ಏರ್ ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಶುಭ ಸಂದೇಶ
ಬೆಂಗಳೂರು, ಸೆ.22: ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. 'ಪ್ರತಿ ಸೆಕೆಂಡುಗಳಿಗೆ ಶುಲ್ಕ' ಸೌಲಭ್ಯ ಜಾರಿಗೊಳಿಸಿದ್ದು, ಗ್ರಾಹಕರು ಈಗ ತಾವು ಕರೆ ಮಾಡಿದ ಅವಧಿಗೆ ಮಾತ್ರ ಶುಲ್ಕ ಕಟ್ಟುವ ಅವಕಾಶ ಲಭ್ಯವಾಗಿದೆ.
ಕಾಲ್ ಡ್ರಾಪ್ ಬಗ್ಗೆ ವಿವಿಧ ಟೆಲಿಕಾಂ ಸೇವಾ ಸಂಸ್ಥೆಗಳು ತೆಗೆದುಕೊಳ್ಳುವ ಕ್ರಮದ ಬಗ್ಗೆ ಭಾರತೀಯ ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಕಣ್ಣಿಟ್ಟಿರುವ ಬೆನ್ನಲ್ಲೇ ಏರ್ ಟೆಲ್ ತನ್ನ ಗ್ರಾಹಕರಿಗೆ ಈ ಭರ್ಜರಿ ಕೊಡುಗೆ ನೀಡುತ್ತಿದೆ.[ಏರ್ ಟೆಲ್ ಪ್ರೀ ಪೇಯ್ಡ್ ಇಂಟರ್ನೆಟ್ ಪ್ಯಾಕ್ ಬೆಲೆ ಏರಿಕೆ]

ಪ್ರತಿ ಸೆಕೆಂಡಿಗೆ ಕರೆದರ ಸೌಲಭ್ಯ ದೇಶಾದ್ಯಂತ ತನ್ನ ಎಲ್ಲ ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಿದೆ ಎಂದು ಏರ್‌ಟೆಲ್ ಪ್ರಕಟಿಸಿದೆ. ಏರ್ ಟೆಲ್ ನೆಟ್‌ವರ್ಕ್ ಬಳಸುವ ಗ್ರಾಹಕರು ತಾವು ಮಾತನಾಡಿದ ಸೆಕೆಂಡಿನ ಆಧಾರದಲ್ಲಿ ಕರೆ ದರವನ್ನು ಖಾತ್ರಿಪಡಿಸಲಾಗುತ್ತದೆ.
ಎನ್ನಲಾಗುತ್ತಿದೆ.ಕಾಲ್‌ಡ್ರಾಪ್‌ಗಳಿಂದ ತೀವ್ರ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಇದರಿಂದ ಕಂಪನಿಗಳಿಗೆ ಯಾವುದಾದರೂ ಪ್ರಯೋಜನವಿದೆಯೇ ಅಥವಾ ಇದನ್ನು ತಪ್ಪಿಸಲು ಬೇರೆ ಯಾವುದಾದರೂ ಯೋಜನೆಗಳಿದೆಯೇ ಎಂಬುದನ್ನು ಪರಿಶೀಲಿಸಲು ದೂರವಾಣಿ ನಿಯಂತ್ರಕ ಸಂಸ್ಥೆ ಟ್ರಾಯ್ ಮುಂದಾಗಿರುವ ಹಿನ್ನೆಲೆಯಲ್ಲಿ ಅದು ಈ ನಿರ್ಧಾರಕ್ಕೆ ಬಂದಿದೆ.
ಜೂನ್ 2015ರ ಅಂತ್ಯಕ್ಕೆ ಪ್ರೀಪೇಯ್ಡ್ ಗ್ರಾಹಕರು ಶೇ 94.4ರಷ್ಟಿದ್ದಾರೆ. ಕಾಲ್ ಡ್ರಾಪ್ ಬಗ್ಗೆ ಕಠಿಣ ಕ್ರಮ ಜರುಗಿಸಿದರೆ ಸೇವಾ ಸಂಸ್ಥೆಗಳು ಪ್ರತಿ ಕರೆಗೆ ಇಂತಿಷ್ಟು ದುಡ್ಡು ನೀಡಬೇಕಲ್ಲದೆ ಉಚಿತ ಟಾಕ್ ಟೈಂ ಕೂಡಾ ನೀಡಬೇಕಾಗುತ್ತದೆ ಎಂಬ ನಿಯಮ ಜಾರಿಗೆ ಬರುವ ಸಾಧ್ಯತೆಯಿತ್ತು.
ಸದ್ಯಕ್ಕೆ 'ಪ್ರತಿ ನಿಮಿಷದ ಕರೆ' ಸೌಲಭ್ಯ ಜಾರಿಯಲ್ಲಿದೆ. ಇದಕ್ಕೆ ಬದಲಾಗಿ ಪ್ರತಿ ಸೆಕೆಂಡಿಗೆ ಕರೆ ದರ ನಿಗದಿಯನ್ನು ಏರ್ ಟೆಲ್ ಪರಿಚಯಿಸಿದೆ ಎಂದು ಭಾರ್ತಿ ಏರ್ ಟೆಲ್ ನ ಭಾರತ ಹಾಗೂ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಗೋಪಾಲ್ ವಿಠಲ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications