ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 05: ವಿಶ್ವದ ಅತಿ ಶ್ರೀಮಂತ ಉದ್ಯಮಿ ಎನಿಸಿರುವ ಅಮೆಜಾನ್ ಸಂಸ್ಥೆ ಸ್ಥಾಪಕ ಜೆಫ್ ಬೆಜೋಸ್ ಹಾಗೂ ಅವರ ಪತ್ನಿ ಮೆಕೆಂಜಿ ದಂಪತಿ ವಿಚ್ಛೇದನ ಪೂರ್ಣಗೊಂಡಿದೆ. ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಪ್ರಕ್ರಿಯೆ ಇದಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವಿಚ್ಛೇದನದಾ ನಂತರ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಜಿ ಅವರು ವಿಶ್ವದ ಮೂರನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಲಾರಿಯಲ್ ಹೈರೆಸ್ ಫ್ರಾಂಕೋಯಿಸ್ ಬೆಟೆನ್ ಕೋರ್ಟ್ ಮೇಯೆರ್ಸ್, ವಾಲ್ಮರ್ಟ್ ನ ಆಲಿಸ್ ವಾಲ್ಟನ್ ಮೊದಲೆರಡು ಸ್ಥಾನದಲ್ಲಿದ್ದಾರೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಇ-ಕಾಮರ್ಸ್ ಕಂಪನಿ ಅಮೆಜಾನ್ ನ ಶೇಕಡಾ 4ರಷ್ಟು ಪಾಲು ಹೊಂದಿರಲಿದ್ದಾರೆ. ಆಕೆ ಪಾಲಿನ ಷೇರಿನ ಮೌಲ್ಯ 36.5 ಬಿಲಿಯನ್ ಡಾಲರ್ ನಷ್ಟಿದ್ದು (ಸುಮಾರು 2.52 ಲಕ್ಷ ಕೋಟಿ ರೂಪಾಯಿ). 75% ಷೇರುಗಳನ್ನು ನೀಡುತ್ತಿದ್ದಾರೆ, ವಾಷಿಂಗ್ಟನ್ ಪೋಸ್ಟ್, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬ್ಲೂ ಆರಿಜನ್ ನಲ್ಲಿದ್ದ ಪಾಲನ್ನು ಜೆಫ್ ಗೆ ನೀಡುತ್ತಿದ್ದಾರೆ.

ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ! ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ!

ಮೈಕ್ರೊಸಾಫ್ಟ್ ಬಿಲ್ ಗೇಟ್ಸ್, ಬರ್ಕ್ ಷೈರ್ ನ ಹಾಥ್ವೇ ಚೇರ್ಮನ್ ವಾರೆನ್ ಬಫೆಟ್ ಗಿಂತ ಜೆಫ್ ಮುಂದಿದ್ದಾರೆ.

ಓದಿನ ಗೀಳು ಹತ್ತಿಸಿದ ಅಮೆಜಾನ್ ಸಂಸ್ಥೆ

ಓದಿನ ಗೀಳು ಹತ್ತಿಸಿದ ಅಮೆಜಾನ್ ಸಂಸ್ಥೆ

ಅಮೆಜಾನ್ ಮೂಲಕ ಒಂದು ಮಾದರಿ ಉದ್ಯಮ ವಿನ್ಯಾಸ ರೂಪಿಸಿದ ಜೆಫ್, ಪುಸ್ತಕ ಪ್ರಕಾಶನ, ಖರೀದಿ, ಮಾರಾಟ ವ್ಯವಸ್ಥೆಗೆ ಹೊಸ ಭಾಷ್ಯ ಬರೆದವರು. ಪುಸ್ತಕಗಳ ಜೊತೆಗೆ ಸಿಡಿ, ಡಿವಿಡಿ, ಸಾಫ್ಟ್ ವೇರ್ ಹಾಗೂ ಕಂಪ್ಯೂಟರ್ ಗೇಮ್ಸ್ ಗಳನ್ನು ಕೊಳ್ಳಲು ಅಮೆಜಾನ್ ಸೂಕ್ತ ತಾಣವಾಗಿ ರೂಪುಗೊಂಡಿದೆ.

Zappos, IMDb, Alexa Internet ಹಾಗೂ Audible.com. ಮುಂತಾದ ಪ್ರಮುಖ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಅಮೆಜಾನ್ ಈಗ ಹೊಸ ಸಾಹಸಕ್ಕೂ ಕೈ ಹಾಕಿದೆ. Kindle Fire tablet ಅನ್ನು $199 ಗೆ ಪರಿಚಯಿಸುವ ಮೂಲಕ ಓದಿನ ಗೀಳು ಹತ್ತಿಸಿಕೊಂಡವರನ್ನು ಸೆಳೆಯುವಲ್ಲಿ ಜೆಫ್ ಯಶಸ್ವಿಯಾಗಿದ್ದಾರೆ.

ಫೋರ್ಬ್ಸ್, ಬ್ಲೂಮ್ ಬರ್ಗ್ ಇಂಡೆಕ್ಸ್ ನಲ್ಲಿ ಜೆಫ್ ನಂ.1

ಫೋರ್ಬ್ಸ್, ಬ್ಲೂಮ್ ಬರ್ಗ್ ಇಂಡೆಕ್ಸ್ ನಲ್ಲಿ ಜೆಫ್ ನಂ.1

ಜೆಫ್ ಅವರು ಪ್ರತಿ ವರ್ಷ ಬ್ಲೂ ಆರಿಜಿನ್ ಗೆ 1 ಬಿಲಿಯನ್ ಡಾಲರ್ ದಾನ ಮಾಡುತ್ತಾರೆ. ಜುಲೈ 2017ರಲ್ಲಿ ಫೋರ್ಬ್ಸ್ ವರದಿಯಂತೆ ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದ ಜೆಫ್ ಈಗ ಮತ್ತೊಮ್ಮೆ ಈ ಸ್ಥಾನಕ್ಕೇರಿದ್ದರು. 2018ರಲ್ಲಿ 'ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್' ವರದಿಯಂತೆ. ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಅಮೆಜಾನ್.ಕಾಮ್ ಸ್ಥಾಪಕ ಜೆಫ್ ಬೆಜೊಸ್ ಅವರು ಅತಿ ಶ್ರೀಮಂತ ಎನಿಸಿಕೊಂಡಿದ್ದರು.

ಮೆಕಂಜಿ ಟ್ವೀಟ್

ಉದ್ಯಮಿ ಜೆಫ್ ಬೆಜೋಸ್ (55 ವರ್ಷ) ಹಾಗೂ ಉಪನ್ಯಾಸಕಿ, ಸಾಹಿತಿ ಮೆಕೆಂಜಿ (48 ವರ್ಷ) 1993ರಲ್ಲಿ ಮದುವೆಯಾಗಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. ಟ್ವೀಟ್ ಮಾಡುವ ಮೂಲಕ 2019ರ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಜೆಫ್ ದಂಪತಿ ಹೇಳಿದ್ದರು. ಆಕೆ ಪಾಲಿನ ಷೇರಿನ ಮೌಲ್ಯ 36.5 ಬಿಲಿಯನ್ ಡಾಲರ್ ನಷ್ಟಿದ್ದು (ಸುಮಾರು 2.52 ಲಕ್ಷ ಕೋಟಿ ರೂಪಾಯಿ). 75% ಷೇರುಗಳನ್ನು ಜೆಫ್ ಗೆ ನೀಡುತ್ತಿದ್ದಾರೆ. ಇದರಿಂದ ಸಂತಸವಾಗಿದೆ ಎಂದಿದ್ದಾರೆ

