ವಿರಾಟ್ ಕೊಹ್ಲಿ ಹೆಸರಿನಲ್ಲಿ ಮೋಟೋ ಜಿ ಸ್ಮಾರ್ಟ್ ಫೋನ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 26: ಮೋಟೋರೋಲಾ ಕಂಪನಿಯ ಬಹುಬೇಡಿಕೆಯ ಸ್ಮಾರ್ಟ್ ಫೋನ್ ಗಳಲ್ಲಿ ಒಂದೆನಿಸಿರುವ ಮೋಟೋ ಜಿ ಟರ್ಬೋ ಎಡಿಷನ್ ಗೆ ಹೊಸ ಸೇರ್ಪಡೆಯಾಗಿದೆ. ಟೀಮ್ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೆಸರಿನ ಚಿನ್ಹೆಯುಳ್ಳ ಮೊಬೈಲ್ ಫೋನನ್ನು ಸ್ವತಃ ಕೊಹ್ಲಿ ಅವರು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ವಿರಾಟ್ ಫ್ಯಾನ್ ಬಾಕ್ಸ್ ನ ಅಂಗವಾಗಿ ಪ್ರಸ್ತುತಪಡಿಸುತ್ತಿರುವ ಈ ಸ್ಮಾರ್ಟ್ ಫೋನ್ ಬೆಲೆ 16,999 ರು ಆಗಿದೆ. ಮೇ ತಿಂಗಳ ಮೊದಲ ವಾರ ಭಾರತದೆಲ್ಲೆಡೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಸಿಂಗಪುರ ಮೂಲದ ಪ್ರೈವಿ ಪ್ಲೆಕ್ಸ್ ಕಂಪನಿ ಹಾಗೂ ಕಾರ್ನರ್ ಸ್ಟೋನ್ ಸ್ಫೋರ್ಟ್ಸ್ ಕನ್ಸಲ್ಟಂಟ್ಸ್ ಸೇರಿ ಕೊಹ್ಲಿ ಅವರ ಫ್ಯಾನ್ ಕ್ಲಬ್ ಹೆಚ್ಚಿಸಲು ಮುಂದಾಗಿದೆ. ವಿರಾಟ್ ಕೊಹ್ಲಿ ಅವರು ಸಹಿ ಹಾಕಿರುವ ಪುಟ್ಟ ಬ್ಯಾಟ್, ಸ್ವಾಗತ ಪತ್ರದ ಜೊತೆಗೆ ಆಕರ್ಷಕ ಮೊಬೈಲ್ ನಿಮ್ಮದಾಗಲಿದೆ.

Moto G Turbo Virat Kohli Edition Launched in India

ಫ್ಯಾನ್ ಕ್ಲಬ್ ಸೇರಿದ ಅಭಿಮಾನಿಗಳುಗೆ ವಿಶೇಷ ಸಂದರ್ಭಗಳಲ್ಲಿ ಕೊಹ್ಲಿ ಅವರನ್ನು ಭೇಟಿ ಮಾಡುವ ಅವಕಾಶವೂ ಲಭ್ಯವಾಗಲಿದೆ. ಅಪ್ಲಿಕೇಷನ್ ಮೂಲಕ ಫ್ಯಾನ್ಸ್ ಜತೆ ಕೊಹ್ಲಿ ಚಾಟ್ ಕೂಡಾ ಮಾಡಲಿದ್ದಾರೆ.

'ನನ್ನ ಫ್ಯಾನ್ಸ್ ಜತೆಗೆ ನಾನು ಇನ್ನಷ್ಟು ಹತ್ತಿರವಾಗಲು ಈ ಫ್ಯಾನ್ ಬಾಕ್ಸ್ ಉತ್ತಮ ಯೋಜನೆಯಾಗಿದೆ. ನಾನು ಆನ್ ಲೈನ್ ಇದ್ದಾಗ ಖಂಡಿತವಾಗಿಯೂ ಫ್ಯಾನ್ಸ್ ಜತೆ ಸಂಭಾಷಿಸುತ್ತೇನೆ' ಎಂದು ಕೊಹ್ಲಿ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Moto G Turbo Virat Kohli Edition Launched in India. The smartphone is bundled as part of the Virat FanBox, which has been priced at Rs. 16,999. The company said the FanBox will be available from the first week of May.
Please Wait while comments are loading...