ಈಗ ವಾಟ್ಸಾಪ್ ಮೂಲಕವೇ ಜಿಯೋ ರೀಚಾರ್ಜ್ ಮಾಡಿ
ಬೆಂಗಳೂರು, ಜೂನ್ 10: ಭಾರತದ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆ ಜಿಯೋ, ಮತ್ತೊಂದು ವಿನೂತನ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಜಿಯೋ ಬಳಕೆದಾರರು ಇನ್ನು ಮುಂದೆ ವಾಟ್ಸಾಪ್ ಮೂಲಕ ಇನ್ನಷ್ಟು ಸುಲಭವಾಗಿ ರೀಚಾರ್ಜ್ ಮಾಡಬಹುದು.
ಜಿಯೋ ಗ್ರಾಹಕರು ಈಗ ರೀಚಾರ್ಜ್, ಹಣ ಪಾವತಿ, ತಮ್ಮ ಅಹವಾಲುಗಳಿಗೆ ಉತ್ತರ, ದೂರು ನೀಡುವುದು ಮತ್ತು ಇನ್ನೂ ಅನೇಕ ಚಟುವಟಿಕೆಗಳನ್ನು ವಾಟ್ಸಾಪ್ ಮೂಲಕವೇ ಮಾಡಬಹುದಾಗಿದೆ.
ಹೊಸ ಜಿಯೋ ಸಿಮ್ ಪಡೆಯಲು ಅಥವಾ ಪೋರ್ಟ್ ಮಾಡಲು (ಎಂಎನ್ಪಿ), ಜಿಯೋ ಸಿಮ್ಗೆ ಇರುವ ಸವಲತ್ತುಗಳನ್ನು ತಿಳಿಯಲು, ಜಿಯೋ ಫೈಬರ್ ಹಾಗೂ ಜಿಯೋ ಮಾರ್ಟ್ ಸೌಲಭ್ಯ ಹಾಗೂ ಅಂತಾರಾಷ್ಟ್ರೀಯ ರೋಮಿಂಗ್ ಸವಲತ್ತುಗಳನ್ನು ವಾಟ್ಸಾಪ್ ಮುಖಾಂತರವೇ ಪಡೆಯಬಹುದಾಗಿದೆ.

70007 70007 ಸಂಖ್ಯೆಯನ್ನು ಸೇವ್ ಮಾಡಿಕೊಂಡು 'ಹಾಯ್' ಎಂದು ವಾಟ್ಸಾಪ್ ಸಂದೇಶ ರವಾನಿಸಿದರೆ --ವ್ಯಾಲೆಟ್, ಯುಪಿಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮುಂತಾದ ಎಲ್ಲ ಪಾವತಿ ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಜಿಯೋ ಮಾರ್ಟ್ನಿಂದ ನಿಮಗೆ ಬೇಕಾದ ಉತ್ಪನ್ನಗಳನ್ನು ವಾಟ್ಸಾಪ್ ಮೂಲಕವೇ ಆರ್ಡರ್ ಮಾಡಿ ತರಿಸಿಕೊಳ್ಳಲು ಸಹ ಅವಕಾಶವಿದೆ.
ಆರಂಭದಲ್ಲಿ ಈ ಸೇವೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಿ ಭಾಷೆಗಳೂ ಲಭ್ಯವಾಗಲಿವೆ.
ವಾಟ್ಸಾಪ್ ಮೂಲಕ ದೊರಕುವ ಜಿಯೋ ಸೌಲಭ್ಯಗಳು:
1. ಜಿಯೋ ಸಿಮ್ ರೀಚಾರ್ಜ್
2. ಹೊಸ ಜಿಯೋ ಸಿಮ್ ಪಡೆಯುವುದು ಅಥವಾ ಪೋರ್ಟ್-ಇನ್ (ಎಂಎನ್ಪಿ)
3. ಜಿಯೋ ಸಿಮ್ಗೆ ನೆರವು
4. ಜಿಯೋ ಫೈಬರ್ ನೆರವು
5. ಅಂತಾರಾಷ್ಟ್ರೀಯ ರೋಮಿಂಗ್ ನೆರವು
6. ಜಿಯೋ ಮಾರ್ಟ್ ನೆರವು
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications