ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನೋಕಿಯಾ 8 ಬಿಡುಗಡೆ
ಬೆಂಗಳೂರು, ಸೆ. 26: ಹೆಚ್ಎಂಡಿ ಗ್ಲೋಬಲ್ ತನ್ನ ನೋಕಿಯಾ ಬ್ರ್ಯಾಂಡ್ ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಹಂತಹಂತವಾಗಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಹೊಚ್ಚ ಹೊಸ ಆಂಡ್ರಾಯ್ಡ್ ಫ್ಲಾಗ್ ಚಿಪ್ ಸ್ಮಾರ್ಟ್ ಫೋನ್ ನೋಕಿಯಾ 8 ಭಾರತದಲ್ಲಿ ಬಿಡುಗಡೆಯಾಗಿದೆ. ಅಕ್ಟೋಬರ್ 14ರಿಂದ ಮಾರುಕಟ್ಟೆಯಲ್ಲಿ ದೊರೆಯಲಿರುವ ನೋಕಿಯಾ 8ರ ಬೆಲೆ 36,999 ರೂಪಾಯಿಯಾಗಿವೆ. ಅಮೆಜಾನ್ ಇಂಡಿಯಾ ವೆಬ್ಸೈಟ್ ಮೂಲಕ ಮೊಬೈಲ್ ಖರೀದಿ ಸಾಧ್ಯವಿದೆ.

ಹಿಂದೆ ಮುಂದೆ ಎರಡು ಕಡೆ 13 ಎಂಪಿ ಕ್ಯಾಮೆರಾ, ಡ್ಯುಯಲ್ ಸೈಟ್ ವಿಡಿಯೋ ಮೂಲಕ ಮಾರುಕಟ್ಟೆಯಲ್ಲಿ ಹೊಸ ಕಿಚ್ಚು ಹಬ್ಬಿಸಲು ನೋಕಿಯಾ ಮುಂದಾಗಿದೆ. 360 ಡಿಗ್ರಿ ಆಡಿಯೋ ಅನುಭವವನ್ನು ನೀಡುವ ನೋಕಿಯಾ ozo ಆಡಿಯೋ ನೀಡಲಾಗಿದೆ.
64ಜಿಬಿ ಮೆಮೋರಿ, ಆಕ್ಟಾ ಕೋರ್ ಪ್ರೊಸೆಸರ್, 3090 ಎಂಎಎಚ್ ಬ್ಯಾಟರಿ, 5.3 ಇಂಚು ಸ್ಕ್ರೀನ್, ವಾಟರ್ ಪ್ರೂಫ್, ಡುಯಲ್ ಸಿಮ್/ನ್ಯಾನೋ ಹೊಂದಿದೆ. ಪೂರ್ತಿ ವಿವರಗಳನ್ನು ಗಿಜ್ ಬಾಟ್ ನಲ್ಲಿ ಓದಬಹುದು.
ನೋಕಿಯಾ 6 ಸ್ಮಾರ್ಟ್ ಫೋನ್ ಗಾಗಿ ಪ್ರೀ ಬುಕ್ಕಿಂಗ್ ಮೂಲಕ 10 ಲಕ್ಷ ಗ್ರಾಹಕರು ನೋಂದಣಿ ಮಾಡಿ ದಾಖಲೆ ಬರೆದಿತ್ತು. ಈಗ ನೋಕಿಯಾ 8 ಕೂಡಾ ಹೆಚ್ಚಿನ ನೋಂದಣಿ ಪಡೆಯುವ ಸಾಧ್ಯತೆಯಿದೆ.












Click it and Unblock the Notifications