ವಾಷಿಂಗ್ಟನ್ ಪೋಸ್ಟ್ ಖರೀದಿ

ವಾಷಿಂಗ್ಟನ್ ಪೋಸ್ಟ್ ಖರೀದಿ

1877ರಲ್ಲಿ ಆರಂಭವಾದ ಪತ್ರಿಕೆಯನ್ನು ಸುಮಾರು 1500 ಕೋಟಿ ರೂ.ಗಳಿಗೆ ಜೆಫ್ ಖರೀದಿಸಿದ್ದರು. ಇದರೊಂದಿಗೆ 135 ವರ್ಷಗಳಷ್ಟು ಹಳೆಯದಾದ, ಪತ್ರಿಕೆ ಗ್ರಹಾಂ ಕುಟುಂಬದಿಂದ ಜೆಫ್ ಅವರ ಕೈಗೆ ಹಸ್ತಾಂತರವಾಗಿದೆ.

ಅಮೆರಿಕಾದ ಅಧ್ಯಕ್ಷ ನಿಕ್ಸನ್‌ ತಲೆದಂಡಕ್ಕೆ ಕಾರಣವಾದ ವಾಟರ್ ಗೇಟ್‌ ನಂತಹ ಹಗರಣಗಳನ್ನು ಬಯಲಿಗೆಳೆದ ಇತಿಹಾಸವನ್ನು ಪತ್ರಿಕೆ ಹೊಂದಿದೆ. ಜೆಫ್ ಏಕಾಂಗಿಯಾಗಿ 2013ರಲ್ಲಿ ಪತ್ರಿಕೆಯನ್ನು ಖರೀದಿ ಮಾಡಿದ್ದರು. ನಂತರ ಟ್ರಂಪ್ ಸರ್ಕಾರದ ಹುಳುಕು ತೋರಿಸಿ, ಕೆಂಗಣ್ಣಿಗೆ ಗುರಿಯಾದರು.

ವಿಶ್ವ ಅತಿ ಶ್ರೀಮಂತ ದಂಪತಿಗಳಾಗಿದ್ದರು

ವಿಶ್ವ ಅತಿ ಶ್ರೀಮಂತ ದಂಪತಿಗಳಾಗಿದ್ದರು

ಉದ್ಯಮಿ ಜೆಫ್ ಬೆಜೋಸ್ (55 ವರ್ಷ) ಹಾಗೂ ಉಪನ್ಯಾಸಕಿ, ಸಾಹಿತಿ ಮೆಕೆಂಜಿ (48 ವರ್ಷ) 1993ರಲ್ಲಿ ಮದುವೆಯಾಗಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. 1994ರಲ್ಲಿ ಸಿಯಾಟೆಲ್ ಗ್ಯಾರೇಜ್ ನಲ್ಲಿ ಅಮೆಜಾನ್ ಸಂಸ್ಥೆ ಉಗಮವಾಯಿತು. ಸದ್ಯ ಆನ್ ಲೈನ್ ರೀಟೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆಯ ಮಾರುಕಟ್ಟೆ ಮೌಲ್ಯ 890 ಬಿಲಿಯನ್ ಡಾಲರ್ ನಷ್ಟಿದೆ.

ಜೆಫ್ ಬಳಿ ಸದ್ಯ ಸಂಸ್ಥೆಯ ಶೇ 12ರಷ್ಟು ಪಾಲು ಹೊಂದಿದ್ದು, ಅದರ ಮೌಲ್ಯ 114 ಬಿಲಿಯನ್ ಡಾಲರ್ ( ಸುಮಾರು 7.87 ಲಕ್ಷ ಕೋಟಿ) ಇದ್ದು, ಈಗಲೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮೈಕ್ರೊಸಾಫ್ಟ್ ಬಿಲ್ ಗೇಟ್ಸ್, ಬರ್ಕ್ ಷೈರ್ ನ ಹಾಥ್ವೇ ಚೇರ್ಮನ್ ವಾರೆನ್ ಬಫೆಟ್ ಗಿಂತ ಜೆಫ್ ಮುಂದಿದ್ದಾರೆ.

English summary
Amazon founder Jeff Bezos and his wife, MacKenzie, finalized the biggest divorce settlement in history on Thursday, leaving him with 75 percent of their stock in the tech giant and giving her nearly $36 billion in shares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X