• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗತ್ತಿನ ನಾಲ್ಕನೇ ಶ್ರೀಮಂತ ಪಟ್ಟಕ್ಕೇರಿದ ಮುಕೇಶ್ ಅಂಬಾನಿ

|
Google Oneindia Kannada News

ನವದೆಹಲಿ, ಆಗಸ್ಟ್‌ 08: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಈ ಉನ್ನತ ಸ್ಥಾನವನ್ನು ಸಾಧಿಸಿದ್ದು, ಗೂಗಲ್‌ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್, ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಬೆನ್ನಲ್ಲೇ ಯುರೋಪಿನ ಶ್ರೀಮಂತ ವ್ಯಕ್ತಿಯನ್ನು ಮೀರಿಸಿದ್ದಾರೆ.

cರಿಲಯನ್ಸ್ ಇಂಡಸ್ಟ್ರೀಸ್ ಜಗತ್ತಿನ ಎರಡನೇ ಅತಿದೊಡ್ಡ ಬ್ರ್ಯಾಂಡ್cರಿಲಯನ್ಸ್ ಇಂಡಸ್ಟ್ರೀಸ್ ಜಗತ್ತಿನ ಎರಡನೇ ಅತಿದೊಡ್ಡ ಬ್ರ್ಯಾಂಡ್

ರಿಲಯನ್ಸ್‌ ಇಂಡಸ್ಟ್ರೀಸ್ ಸಂಪತ್ತು 80.6 ಬಿಲಿಯನ್ ಡಾಲರ್

ರಿಲಯನ್ಸ್‌ ಇಂಡಸ್ಟ್ರೀಸ್ ಸಂಪತ್ತು 80.6 ಬಿಲಿಯನ್ ಡಾಲರ್

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈ ವರ್ಷ 22 ಬಿಲಿಯನ್ ಡಾಲರ್ ಸಂಗ್ರಹಿಸಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಈಗ 80.6 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ.

ಬರ್ನಾಲ್ಡ್‌ ಅರ್ನಾಲ್ಟ್‌ರನ್ನೇ ಹಿಂದಿಕ್ಕಿದ ಅಂಬಾನಿ

ಬರ್ನಾಲ್ಡ್‌ ಅರ್ನಾಲ್ಟ್‌ರನ್ನೇ ಹಿಂದಿಕ್ಕಿದ ಅಂಬಾನಿ

ಹೌದು ಈ ಹಿಂದೆ ಬಹುದೊಡ್ಡ ಖ್ಯಾತನಾಮರುಗಳನ್ನ ಹಿಂದಿಕ್ಕಿದ್ದ ಅಂಬಾನಿ ಈಗ ಯೂರೋಪಿನ ಶ್ರೀಮಂತ ವ್ಯಕ್ತಿ ಬರ್ನಾಲ್ಡ್‌ ಅರ್ನಾಲ್ಟ್‌ರನ್ನೇ ಹಿಂದಿಕ್ಕಿದ್ದಾರೆ. ಅವರ ಎಲ್‌ವಿಎಂಹೆಚ್ ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ ಎಸ್‌ಇ ಗ್ರಾಹಕರು ಉನ್ನತ-ಮಟ್ಟದ ಫ್ಯಾಷನ್ ಖರೀದಿಯಲ್ಲಿ ತೊಡಗಿಲ್ಲ. ಇದರಿಂದ ಕಂಪನಿಯ ನಷ್ಟದ ಜೊತೆಗೆ ವೆಚ್ಚ ಕಡಿತಕ್ಕೆ ಮುಂದಾಗಿದೆ.

ದೈತ್ಯ ಹೂಡಿಕೆದಾರರನ್ನೇ ಕೆಡವಿದ ಮುಕೇಶ್

ದೈತ್ಯ ಹೂಡಿಕೆದಾರರನ್ನೇ ಕೆಡವಿದ ಮುಕೇಶ್

ಭಾರತದ ಶ್ರೀಮಂತ ವ್ಯಕ್ತಿ ಮುಕೇರ್ಶ ಈಗಾಗಲೇ ಇತ್ತೀಚಿನ ವಾರಗಳಲ್ಲಿ ಕೆಲವು ದೊಡ್ಡ ಉದ್ಯಮಿಗಳನ್ನು ಮೀರಿಸಿದ್ದಾರೆ. ಸಿಲಿಕಾನ್ ವ್ಯಾಲಿ ಟೈಟಾನ್‌ಗಳಾದ ಎಲೋನ್ ಮಸ್ಕ್ ಮತ್ತು ಆಲ್ಫಾಬೆಟ್ ಇಂಕ್ ಸಹ-ಸಂಸ್ಥಾಪಕರಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಮತ್ತು ಒರಾಕಲ್ ಆಫ್ ಒಮಾಹಾ ವಾರೆನ್ ಬಫೆಟ್ರನ್ನ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ರಿಲಯನ್ಸ್ ಜಿಯೋದಲ್ಲಿ 15 ಶತಕೋಟಿಗಿಂತ ಹೆಚ್ಚಿನ ಹೂಡಿಕೆ

ರಿಲಯನ್ಸ್ ಜಿಯೋದಲ್ಲಿ 15 ಶತಕೋಟಿಗಿಂತ ಹೆಚ್ಚಿನ ಹೂಡಿಕೆ

ಆರ್‌ಐಎಲ್‌ನ ಜಿಯೋ ಪ್ಲಾಟ್‌ಫಾರ್ಮ್‌ಗಳು ಫೇಸ್‌ಬುಕ್ ಇಂಕ್ ಮತ್ತು ಸಿಲ್ವರ್ ಲೇಕ್ ಸೇರಿದಂತೆ ಕಂಪನಿಗಳಿಂದ 15 ಶತಕೋಟಿಗಿಂತ ಹೆಚ್ಚಿನ ಹೂಡಿಕೆಗಳನ್ನು ಪಡೆದ ನಂತರ ಮುಕೇಶ್ ಅಂಬಾನಿಯ ಸಂಪತ್ತು ದ್ವಿಗುಣಗೊಂಡಿದೆ.

ಕಳೆದ ಮೂರು ತಿಂಗಳಲ್ಲಿ ಅನೇಕ ವಿದೇಶಿ ಕಂಪನಿಗಳು ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಫೇಸ್‌ಬುಕ್, ಸಿಲ್ವರ್ ಲೇಕ್ ಪಾರ್ಟ್‌ನರ್ಸ್, ವಿಸ್ಟಾ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಸಿಲ್ವರ್ ಲೇಕ್, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಪಿಐಎಫ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಷೇರು ಮಾರಾಟದಿಂದ ರಿಲಯನ್ಸ್ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಆರ್ಐಎಲ್ ಇದುವರೆಗೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಡಾ 25.09 ರಷ್ಟು ಪಾಲನ್ನು ಹೂಡಿಕೆ ಮಾಡಿದೆ.

English summary
Mukesh Ambani has surged past Europe’s wealthiest man, making him the world’s fourth-richest person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X