• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ 2021: ಕರೆನ್ಸಿ ನೋಟುಗಳ ರದ್ದು ಬಗ್ಗೆ ಆರ್‌ಬಿಐ ಸ್ಪಷ್ಟನೆ

|

ನವದೆಹಲಿ, ಜನವರಿ 22: ನಕಲಿ ನೋಟುಗಳ ಹಾವಳಿ, ಹಳೆ ನೋಟು, ನಾಣ್ಯಗಳ ಚಲಾವಣೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.

ಕೇಂದ್ರ ಸರ್ಕಾರ ಅಪನಗದೀಕರಣವನ್ನು ಮತ್ತೊಮ್ಮೆ ಜಾರಿಗೆ ತರುತ್ತಿಲ್ಲ. 100 ರೂಪಾಯಿ ಮುಖಬೆಲೆಯ ಹಳೆ ಕರೆನ್ಸಿ ನೋಟುಗಳ ಚಲಾವಣೆಯನ್ನು ಹಂತಹಂತವಾಗಿ ಹಿಂಪಡೆಯಲು ನಿರ್ಧರಿಸಲಾಗಿದೆ. ಮಾರ್ಚ್ ತಿಂಗಳ ನಂತರ ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂದು ಆರ್ ಬಿ ಐ ಸಹಾಯಕ ಮಹಾಪ್ರಬಂಧಕ ಬಿಎಂ ಮಹೇಶ್ ಹೇಳಿದ್ದಾರೆ.

ಹಳೆ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ಹೊಸ ನೋಟು ಚಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ ಹೇಳಿದರು.

100 ರೂಪಾಯಿ ಮುಖಬೆಲೆಯ ನೋಟುಗಳು ಕಳೆದ ಆರು ವರ್ಷಗಳಿಂದ ಮುದ್ರಣವಾಗುತ್ತಿಲ್ಲ. 100 ರೂ. ಮುಖಬೆಲೆಯ ಹೊಸ ನೋಟುಗಳು ಚಲಾವಣೆಯಲ್ಲಿರುತ್ತವೆ, ಹಳೆ ನೋಟುಗಳನ್ನು ಆರ್ ಬಿಐನಲ್ಲಿ ಬದಲಾಯಿಸಿಕೊಳ್ಳಬಹುದು ಎಂದರು.

100ರು, 10 ರು ಹಾಗೂ 5 ರು ನೋಟು, ನಾಣ್ಯಗಳನ್ನು ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ರದ್ದಾಗಲಿವೆ. 10 ರು ನಾಣ್ಯ ಚಲಾವಣೆಗೊಂಡು 15 ವರ್ಷ ಕಳೆದರೂ ಇನ್ನೂ ನಕಲಿ ನಾಣ್ಯದ ಸುಳ್ಳು ಸುದ್ದಿ ಹಬ್ಬುತ್ತಲೇ ಇದೆ. ಆರ್ ಬಿಐ ಅತ್ಯಂತ ತಲೆ ನೋವು ತಂದ ನಾಣ್ಯವೆಂದರೆ 10 ರು ಕಾಯಿನ್. ಹಲವು ಬಾರಿ ಈ ಬಗ್ಗೆ ಸ್ಪಷ್ಟನೆ ಕೊಟ್ಟರೂ ಗಾಳಿಸುದ್ದಿ ನಂಬಿ ಬ್ಯಾಂಕಿಗೆ 10 ರು ನಾಣ್ಯ ಹಿಂತಿರುಗಿಸಿದ್ದರಿಂದ ರಾಶಿಗಟ್ಟಲೆ ಸಂಗ್ರಹವಾಗಿದೆ.

   ರಾಹುಲ್ ದ್ರಾವಿಡ್ ಭಾರತದ ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಹೇಳಿದ್ದೇನು | Oneindia Kannada

   2019ರಲ್ಲಿ ಲ್ಯಾವೆಂಡರ್ ಬಣ್ಣದಲ್ಲಿ 100 ರು ನೋಟು ಗುಜರಾತಿನ ಪಠಾಣ್ ಸರಸ್ವತಿ ನದಿ ರಾಣಿ ಕಿ ವಾವ್ ಚಿತ್ರ ಇತ್ತು. ಆದರೆ, ಇದು ನಕಲಿ ನೋಟು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಚಲಾವಣೆಯಲ್ಲಿ ವ್ಯತ್ಯಯ ಉಂಟಾಯಿತು ಎಂದರು.

   English summary
   On Friday, Assistant General Manager of the Reserve Bank of India (RBI) B Mahesh said that the Central bank is planning to withdraw the old series of currency notes including Rs 100, Rs 10, and Rs 5 by March or April.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X