ನಿಸಾನ್ ಬಹುನಿರೀಕ್ಷಿತ B-SUV ಟೀಸರ್ ಚಿತ್ರ ಬಿಡುಗಡೆ!

ಬೆಂಗಳೂರು, ಜುಲೈ 02: ನಿಸಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಬಿ-ಎಸ್ ಯುವಿ ಮಾದರಿಯ ವೈಶಿಷ್ಟ್ಯತೆಗಳ ಟೀಸರ್ ಲುಕ್ ಬಿಡುಗಡೆ ಮಾಡಿದೆ. ಅತ್ಯಾಕರ್ಷಕವಾದ ಹೆಡ್ ಲೈಟ್ ಗಳು, ತಂತ್ರಜ್ಞಾನದಿಂದ ಶ್ರೀಮಂತಗೊಂಡ ಗ್ರಿಲ್ ಮತ್ತು ಸ್ಟೈಲಿಶ್ ಆಗಿರುವ ಈ ಬಿ-ಎಸ್ ಯುವಿ(B-SUV) ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಇದೇ ಮೊದಲ ಬಾರಿಗೆ B-SUV ಪರಿಕಲ್ಪನೆಯನ್ನು ತನ್ನ ಜಾಗತಿಕ ಕೇಂದ್ರ ಕಚೇರಿಯಲ್ಲಿ ಜುಲೈ 16 ರಂದು ಅನಾವರಣಗೊಳಿಸಲಿದೆ.

ಕಂಪನಿಯ ಮೊದಲ ಕಾಂಪ್ಯಾಕ್ಟ್ B-SUV ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿದೆ. ಅದ್ಭುತವಾದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ನೀಡುವ ಮೂಲಕ ನಿಸಾನ್ ಇಂಡಿಯಾ ಜನರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಉದ್ದೇಶ ಹೊಂದಿದೆ. ಈ ಬಹುನಿರೀಕ್ಷಿತ B-SUV ಭಾರತದಲ್ಲಿ ಪ್ರಸಕ್ತ ಹಣಕಾಸು ಸಾಲು ಅಂದರೆ 2020-21 ರ ಎರಡನೇ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿದೆ.

ನಿಸಾನ್ ನ ಜಾಗತಿಕ ಎಸ್ ಯುವಿ ಪರಂಪರೆ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೊಸ ಕಾಂಪ್ಯಾಕ್ಟ್ ಎಸ್ ಯುವಿಯನ್ನು ನಾಳಿನ ಪ್ರಯಾಣಕ್ಕೆ ಅನುಕೂಲಕರವಾದ ವೈಶಿಷ್ಟ್ಯತೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರಿಗೆ ಸ್ಟೈಲಿಶ್ ವಿನ್ಯಾಸ ಮತ್ತು ಡೈನಾಮಿಕ್ ರೋಡ್ ಪ್ರೆಸೆನ್ಸ್ ಅನ್ನು ನೀಡಲಿದೆ.

Nissan to unveil new compact SUV on 16 July

ನಿಸಾನ್ ನ ಈ ಹೊಸ ಎಸ್ ಯುವಿ ನಿಸಾನ್ ಇಂಟಲಿಜೆಂಟ್ ಮೊಬಿಲಿಟಿಯ ಭಾಗವಾದ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಈ ಮೂಲಕ ಕಂಪನಿಯ ದೂರದೃಷ್ಟಿಯಾದ ವಾಹನಗಳು ಹೇಗೆ ಶಕ್ತಿಶಾಲಿಯಾಗಿರಬೇಕು, ಚಾಲನೆ ಹೊಂದಿರಬೇಕು ಮತ್ತು ಇವು ಸಮಾಜದೊಂದಿಗೆ ಹೇಗೆ ಬೆರೆಯಬೇಕೆಂಬುದರ ಪರಿಕಲ್ಪನೆಯನ್ನು ಇಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

Nissan to unveil new compact SUV on 16 July

ಈ ಹೊಸ B-SUV ನಿಸಾನ್ ನ ಜಾಗತಿಕ ಎಸ್ ಯುವಿ ಡಿಎನ್ಎ ಮತ್ತು ಜಪಾನಿನ ಇಂಜಿನಿಯರಿಂಗ್ ಗೆ ಸಾಕ್ಷಿಯಾಗಿದೆ. ಪ್ಯಾಟ್ರೋಲ್, ಪಾಥ್ ಫೈಂಡರ್, ಅರ್ಮಡಾ, ಎಕ್ಸ-ಟ್ರಯಲ್, ಕ್ವಾಶ್ ಕಾಯ್ ಮತ್ತು ಕಿಕ್ಸ್ ನಂತಹ ಐಕಾನಿಕ್ ಮಾದರಿಗಳನ್ನು ನಿರ್ಮಾಣ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+