ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿ ಹೆಚ್ಚಳ

ಫಾರ್ಮಾಸ್ಯುಟಿಕಲ್, ಎಫ್ ಎಂಸಿಜಿ, ಫೈನಾನ್ಷಿಯಲ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಷೇರುಗಳು ಏರಿಕೆ ಆಗಿದ್ದು ಸೇರಿದಂತೆ ಎಲ್ಲ ವಲಯಗಳ ಷೇರು ಖರೀದಿಯಲ್ಲೂ ಚಟುವಟಿಕೆ ಕಂಡುಬಂದಿದ್ದರಿಂದ ಸೋಮವಾರ (ಅಕ್ಟೋಬರ್ 29) ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ ಭರ್ಜರಿ ಏರಿಕೆ ದಾಖಲಿಸಿದವು.

ನಿಫ್ಟಿ ಸೂಚ್ಯಂಕವು 221 ಅಂಶಗಳ ಏರಿಕೆ ಕಂಡು, 10,251 ಅಂಶದೊಂದಿಗೆ ವಹಿವಾಟು ದಿನಾಂತ್ಯ ಕಂಡಿತು. ಸೆನ್ಸೆಕ್ಸ್ 718 ಅಂಶಗಳ ಏರಿಕೆ ದಾಖಲಿಸಿ, 34,067 ಅಂಶದೊಂದಿಗೆ ವಹಿವಾಟು ಕೊನೆಗೊಳಿಸಿತು. ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸನ್ ಟೂಬ್ರೋ, ಎಸ್ ಬಿಐ, ಟಿಸಿಎಸ್ ನಂತಹ ಕಂಪನಿಗಳ ಷೇರುಗಳನ್ನು ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಖರೀದಿಸಿದರು.

ಬಾಂಡ್ ಮೇಲಿನ ಗಳಿಕೆ ಪ್ರಮಾಣದಲ್ಲಿ ಇಳಿಕೆಯಾಯಿತು. ನಾನೂರು ಕೋಟಿ ರುಪಾಯಿಯಷ್ಟು ಸರಕಾರಿ ಬಾಂಡ್ ಗಳ ಖರೀದಿಗೆ ಆರ್ ಬಿಐ ನಿರ್ಧಾರ, ಜಾಗತಿಕ ಮಾರುಕಟ್ಟೆ ಪೂರಕ ಪ್ರಭಾವ, ಕಚ್ಚಾ ತೈಲ ಬೆಲ ಇಳಿಕೆ ಇತರ ಅಂಶಗಳು ಇಂದಿನ ಏರಿಕೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವು.

Nifty added more than Rs 1 lakh crore to investor wealth on Monday

ಸೋಮವಾರದ ಷೇರು ಮಾರುಕಟ್ಟೆ ಏರಿಕೆಯಲ್ಲಿ ಆದದ್ದು ಏನು?

* ಸೆನ್ಸೆಕ್ಸ್ ನಲ್ಲಿ ಮಾರುಕಟ್ಟೆ ಬಂಡವಾಳಕ್ಕೆ 3,08,855.62 ಕೋಟಿ ಸೇರ್ಪಡೆಯಾಯಿತು

* ನಿಫ್ಟಿ ಸೂಚ್ಯಂಕದಲ್ಲಿನ ಏರಿಕೆಯಿಂದ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿಗೂ ಹೆಚ್ಚಾಯಿತು

* ಐಸಿಐಸಿಐ ಬ್ಯಾಂಕ್ ಹೂಡಿಕೆದಾರರ 20 ಸಾವಿರ ಕೋಟಿ ಸಂಪತ್ತು ಸೃಷ್ಟಿಸಿದೆ

* ಎನ್ ಸಿಇ ಹಾಗೂ ಬಿಎಸ್ ಇಯ ಎಲ್ಲ ವಲಯದ ಸೂಚ್ಯಂಕಗಳು ಏರಿಕೆ ಕಂಡಿವೆ

* ಏರಿಕೆ ಹಾಗೂ ಇಳಿಕೆ ಕಂಡ ಪ್ರಮಾಣವು 2:1 ಅನುಪಾತದಲ್ಲಿದೆ. ಅದರರ್ಥ ಪ್ರತಿ ಎರಡು ಕಂಪನಿ ಷೇರು ಏರಿಕೆಯಾದರೆ, ಒಂದು ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+