ಮುಂದುವರಿದ ಯುಎಸ್ -ಇರಾನ್ ಸಂಘರ್ಷ, ಜಪಾನಿಗೂ ಬಿಸಿ

ಬೆಂಗಳೂರು, ಜನವರಿ 08: ಯುಎಸ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಯುಎಸ್ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಸುದ್ದಿ ಹಬ್ಬುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡುತ್ತಿದೆ.

ಇರಾನ್ ಹಾಗೂ ಯುಎಸ್ ನಡುವಿನ ವ್ಯಾಪಾರ, ವಹಿವಾಟು ತಿಕ್ಕಾಟ ಮುಂದುವರಿದಿದೆ. ಯುಎಸ್ ನಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟಾಗುತ್ತಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಬಾಗ್ದಾದಿನ ವಿಮಾನ ನಿಲ್ದಾಣದ ಮೇಲೆ ನಡೆದ ವಾಯುದಾಳಿಯಲ್ಲಿ ಇರಾನ್ನಿನ ಸೇನಾಧಿಕಾರಿ ಸೋಲೆಮನಿ ಹತ್ಯೆಯ ಪ್ರತೀಕಾರವಾಗಿ ಅಮೆರಿಕದ ವಿರುದ್ಧ ಇರಾನ್ ದಾಳಿ ನಡೆಸುವ ಬೆದರಿಕೆ ಹಾಕಿದೆ. ಇರಾನ್ನಿನ ಪ್ರಮುಖ 52 ತಾಣಗಳನ್ನು ಗುರಿಯನ್ನಾಗಿಸಿ ದಾಳಿ ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Oil Prices Spike, Stocks Plunge as Iran Attacks US Forces in Iraq

ಬ್ರೆಂಟ್ ಕಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಶೇ 4.53% ಏರಿಕೆ ಕಂಡು ಸರಾಸರಿ 65 ನಿಂದ 70 ಯುಎಸ್ ಡಾಲರ್ ನಷ್ಟಿದೆ. ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಭಾರತದಲ್ಲಿ ಇಂಧನ ದರ ಏರಿಕೆ(ಜನವರಿಯಿಂದ ಪೆಟ್ರೋಲ್ 55 ಪೈಸೆ, ಡೀಸೆಲ್ 72 ಪೈಸೆ) ಇನ್ನಷ್ಟು ಕಾಲ ಮುಂದುವರೆಯುವ ಸೂಚನೆ ಸಿಕ್ಕಿದೆ. ಭಾರತದ ತನ್ನ ಇಂಧನ ಬಳಕೆಯ ಶೇ80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ 15 ದಿನಗಳ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆಯನ್ನು ನಿರ್ಧರಿಸಲಿವೆ.

ಜಪಾನ್ನಿಗೆ ತಟ್ಟಿದ ಬಿಸಿ: Nikkeri 225 ಸೂಚ್ಯಂಕ ಇಳಿದು 2.5% ಕುಸಿತಕಂಡಿದೆ. ಜಾಗತಿಕ ಬೆಳವಣಿಗೆ ಬಗ್ಗೆ ಜಪಾನ್ ರಫ್ತು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ತೈಲ ಬೆಲೆ ಏರಿಕೆ ಜಾಗತಿಕವಾಗಿ ಪರಿಣಾಮ ಬೀರಲಿದ್ದು, ಜಪಾನ್ ಷೇರುಗಳಿಗೂ ಬಿಸಿ ಮುಟ್ಟಲಿದೆ ಎಂದು ಮಾರುಕಟ್ಟೆ ತಜ್ಞ ಕ್ಯೊಕೊ ಅಮೆಮಿಯಾ ಹೇಳಿದ್ದಾರೆ.

ಏಷ್ಯಾ ಟ್ರೆಡ್ ನಲ್ಲಿ ಡಾಲರ್ ಎದುರು 107.78 ಯೆನ್ ನಷ್ಟಿತ್ತು. ಮಂಗಳವಾರ ನ್ಯೂಯಾರ್ಕಿನಲ್ಲಿ 108.42 ಯೆನ್ ನಂತೆ ವ್ಯಾಪಾರ ನಡೆಸಿತ್ತು. ಸೋನಿ 1.07%, ನಿಂಟೆಂಡೋ ಕಂಪನಿ 1.07% ಕುಸಿತ ಕಂಡಿವೆ. ಟೊಯೋಟಾ 1.45%, ಟೊಕಿಯೋ ಎಲೆಕ್ಟ್ರಾನ್ ಕಂಪನಿ 1.34%, ನಿಸಾನ್ 1.20 % ಷೇರುಪೇಟೆಯಲ್ಲಿ ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+