LPG Gas Cylinder: ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ

ಸತತ ಎರಡು ತಿಂಗಳ ಬೆಲೆ ಕಡಿತದಿಂದ ಸ್ವಲ್ಪ ನಿರಾಳರಾಗಿದ್ದ ವಾಣಿಜ್ಯ ಗ್ರಾಹಕರಿಗೆ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಶಾಕ್ ನೀಡಿವೆ. ಇಂದಿನಿಂದ (ಸೆಪ್ಟೆಂಬರ್ 1, 2026) ಜಾರಿಗೆ ಬರುವಂತೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ಉದ್ದೇಶಗಳಿಗೆ ಬಳಸುವ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಈ ದರವನ್ನು 9.50 ರೂಪಾಯಿಗಳಿಂದ 11.50 ರೂಪಾಯಿಗಳವರೆಗೆ ಹೆಚ್ಚಿಸಲಾಗಿದ್ದು, ಇಂದಿನಿಂದಲೇ ನೂತನ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾ, ಭುವನೇಶ್ವರ, ಹೈದರಾಬಾದ್ ಮತ್ತು ಪಾಟ್ನಾಗಳಲ್ಲಿ ಈ ಬಾರಿ ಗರಿಷ್ಠ ಮಟ್ಟದ ಬೆಲೆ ಏರಿಕೆ ದಾಖಲಾಗಿದೆ. ದೆಹಲಿ, ಮುಂಬೈ, ಗುರ್‌ಗಾಂವ್, ನೋಯ್ಡಾ, ಚಂಡೀಗಢ ಹಾಗೂ ಲಕ್ನೋ ನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್‌ಗೆ 9.50 ರೂಪಾಯಿಯಷ್ಟು ಹೆಚ್ಚಿಸಲಾಗಿದೆ.

LPG Gas Cylinder Price Hike 19 Kg Commercial Cylinder Rates Increased Across India From Sept 1

ಅಚ್ಚರಿಯ ವಿಚಾರವೆಂದರೆ, ಪಾಟ್ನಾದಲ್ಲಿ ಈ ಸಿಲಿಂಡರ್ ಬೆಲೆ ಬರೋಬ್ಬರಿ 3,000 ರೂಪಾಯಿ ಗಡಿ ದಾಟಿದ್ದು, ದೇಶದಲ್ಲೇ ಇಂದು ಅತಿ ಹೆಚ್ಚು ದರ ಹೊಂದಿರುವ ನಗರವಾಗಿದೆ.

ಮಹಾನಗರಗಳಲ್ಲಿ ಇಂದಿನ ಗ್ಯಾಸ್ ಸಿಲಿಂಡರ್ ಬೆಲೆ

ಬೆಲೆ ಪರಿಷ್ಕರಣೆಯ ನಂತರ,

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ 9.50 ರೂಪಾಯಿ ಏರಿಕೆಯೊಂದಿಗೆ 2,747.50 ರೂ ಗೆ ತಲುಪಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 9.50 ರೂಪಾಯಿ ಏರಿಕೆಯಾಗಿದ್ದು, ಹೊಸ ದರ 2,701 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ ದರವು 10.50 ರೂಪಾಯಿ ಹೆಚ್ಚಳ ಕಂಡು 2,916.50 ರೂಪಾಯಿಗೆ ತಲುಪಿದೆ.

ಅತಿ ಹೆಚ್ಚು ಏರಿಕೆ ಕಂಡಿರುವ ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 11.50 ರೂಪಾಯಿ ಹೆಚ್ಚಳವಾಗಿದ್ದು, 2,884 ರೂಪಾಯಿಗೆ ಮಾರಾಟವಾಗುತ್ತಿದೆ.

ಬೆಂಗಳೂರು ಸೇರಿ ಇತರ ನಗರಗಳಲ್ಲಿನ ಎಲ್‌ಪಿಜಿ ಸಿಲಿಂಡರ್ ದರ

ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ನೆರೆಯ ತಿರುವನಂತಪುರಂನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು ತಲಾ 10 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಪರಿಷ್ಕೃತ ದರ 2,831 ರೂಪಾಯಿ ಆಗಿದ್ದರೆ, ತಿರುವನಂತಪುರಂನಲ್ಲಿ 2,784 ರೂಪಾಯಿ ಆಗಿದೆ.

ಭುವನೇಶ್ವರ ಹಾಗೂ ಹೈದರಾಬಾದ್‌ನಲ್ಲಿ ತಲಾ 11 ರೂಪಾಯಿ ಏರಿಕೆಯೊಂದಿಗೆ ಕ್ರಮವಾಗಿ 2,919 ರೂಪಾಯಿ ಮತ್ತು 2,996 ರೂಪಾಯಿ ತಲುಪಿದೆ.

ಪಾಟ್ನಾದಲ್ಲಿ 11 ರೂಪಾಯಿ ಏರಿಕೆಯಾಗಿ, ಬೆಲೆ 3,029 ರೂಪಾಯಿಗೆ ಜಿಗಿದಿದೆ. ಜೊತೆಗೆ ಗುರ್‌ಗಾಂವ್, ನೋಯ್ಡಾ ಹಾಗೂ ಲಕ್ನೋದಲ್ಲಿ ತಲಾ 9.50 ರೂಪಾಯಿ ಮತ್ತು ಜೈಪುರದಲ್ಲಿ 10.50 ರೂಪಾಯಿ ದರ ಹೆಚ್ಚಳವಾಗಿದೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಯಥಾಸ್ಥಿತಿ

ವಾಣಿಜ್ಯ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದರೂ, ಸಾಮಾನ್ಯ ಜನತೆಗೆ ಸದ್ಯಕ್ಕೆ ಯಾವುದೇ ಆರ್ಥಿಕ ಹೊರೆ ಬಿದ್ದಿಲ್ಲ. 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಸತತ ಮೂರನೇ ತಿಂಗಳು ಗೃಹಬಳಕೆ ಸಿಲಿಂಡರ್ ಬೆಲೆಯನ್ನ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ದೈನಂದಿನ ಅಡುಗೆಗೆ ಗ್ಯಾಸ್ ಬಳಸುವ ಕೋಟ್ಯಂತರ ಗೃಹಿಣಿಯರಿಗೆ ಕೊಂಚ ನಿರಾಳತೆ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+