Gold Price: ಗೌರಿ ಹಬ್ಬಕ್ಕೆ ಚಿನ್ನದ ಬೆಲೆ ದಾಖಲೆಯ ಏರಿಕೆ: ಇಂದಿನ ದರಪಟ್ಟಿ ಹೀಗಿದೆ
ಬೆಂಗಳೂರು, ಆಗಸ್ಟ್ 26: ಚಿನ್ನಕ್ಕೆ ದರದಲ್ಲಿ ಏರಿಳಿತ ಮುಂದುವರಿದಿದೆ. ಕಳೆದೊಂದು ವಾರದಲ್ಲಿ ಬಹುತೇಕ ದಿನಗಳ ಕುಸಿತ ಕಂಡಿದ್ದ ಚಿನ್ನದ ದರವು ಇಂದು ಗೌರಿ ಹಬ್ಬದ ದಿನದಂದು ಮತ್ತು ಗಣೇಶ ಪ್ರತಿಷ್ಠಾಪನೆಯ ಮುನ್ನಾ ದಿನ ದರದಲ್ಲಿ ಭಾರೀ ಏರಿಕೆ ಆಗಿದೆ. ಬೆಳ್ಳಿ ದರದಲ್ಲಿ ಅಲ್ಪ ಕುಸಿತ ದಾಖಲಾಗಿದೆ. ನಿಮ್ಮ ಊರು, ರಾಜ್ಯಗಳಲ್ಲಿ ಆಗಸ್ಟ್ 26ರಂದು ಚಿನ್ನ-ಬೆಳ್ಳಿಯ ದರವೆಷ್ಟಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.
ಇಳಿಮುಖವಾಗಿ ಸಾಗಿದ್ದ ಚಿನ್ನಕ್ಕೆ ಬೇಡಿಕೆ ಇದ್ದೆ ಇದೆ. ಚಿನ್ನ ಖರೀದಿಸುವವರಿಗೆ ಹಬ್ಬದ ದಿನಗಳಲ್ಲಿ ದರವು ಆಘಾತ ನೀಡಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ದರ ₹1,02,060 ಕ್ಕೆ ಏರಿಕೆ ಆಗಿದ್ದು, ನೆನ್ನೆಗಿಂತ ಮಂಗಳವಾರಕ್ಕೆ 550 ರೂಪಾಯಿ ಹೆಚ್ಚಳವಾಗಿದೆ. ಇದೇ ಚಿನ್ನದ 100 ಗ್ರಾಂಗೆ ನೆನ್ನೆ 10,15,100 ರೂಪಾಯಿ ಇತ್ತು. ಇಂದು ₹10,20,600ಕ್ಕೆ ಹೆಚ್ಚಾಗಿದ್ದು, ಒಟ್ಟು 5,500 ಹೆಚ್ಚಾಗಿದೆ.

22 ಕ್ಯಾರಟ್ ಬಂಗಾರದ 10 ಗ್ರಾಂ ಬೆಲೆಯು ಇಂದು 93,550 ರೂಪಾಯಿ ಇದ್ದು, ಒಂದೇ ದಿನಕ್ಕೆ 500 ರೂಪಾಯಿ ಏರಿಕೆ ಆಗಿದೆ. ಇದೇ ಚಿನ್ನದ 100 ಗ್ರಾಂ ದರ ಇಂದು 9,35,500 ರೂಪಾಯಿ ಏರಿಕೆ ಆಗಿದ್ದು, ನೆನ್ನ 9,30,500 ರೂ. ಇತ್ತು. ಒಂದು ಒಂದೇ ದಿನಕ್ಕೆ ದರವು ₹5,000 ಹೆಚ್ಚಳವಾಗಿದೆ.
ಬೆಳ್ಳಿ ದರ ಎಷ್ಟಿದೆ?
ಕರ್ನಾಟಕ, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇಂದು ಬೆಳ್ಳಿಯ ದರವು 100 ಗ್ರಾಂಗೆ 12,000 ರೂಪಾಯಿಗೆ ಇಳಿಕೆ ಆಗಿದೆ. ನೆನ್ನೆ ಅದರ ದರ 12,100 ರೂಪಾಯಿ ಇತ್ತು, 100 ರೂ. ಇಳಿಕೆ ಆಗಿದೆ. ಅದೇ ಒಂದು ಕೆ.ಜಿ. ದರ 1,21,000 ರೂ.ನಿಂದ 1,20,000 ರೂ.ಗೆ ಇಳಿಕೆ ಆಗಿದ್ದು, 1,000 ರೂಪಾಯಿ ಕುಸಿತ ಕಂಡಿದೆ.
ಪ್ರಮುಖ ನಗರಗಳಲ್ಲಿ 22k 10 ಗ್ರಾಂ ದರಪಟ್ಟಿ
* ಬೆಂಗಳೂರು- 94,250 ರೂಪಾಯಿ
* ಚೆನ್ನೈ - 93,050 ರೂಪಾಯಿ
* ದೆಹಲಿ - 94,150 ರೂಪಾಯಿ
* ಹೈದರಾಬಾದ್ - 93,550 ರೂಪಾಯಿ
* ಕೋಲ್ಕತ್ತಾ - 93,550 ರೂಪಾಯಿ
* ಮುಂಬೈ - 93,550 ರೂಪಾಯಿ
* ಪುಣೆ - 93,550 ರೂಪಾಯಿ
ಪ್ರಮುಖ ನಗರಗಳಲ್ಲಿ 24k 10 ಗ್ರಾಂ ದರಪಟ್ಟಿ
ಮುಂಬೈ - 1,01,527 ರೂಪಾಯಿ
ದೆಹಲಿ - 1,01,673 ರೂಪಾಯಿ
ಬೆಂಗಳೂರು - 1,01,515 ರೂಪಾಯಿ
ಚೆನ್ನೈ - 1,01,521 ರೂಪಾಯಿ
ಕೋಲ್ಕತಾ - 1,01,525 ರೂಪಾಯಿ
ಹೈದರಾಬಾದ್ -1,01,270 ರೂಪಾಯಿ
ಪುಣೆ - 1,01,533 ರೂಪಾಯಿ
ಅಹಮದಾಬಾದ್ -1,01,250 ರೂಪಾಯಿ
ಲಕ್ನೋ - 1,01,140 ರೂಪಾಯಿ












Click it and Unblock the Notifications