ಮರ್ಸಿಡಿಸ್ ಬೆಂಜ್ ಹೊಸ ಆವೃತ್ತಿ S ಕ್ಲಾಸ್ ಮೆಸ್ಟ್ರೋ ಕಾರು ಬಿಡುಗಡೆ: ಬೆಲೆ 1.51 ಕೋಟಿ ರೂ.
ನವದೆಹಲಿ, ಜನವರಿ 05: ಐಶಾರಾಮಿ ಕಾರುಗಳ ತಯಾರಕ ಮರ್ಸಿಡಿಸ್ ಬೆಂಜ್ ಹೊಸ ಆವೃತ್ತಿ S ಕ್ಲಾಸ್ ಮೆಸ್ಟ್ರೋ ಕಾರನ್ನು ಮಂಗಳವಾರ ಬಿಡುಗಡೆ ಮಾಡಿದೆ. ಅತ್ಯಾಧುನಿಕ ಫೀಚರ್ಸ್ ಒಳಗೊಂಡಿರುವ ಈ ಕಾರಿನ ಸ್ಥಳದ ಬಗ್ಗೆ ನೀವು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದು.
ಹೌದು ಆಧುನಿಕ ಫೀಚರ್ಸ್ ಹೊಂದಿರುವ ಮರ್ಸಿಡಿಸ್ ಬೆಂಜ್ 2021ರ ಹೊಸ ಆವೃತ್ತಿ S ಕ್ಲಾಸ್ ಮೆಸ್ಟ್ರೋ ಕಾರನ್ನು ನೀವು ಸ್ಮಾರ್ಟ್‌ಫೋನ್ ಅನ್ನು ಕೂಡ ಮುಟ್ಟದೇ ಅದರ ಸ್ಥಳವನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಲು ಸಾಧ್ಯವಿದೆ. ಇದರ ಎಕ್ಸ್ ಶೋರೂಂ ಬೆಲೆ 1.51 ಕೋಟಿ ರೂಪಾಯಿಗಳು.
ಎಸ್-ಕ್ಲಾಸ್‌ನ S 350 ಡಿ ರೂಪಾಂತರವನ್ನು ಆಧರಿಸಿ, ಎಸ್-ಕ್ಲಾಸ್ ಮೆಸ್ಟ್ರೋ ಆವೃತ್ತಿಯು 3 ಲೀಟರ್ ಟ್ವಿನ್-ಟರ್ಬೊ ಇನ್-ಲೈನ್-ಸಿಕ್ಸ್ ಡೀಸೆಲ್ ಎಂಜಿನ್ ಹೊಂದಿದೆ. ಇದು 342-4600 ಆರ್‌ಪಿಎಂನಲ್ಲಿ 282 bhp ಮತ್ತು 1200-3200 ಆರ್‌ಪಿಎಂನಲ್ಲಿ 600 ಎನ್ಎಂ ಅನ್ನು ಹೊಂದಿದ್ದು, 0 ಯಿಂದ 100 ಕಿ.ಮೀ ವೇಗದಲ್ಲಿ ತಲುಪಲು ಕೇವಲ 6 ಸೆಕೆಂಡುಗಳು ಸಾಕು ಮತ್ತು 250 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ.

ಫೋನ್‌ನಲ್ಲಿ ಮರ್ಸಿಡಿಸ್ ಮಿ ಅಪ್ಲಿಕೇಶನ್‌ನೊಂದಿಗೆ, ವಾಹನ ಮಾಲೀಕರು ವಾಹನದ ಸ್ಥಳವನ್ನು ಟ್ರ್ಯಾಕ್ ಮಾಡಬಹುದು, ದೂರದಿಂದಲೇ ಲಾಕ್ ಮಾಡಬಹುದು ಅಥವಾ ಅನ್ಲಾಕ್ ಮಾಡಬಹುದು. ವಿಂಡೋ ಮತ್ತು ಸನ್‌ರೂಫ್ ಕೂಡ ತೆರೆಯಬಹುದು.












Click it and Unblock the Notifications