ ಮಾರಾಟವಾಗುವುದು ಅನಿವಾರ್ಯ. ಬೇರೆ ದೇಶಗಳಿಗಿಂತ ರಷ್ಯಾ ಕಡಿಮೆ ಬೆಲೆಗೆ ತೈಲವನ್ನು ಮಾರುತ್ತಿದೆ. ಚೀನಾ ಸೇರಿದಂತೆ ಹಲವು ದೇಶಗಳು ರಷ್ಯಾದ ತೈಲವನ್ನು ಖರೀದಿಸುತ್ತಿದೆ.

OPEC Decides To Cut Crude Oil Production, Prices Rise by 3 pc

ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತದ್ದು ಮೂರನೇ ಸ್ಥಾನ. ರಷ್ಯಾ ಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತ ರಷ್ಯಾದಿಂದ ತೈಲ ಆಮದು ಪ್ರಮಾಣವನ್ನು ಹೆಚ್ಚಿಸಿದೆ. ಕಡಿಮೆ ಬೆಲೆಗೆ ತೈಲ ಸಿಗುತ್ತಿರುವುದು ಇದಕ್ಕೆ ಕಾರಣ.

ಹೊಸ ತೈಲ ಬೆಲೆ

ಒಪೆಕ್ ಪ್ಲಸ್ ದೇಶಗಳ ಸಭೆ ಬಳಿಕ ವಿವಿಧ ಕಚ್ಛಾ ತೈಲ ಮಾರುಕಟ್ಟೆಗಳಲ್ಲಿ ಬೆಲೆ ವ್ಯತ್ಯಯವಾಗಿದೆ. ಡಬ್ಲ್ಯೂಟಿಐ ಕ್ರ್ಯೂಡ್ ಮಾರುಕಟ್ಟೆಯಲ್ಲಿ ಶೇ. ೩ರಷ್ಟು ಬೆಲೆ ಹೆಚ್ಚಳವಾದರೆ, ಬ್ರೆಂಟ್ ಕ್ರ್ಯೂಡ್‌ನಲ್ಲಿ ಬೆಲೆ ಶೇ. 3.5ರಷ್ಟು ಹೆಚ್ಚಿದೆ.

ಡಬ್ಲ್ಯೂಟಿಐ ಕ್ರ್ಯೂಡ್: ಒಂದು ಬ್ಯಾರಲ್‌ಗೆ 90 ಡಾಲರ್
ಬ್ರೆಂಟ್ ಕ್ರ್ಯೂಡ್: ಒಂದು ಬ್ಯಾರಲ್‌ಗೆ 96.64 ಡಾಲರ್

ಒಪೆಕ್ ಪ್ಲಸ್ ಸಭೆಗೆ ಮುನ್ನವೇ ಕಚ್ಛಾ ತೈಲ ಬೆಲೆಗಳು ತುಸು ಏರಿಕೆ ಕಂಡಿದ್ದವು. ಸಭೆ ಬಳಿಕ ಇನ್ನಷ್ಟು ಏರಿವೆ. ಅಕ್ಟೋಬರ್ ೫ರಂದು ಒಪೆಕ್‌ನ ಸಾಮಾನ್ಯ ಮಾಸಿಕ ಸಭೆ ನಡೆಯಲಿದೆ. ಅಲ್ಲಿ ಬೇರೆ ಇತರ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

(ಒನ್ಇಂಡಿಯಾ ಸುದ್ದಿ)

English summary
Global oil prices have gone up after OPEC+ meeting decides to cut oil production by 1 lakh barrel per day. Russia is said to have opposed the move
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X