• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 02; ಕೋವಿಡ್ ಲಾಕ್‌ಡೌನ್ ಸಂಕಷ್ಟ ಕಾಲದಲ್ಲಿ ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ 2021ರ ಮೇ ತಿಂಗಳಲ್ಲಿ ಒಟ್ಟು 707 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ದೇಶದಾದ್ಯಂತ ಹಲವು ಭಾಗಗಳಲ್ಲಿ ನಿರ್ಬಂಧಗಳು ಮತ್ತು ಅಲ್ಲಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿರುವ ನಡುವೆ ಉತ್ತಮ ಬೆಳವಣಿಗೆ ದಾಖಲಿಸಿದೆ. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕದಲ್ಲಿ ರಾಜ್ಯವ್ಯಾಪಿ ಲಾಕ್‌ಡೌನ್ ಘೋಷಿಸುವ ಮೊದಲೇ, ಟಿಕೆಎಂ ಈಗಾಗಲೇ ಬಿಡದಿಯ ತನ್ನ ಘಟಕದಲ್ಲಿ ಏಪ್ರಿಲ್ 26 ರಿಂದ ಮೇ 14 ರವರೆಗೆ ತನ್ನ ವಾರ್ಷಿಕ ನಿರ್ವಹಣಾ ಶಟ್ಡೌನ್ ಘೋಷಿಸಿತ್ತು.

ಇದು ಬಿಡದಿಯ ಘಟಕದಲ್ಲಿ ಉತ್ಪಾದನಾ ರಹಿತ ದಿನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿತು. ಟಿಕೆಎಂ ಮೇ 2020ರ ತಿಂಗಳಲ್ಲಿ 1639 ಘಟಕಗಳು ಮತ್ತು ಏಪ್ರಿಲ್ 2021ರಲ್ಲಿ 9622 ಘಟಕಗಳ ಸಗಟು ವಹಿವಾಟನ್ನು ವರದಿ ಮಾಡಿತ್ತು. 2021ರ ಮೊದಲ ಐದು ತಿಂಗಳಲ್ಲಿ ಟಿಕೆಎಂನ ಸಂಚಿತ ಸಗಟುಗಳು, ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 24,820 ಯುನಿಟ್ ಗಳಿಗೆ ಹೋಲಿಸಿದರೆ 50,531 ಯುನಿಟ್ ಗಳಾಗಿವೆ, ಆ ಮೂಲಕ 104% ಬೆಳವಣಿಗೆಯನ್ನು ದಾಖಲಿಸಿದೆ.

ಈ ಕುರಿತು ಮಾತನಾಡಿರುವ ಟಿಕೆಎಂನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ, "ಕಳೆದ ತಿಂಗಳು ಬಿಡದಿಯ ನಮ್ಮ ಘಟಕಗಳಲ್ಲಿ ಯಾವುದೇ ಉತ್ಪಾದನೆ ಆಗಿರಲಿಲ್ಲ ಮತ್ತು ದೇಶದ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಲಾಕ್ ಡೌನ್‌ಗಳು ಮತ್ತು ಅಗತ್ಯ ನಿರ್ಬಂಧಗಳಿಂದಾಗಿ ಕನಿಷ್ಠ ಮಾರಾಟಕ್ಕೆ ಈ ಪರಿಸ್ಥಿತಿ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ನಿರ್ಬಂಧಗಳನ್ನು ಘೋಷಿಸುವ ಮೊದಲೇ, ನಾವು ನಮ್ಮ ಯೋಜಿತ ವಾರ್ಷಿಕ ನಿರ್ವಹಣಾ ಶಟ್ಡೌನ್ ನಲ್ಲಿ ಇದ್ದೆವು, ಆ ಮೂಲಕ ಉತ್ಪಾದನಾ ರಹಿತ ದಿನಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ" ಎಂದರು.

"ಒಟ್ಟಾರೆ ಮಾರುಕಟ್ಟೆ ಪರಿಸ್ಥಿತಿ ಮತ್ತು ಗ್ರಾಹಕರ ಭಾವನೆಗಳು ಮೇ 2020ಕ್ಕಿಂತ ಉತ್ತಮವಾಗಿವೆ. ವಾಸ್ತವವಾಗಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, 2021ರ ಜನವರಿಯಿಂದ ಮೇ ವರೆಗೆ ಕ್ಲಾಕ್ ಮಾಡಲಾದ ಸಂಚಿತ ಸಗಟುಗಳಲ್ಲಿ ನಾವು ಶೇ 104ಬೆಳವಣಿಗೆಯನ್ನು ದಾಖಲಿಸಿದ್ದೇವೆ" ಎಂದರು.

ಉತ್ಪಾದನಾ ಕ್ಷೇತ್ರದ ದೃಷ್ಟಿಯಿಂದ ಲಾಕ್‌ಡೌನ್ ಅನ್ನು ಹಿಂತೆಗೆದುಕೊಂಡ ತಕ್ಷಣ ಉತ್ಪಾದನೆ ಪುನರಾರಂಭಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಮತ್ತು ಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಗ್ರಾಹಕರ ಅಗತ್ಯಗಳನ್ನು ಶೀಘ್ರವಾಗಿ ಪೂರೈಸಲು ಇದು ಸಹಕಾರಿಯಾಗಿದೆ.

ಮಾರುಕಟ್ಟೆಗಳು ತೆರೆದ ನಂತರ ಸೋಂಕಿನ ಕಡಿಮೆ ಅಪಾಯ ಮತ್ತು ತೀವ್ರತೆಯನ್ನು ಖಚಿತಪಡಿಸಿಕೊಳ್ಳಲು ಟೊಯೋಟಾ ಉದ್ಯೋಗಿಗಳಿಗೆ ಮತ್ತು ನಮ್ಮ ಡೀಲರ್ ಸಿಬ್ಬಂದಿಗೆ ಲಸಿಕೆ ಹಾಕುವತ್ತ ಗಮನ ಹರಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗಿಗಳು ಸುರಕ್ಷಿತವಾಗಿರಬೇಕು ಎಂದು ಬಯಸಲಾಗುತ್ತಿದೆ.

English summary
TOYOTA Kirloskar Motors Plant at Bidadi, Ramanagara recorded 707 unit sales in the time of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X