ಮಾರುತಿ ಕಾರುಗಳ ಬೇಡಿಕೆ ಕುಸಿತ, 7 ವರ್ಷಗಳಲ್ಲೇ ಕಡಿಮೆ ಖರೀದಿ

ಮುಂಬೈ, ಆಗಸ್ಟ್ 01 : ಮಾರುತಿ ಕಾರುಗಳ ಖರೀದಿಯಲ್ಲಿ ಭಾರಿ ಕುಸಿತವಾಗಿದೆ. ಹ್ಯಾಚ್ ಬ್ಯಾಕ್ ಕಾರುಗಳಿಗೆ ಬೇಡಿಕೆ ಕುಸಿತವಾಗಿದ್ದು, ಸೆಡಾನ್ ಮಾದರಿಯ ಕಾರುಗಳ ಖರೀದಿ ಹೆಚ್ಚಾಗಿದೆ.

ಸುಜುಕಿ ಇಂಡಿಯಾ ಲಿಮಿಟೆಡ್ ನೀಡಿರುವ ಮಾಹಿತಿಯಂತೆ ಕಳೆದ 7 ವರ್ಷಗಳಲ್ಲಿಯೇ ಇದು ಭಾರಿ ಕುಸಿತವಾಗಿದೆ. ಕಾರಗಳ ಖರೀದಿಯಲ್ಲಿ ಶೇ 34ರಷ್ಟು ಕುಸಿತಕಂಡಿದೆ. ಹ್ಯಾಚ್ ಬ್ಯಾಕ್ ಕಾರುಗಳ ಖರೀದಿ ಶೇ 23ರಷ್ಟು ಕಡಿಮೆಯಾಗಿದ್ದು, ಸೆಡಾನ್ ಕಾರುಗಳ ಖರೀದಿ 2,397 ಯುನಿಟ್‌ ನಷ್ಟು ಹೆಚ್ಚಳವಾಗಿದೆ.

2012ರ ಆಗಸ್ಟ್ ಬಳಿಕ ಕಾರುಗಳ ಖರೀದಿಯಲ್ಲಿ ಇಷ್ಟು ಇಳಿಕೆಯಾಗಿರುವುದು ಇದೇ ಮೊದಲು. 2014, 2015 ಮತ್ತು 2016ರಲ್ಲಿ ಕಾರಿಗೆ ಬೇಡಿಕೆ ಇತ್ತು. 2017 ಮತ್ತು 2018ರಲ್ಲಿ ಕಾರುಗಳ ಖರೀದಿ ಸಮ ಪ್ರಮಾಣದಲ್ಲಿತ್ತು. ಆದರೆ, 2009ರಲ್ಲಿ ಕುಸಿತಕಂಡಿದೆ.

Maruti Suzuki Car Sales Drop To Lowest

ನಿರ್ಮಲ್ ಬ್ಯಾಂಗ್ ಇಕ್ವಿಟೀಸ್‌ನ ಥೆರೆಸಾ ಜಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕಾರುಗಳಿಗೆ ಬೇಡಿಕೆ ಬರುತ್ತಿಲ್ಲ, ಇದರ ಅರ್ಥ ಆರ್ಥಿಕತೆ ನಿಧಾನವಾಗಿ ಸಾಗುತ್ತಿದೆ" ಎಂದು ಹೇಳಿದ್ದಾರೆ.

ಕಾರುಗಳ ಬೇಡಿಕೆ ಕುಸಿದಿದ್ದು ಮಾರುತಿ ಸುಜುಕಿಗೆ ಹೊಸ ಸವಾಲು ಎದುರಾಗಿದೆ. ಪ್ರತಿಸ್ಪರ್ಧಿಗಳಾದ ಕೆಐಎ ಮೋಟಾರ್ಸ್, ಎಸ್‌ಎಐಸಿ ಮೋಟಾರ್ ಕ್ರಾಪ್ ಎದುರು ಪೈಪೋಟಿ ನೀಡಲು ಹೊಸ ಮಾಡೆಲ್‌ನ ಕಾರನ್ನು ಉತ್ಪಾದಿಸಬೇಕಿದೆ.

ಭಾರತ ವಿಶ್ವದ ನಾಲ್ಕನೇ ಆಟೋಮೊಬೈಲ್ ವ್ಯಾಪರ ವಹಿವಾಟನ್ನು ಹೊಂದಿದೆ. ಹುಂಡೈ ಮಾರುತಿ ಕಾರುಗಳ ವಹಿವಾಟು ಕಡಿಮೆಯಾಗಲು ಕಾರಣವಾಗಿದ್ದು, ಹೊಸ ಮಾದರಿ ಕಾರುಗಳ ಮೂಲಕ ತೀವ್ರ ಪೈಪೋಟಿ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+