LPG: ಎಲ್‌ಪಿಜಿ ಸಬ್ಸಿಡಿ ಹೊರೆ; ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೂ ಗ್ರಾಹಕರಿಗೆ ಬಿಗ್ ರಿಲೀಫ್

LPG: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಢೀರ್ ಎದುರಾದ ತೈಲ ದರ ಏರಿಕೆ ಹಾಗೂ ಪೂರೈಕೆಯಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಭಾರತದ ತೈಲ ಮಾರುಕಟ್ಟೆ ಕಂಪನಿಗಳಿಗೆ ಭಾರಿ ನಷ್ಟದ ಬಿಸಿ ತಟ್ಟಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಗ್ರಾಹಕರ ಜೇಬಿಗೆ ಕತ್ತರಿ ಬೀಳದಂತೆ ತಡೆಯಲು ಹೆಣಗಾಡುತ್ತಿರುವ ಸಾರ್ವಜನಿಕ ತೈಲ ಸಂಸ್ಥೆಗಳ 'ಅಂಡರ್-ರಿಕವರಿ' (ಖರೀದಿ ಮತ್ತು ಮಾರಾಟ ಬೆಲೆಯ ನಡುವಿನ ನಷ್ಟ) ಹೊರೆ 2026ರ ಆಗಸ್ಟ್ ಅಂತ್ಯದ ವೇಳೆಗೆ ಬರೋಬ್ಬರಿ ₹62,000 ಕೋಟಿ ಗಡಿ ದಾಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಹೆಚ್ಚಾಗಿದ್ದರೂ, ಭಾರತೀಯ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಪೂರೈಸುತ್ತಿರುವುದೇ ಈ ಬೃಹತ್ ನಷ್ಟಕ್ಕೆ ಮುಖ್ಯ ಕಾರಣವಾಗಿದೆ.

LPG Crisis Oil Companies Face 62 000 Crore Under-Recovery Amid Global Price Surge Know details

ಏನಿದು 'ಅಂಡರ್-ರಿಕವರಿ'?

ತೈಲ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಎಲ್‌ಪಿಜಿಯನ್ನು ಹೆಚ್ಚಿನ ದರದಲ್ಲಿ ಆಮದು ಮಾಡಿಕೊಳ್ಳುತ್ತವೆ. ಆದರೆ ದೇಶಿಯ ಗ್ರಾಹಕರಿಗೆ ಹೊರೆಯಾಗದಂತೆ ರಿಯಾಯಿತಿ ದರದಲ್ಲಿ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತದೆ. ಈ ಖರೀದಿ ವೆಚ್ಚ ಮತ್ತು ಮಾರಾಟ ದರದ ನಡುವಿನ ನಷ್ಟವೇ ಅಂಡರ್-ರಿಕವರಿ. ಸೆಪ್ಟೆಂಬರ್‌ನಲ್ಲಿ ಪ್ರತಿ 14.2 ಕೆಜಿ ಸಿಲಿಂಡರ್ ಮೇಲಿನ ನೇರ ಸಬ್ಸಿಡಿ ಮೊತ್ತ ₹210 ಆಗಿದ್ದರೆ, ಜೂನ್‌ನಲ್ಲಿ ಇದು ಗರಿಷ್ಠ ₹721 ತಲುಪಿತ್ತು.

ಬೆಲೆ ಏರಿಕೆಗೆ ಮುಖ್ಯ ಕಾರಣಗಳೇನು?

ಪಶ್ಚಿಮ ಏಷ್ಯಾದಲ್ಲಿ ಉಂಟಾದ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರಕ್ಕೆ ಎದುರಾದ ಅಡೆತಡೆಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿವೆ. ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಶೇಕಡ 60ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.

ಪಶ್ಚಿಮ ಏಷ್ಯಾದಿಂದ ಆಮದು ಕಡಿಮೆಯಾದ ಕಾರಣ, ಭಾರತವು ಅಮೆರಿಕ ಮತ್ತು ಅಲ್ಜೀರಿಯಾಗಳಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಆಗಸ್ಟ್‌ನಲ್ಲಿ ಭಾರತದ ಎಲ್‌ಪಿಜಿ ಆಮದಿನಲ್ಲಿ ಅಮೆರಿಕದ ಪಾಲು ಶೇಕಡ 50ಕ್ಕಿಂತ ಹೆಚ್ಚಾಗಿತ್ತು. ಆದರೆ ಸುದೀರ್ಘ ಸಮುದ್ರ ಮಾರ್ಗದ ಕಾರಣದಿಂದ ಹಡಗು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಿ ತೈಲ ಕಂಪನಿಗಳಿಗೆ ನಷ್ಟ ಉಂಟಾಯಿತು.

