ಹೊಸ ಸಿಮ್ ಖರೀದಿಸುವ ಮುನ್ನ ಈ ಸುದ್ದಿ ತಪ್ಪದೇ ಓದಿ

ನವದೆಹಲಿ, ಏಪ್ರಿಲ್ 28: ಹೊಸ ಸಿಮ್ ಅಲ್ಲದೆ, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ಸೌಲಭ್ಯಗಳ ಮುಂದುವರಿಕೆಗೆ ಆಧಾರ್ ಕಾರ್ಡ್, ಲೈವ್ ಫೋಟೋ ಜತೆಗೆ ಮುಖ ದೃಢಿಕರಣ(face recognition) ಕಡ್ಡಾಯವಾಗಲಿದೆ ಎಂಬ ನಿಯಮ ಕೊಂಚ ಬದಲಾವಣೆಯಾಗಿದೆ.

ಮುಖ್ಯವಾಗಿ ಸಿಮ್ ಕಾರ್ಡ್ ಖರೀದಿಯಲ್ಲಿ ಹೊಸ ನಿಯಮ ಜಾರಿಗೆ ಬರಲಿದ್ದು, ಹೊಸ ಸಿಮ್ ಖರೀದಿ ಮಾಡಲು ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮ ತೆಗೆದು ಹಾಕಲಾಗಿದೆ. ಮೇ 1 ರ ನಂತರ ಹೊಸ ಸಿಮ್ ಕಾರ್ಡ್ ಖರೀದಿ ನಿಯಮ ಬದಲಾವಣೆ ಜಾರಿಗೆ ಬರಲಿದೆ.

ಮೊಬೈಲ್ ಫೋನ್ ಸಿಮ್ ನಂಬರ್ ಹಾಗೂ ಆಧಾರ್ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

No Aadhaar card needed! Soon, get SIM card under new system

ಟೆಲಿಕಾಂ ಕಂಪನಿಗಳು ಡಿಜಿಟಲ್ ಕೆವೈಸಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಕೆಲವು ಗಂಟೆಯೊಳಗೆ ಗ್ರಾಹಕರ ದಾಖಲೆ ಪರಿಶೀಲನೆ ಹಾಗೂ ಹೊಸ ಸಿಮ್ ಆಕ್ಟಿವೇಷನ್ ಜಾರಿಗೊಳ್ಳಲಿದೆ. ಇನ್ನೊಂದು ಮುಖ್ಯ ಸಂಗತಿಯೆಂದರೆ, ಒಂದೇ ದಾಖಲೆ ಪತ್ರದಲ್ಲಿ ಒಂದು ದಿನ ಎರಡು ಸಿಮ್ ಕಾರ್ಡ್ ಖರೀದಿ ಮಾಡಬಹುದಾಗಿದೆ. ಒಂದು ವಿಳಾಸ ದೃಢೀಕೃತ ಐಡಿ ನೀಡಿ ಒಟ್ಟು 9 ಸಿಮ್ ಪಡೆಯಬಹುದು.

ಹೊಸ ಸಿಮ್ ನೀಡುವ ವೇಳೆ ಬೆರಳಚ್ಚಿನ ಜೊತೆ ಮುಖದ ದೃಢೀಕರಣ ಪಡೆಯಬೇಕಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಯುಐಡಿಎಐ ಹೇಳಿದೆ.

ವರ್ಚ್ಯುಯಲ್ ಆಧಾರ್ ಕಾರ್ಡ್ ಬಳಸಿದರೆ ಬೆರಳಚ್ಚು ಅಥವಾ ಕಣ್ಣಿನ ಗುರುತು ನೀಡಿದರೆ ಸಾಕು. ಇಕೈವೆಸಿ ದೃಢಿಕರಣವಾದ ಬಳಿಕ ಕೂಡಾ ಲೈವ್ ಫೋಟೋವನ್ನು ಸಿಮ್ ಆಕ್ಟಿವೇಟ್ ಮಾಡಲು, ದೃಢೀಕರಣಕ್ಕಾಗಿ ಬಳಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+