ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಮುಕೇಶ್ ಅಂಬಾನಿ: ಈಗ ವಿಶ್ವದ 8ನೇ ಅತಿದೊಡ್ಡ ಶ್ರೀಮಂತ
ನವದೆಹಲಿ, ಜುಲೈ 11: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಈಗ ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಅಗ್ರ 8ನೇ ಸ್ಥಾನಕ್ಕೇರಿದ್ದಾರೆ. ಇಷ್ಟೇ ಅಲ್ಲದೆ ವಿಶ್ವದ ಖ್ಯಾತ ಹೂಡಿಕೆದಾರ ಅಮೆರಿಕಾದ ವಾರೆನ್ ಬಫೆಟ್ ಅವರನ್ನೇ ಹಿಂದಿಕ್ಕಿದ್ದಾರೆ.
Recommended Video
ಮುಕೇಶ್ ಅಂಬಾನಿಯವರ ಸಂಪತ್ತು 68.3 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ (ಅಂದಾಜು 5.10 ಲಕ್ಷ ಕೋಟಿ ರುಪಾಯಿ). ಒಂದು ಕಾಲದ ನಂಬರ್ 1 ಶ್ರೀಮಂತ ವಾರೆನ್ ಬಫೆಟ್ ಅವರ ಸಂಪತ್ತು 67.9 ಶತಕೋಟಿ ಡಾಲರ್.
ಅಂಬಾನಿಯ ನಾಯಕತ್ವದಲ್ಲಿ, ರಿಲಯನ್ಸ್ ತೈಲ ಮತ್ತು ಇಂಧನ ಕಂಪನಿಯಿಂದ ಚಿಲ್ಲರೆ ಅಂಗಡಿಗಳು, ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ವಾಹಕ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ವಿಸ್ತಾರವಾದ ಸಂಘಟನೆಯಾಗಿ ಬೆಳೆದಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಟಾಪ್ 10 ಪಟ್ಟಿ ಇಂತಿದೆ,
1. ಜೆಫ್ ಬೇಜೋಸ್
2. ಬಿಲ್‌ಗೇಟ್ಸ್
3. ಬರ್ನಾರ್ಡ್ ಅರ್ನಾಲ್ಡ್
4. ಮಾರ್ಕ್ ಜುಕರ್‌ಬರ್ಗ್
5. ಸ್ಟೀವ್ ಬಲ್ಮರ್
6. ಲಾರ್ರಿ ಪೇಜ್
7. ಸರ್ಗಿ ಬ್ರಿನ್
8. ಮುಕೇಶ್ ಅಂಬಾನಿ
9. ವಾರೆನ್ ಬಫೆಟ್
10. ಲಾರ್ರಿ ಎಲ್ಲಿಸನ್












Click it and Unblock the Notifications