ಸರ್ಕಾರದ ಪರಿಹಾರ ಕ್ರಮಗಳು

* ಎಲ್‌ಪಿಜಿ ದರವನ್ನು ಮಿತಿಯಲ್ಲಿಡಲು ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ 2022-23ನೇ ಹಣಕಾಸು ವರ್ಷದಲ್ಲಿ ₹22,000 ಕೋಟಿ ನೀಡಿದ್ದರೆ, 2025-26 ಮತ್ತು 2026-27ರ ಅವಧಿಗೆ ₹30,000 ಕೋಟಿ ಜಂಟಿ ಪರಿಹಾರ ಒದಗಿಸುತ್ತಿದೆ.

* ದುರುಪಯೋಗ ಮತ್ತು ನಕಲಿ ಸಂಪರ್ಕಗಳನ್ನು ತಡೆಯಲು ಅಕ್ಟೋಬರ್ 1, 2026ರಿಂದ ಸಬ್ಸಿಡಿ ಎಲ್‌ಪಿಜಿ ಮರುಪೂರಣಕ್ಕೆ ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು ಸರ್ಕಾರ ಕಡ್ಡಾಯಗೊಳಿಸಿದೆ.

* ಪ್ರಸ್ತುತ ದೆಹಲಿಯಲ್ಲಿ ಸಾಮಾನ್ಯ ಸಿಲಿಂಡರ್ ಬೆಲೆ ₹942 ಇದ್ದರೆ, ಪ್ರಧಾನಮಂತ್ರಿ ಉಜ್ಜಲ ಯೋಜನೆ (PMUY) ಫಲಾನುಭವಿಗಳಿಗೆ ₹642ಕ್ಕೆ ದೊರೆಯುತ್ತಿದ್ದು, ಬಡ ಕುಟುಂಬಗಳಿಗೆ ರಕ್ಷಣೆ ನೀಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಆಘಾತ ಎದುರಾಗಿದ್ದರೂ, ಕೇಂದ್ರ ಸರ್ಕಾರದ ಸಬ್ಸಿಡಿ ಬೆಂಬಲವು ಗ್ರಾಹಕರನ್ನು ನೇರ ದರ ಏರಿಕೆಯಿಂದ ತಾತ್ಕಾಲಿಕವಾಗಿ ರಕ್ಷಿಸಿದೆ. ಆದರೆ ತೈಲ ಕಂಪನಿಗಳ ಲಾಭದಾಯಕ ಮತ್ತು ಸರ್ಕಾರದ ಬಜೆಟ್ ನಿರ್ವಹಣೆಯ ಮೇಲೆ ಇದು ತೀವ್ರ ಒತ್ತಡ ಹೇರುತ್ತಿದೆ ಎಂದು ಹೇಳಲಾಗುತ್ತಿದೆ.

ಎಚ್ಚರಿಕೆ ಸಂದೇಶ

ಎಲ್‌ಪಿಜಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅಥವಾ ಇಷ್ಟಪಡದ ಗ್ರಾಹಕರಿಗೂ ಗೃಹಬಳಕೆಯ ಅಡುಗೆ ಅನಿಲ ಸಂಪರ್ಕ ಲಭ್ಯವಿರಲಿದೆ. ಆದರೆ ಅಂತಹ ಗ್ರಾಹಕರು ಕಂಪನಿಯ ವೆಬ್‌ಸೈಟ್‌ಗಳು, ಮೊಬೈಲ್ ಆ್ಯಪ್‌ಗಳು, ವಾಟ್ಸಾಪ್ ಚಾಟ್‌ಬಾಟ್‌ಗಳು ಅಥವಾ ಐವಿಆರ್‌ಎಸ್ ಮೂಲಕ ತಮ್ಮ ಆಯ್ಕೆಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇಂತಹ ಕುಟುಂಬಗಳಿಗೆ ಯಾವುದೇ ಸರ್ಕಾರಿ ಸಬ್ಸಿಡಿ ಇಲ್ಲದೆ, ಕೇವಲ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದಲ್ಲಿ ಮಾತ್ರ ಸ್ಥಳೀಯ ಲಭ್ಯತೆಗೆ ಅನುಗುಣವಾಗಿ 5 ಕೆ.ಜಿ ಅಥವಾ 10 ಕೆ.ಜಿ. ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+