ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಕೆ ಕಾಣದ ಎಲ್‌ಐಸಿ ಷೇರು ಬೆಲೆ: 669 ರೂಪಾಯಿಗೆ ಕುಸಿತ

|
Google Oneindia Kannada News

ದೆಹಲಿ, ಜೂನ್ 13: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಕುಸಿತ ಮುಂದುವರೆದಿದೆ. ಷೇರು ಮಾರುಕಟ್ಟೆ ವಾರದ ಆರಂಭದ ದಿನವೇ ಎಲ್‌ಐಸಿ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ.

ಸೋಮವಾರ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳು ಹೊಸ ಸಾರ್ವಕಾಲಿಕ ಕನಿಷ್ಠ 667.50 ರುಪಾಯಿಗೆ ಕುಸಿದವು ಮತ್ತು ದಿನದಾಂತ್ಯಕ್ಕೆ 669.50 ರುಪಾಯಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಷೇರಿನ ಐಪಿಒ ವಿತರಣೆ ಬೆಲೆ 949 ರೂಪಾಯಿಗಳಿಗೆ ಹೋಲಿಸಿದರೆ ಸದ್ಯದ ಬೆಲೆ ಶೇಕಡಾ 30ಕ್ಕಿಂತ ಕಡಿಮೆಯಾಗಿದೆ.

ಎಲ್‌ಐಸಿ ಐಪಿಒ: ಮೊದಲ ದಿನವೇ ಷೇರು ಕೊಳ್ಳಲು ಪೈಪೋಟಿ ಎಲ್‌ಐಸಿ ಐಪಿಒ: ಮೊದಲ ದಿನವೇ ಷೇರು ಕೊಳ್ಳಲು ಪೈಪೋಟಿ

ಎಲ್‌ಐಸಿಯ ಷೇರು ಮೌಲ್ಯದಲ್ಲಿ ತಾತ್ಕಾಲಿಕ ಕುಸಿತದ ಬಗ್ಗೆ ಆತಂಕವಾಗಿದೆ ಮತ್ತು ವಿಮಾದಾರರ ಆಡಳಿತವು ಈ ಅಂಶಗಳನ್ನು ಪರಿಶೀಲಿಸುತ್ತದೆ ಮತ್ತು ಷೇರುದಾರರ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿಕೆ ನೀಡಿತ್ತು. ಸರ್ಕಾರದ ಭರವಸೆ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಮಾರುಕಟ್ಟೆಯಲ್ಲಿ ಕುಸಿತ ಮುಂದುವರೆಸಿದೆ.

"ಎಲ್‌ಐಸಿ ಷೇರು ಬೆಲೆಯಲ್ಲಿನ ತಾತ್ಕಾಲಿಕ ಕುಸಿತದ ಬಗ್ಗೆ ನಾವು ತುಂಬಾ ಚಿಂತಿತರಾಗಿದ್ದೇವೆ. ಜನರು ಎಲ್‌ಐಸಿಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಎಲ್‌ಐಸಿ ಆಡಳಿತವು ಈ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತದೆ ಮತ್ತು ಷೇರುದಾರರ ಮೌಲ್ಯವನ್ನು ಹೆಚ್ಚಿಸುತ್ತದೆ" ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಶುಕ್ರವಾರ ಹೇಳಿಕೆ ನೀಡಿದ್ದರು.

LIC IPO: ಎಲ್‌ಐಸಿ ಐಪಿಒ ತಡೆಗೆ ಬಾಂಬೆ ಹೈಕೋರ್ಟ್ ನಕಾರLIC IPO: ಎಲ್‌ಐಸಿ ಐಪಿಒ ತಡೆಗೆ ಬಾಂಬೆ ಹೈಕೋರ್ಟ್ ನಕಾರ

1.7 ಲಕ್ಷ ಕೋಟಿ ಮೌಲ್ಯ ಕುಸಿತ

1.7 ಲಕ್ಷ ಕೋಟಿ ಮೌಲ್ಯ ಕುಸಿತ

ಮೇ 17ರಂದು ಷೇರುಮಾರುಕಟ್ಟೆಗೆ ಕಾಲಿಟ್ಟ ಎಲ್‌ಐಸಿ ಷೇರುಗಳ ಬೆಲೆಯಲ್ಲಿ ನಾಲ್ಕು ಬಾರಿ ಮಾತ್ರ ಏರಿಕೆ ದಾಖಲಿಸಿದೆ. ಮಿಕ್ಕಿದ ಅಷ್ಟೂ ದಿನಗಳು ಷೇರುಗಳ ಮೌಲ್ಯ ಕುಸಿತ ಕಂಡಿದೆ.

ದೇಶದ ಅತಿದೊಡ್ಡ ವಿಮಾದಾರ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಸೋಮವಾರ 4.3 ಲಕ್ಷ ಕೋಟಿ ರುಪಾಯಿಗೆ ಕುಸಿದಿದೆ. ಎಲ್‌ಐಸಿ ಪಟ್ಟಿಯ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1.7 ಲಕ್ಷ ಕೋಟಿ ರುಪಾಯಿ ಕಳೆದುಕೊಂಡಿದೆ. 949 ರುಪಾಯಿ ವಿತರಣೆಯ ಬೆಲೆಯಲ್ಲಿ ಎಲ್‌ಐಸಿ ಷೇರು ವಿತರಣೆ ಮಾಡಿತ್ತು.

ಸೆನ್ಸೆಕ್ಸ್ 1456 ಅಂಕ ಕುಸಿತ

ಸೆನ್ಸೆಕ್ಸ್ 1456 ಅಂಕ ಕುಸಿತ

ಸೆನ್ಸೆಕ್ಸ್ 1,456.74 ಪಾಯಿಂಟ್‌ಗಳ ಕುಸಿತದೊಂದಿಗೆ 52,846.70 ಕ್ಕೆ ದಿನದ ಅಂತ್ಯಕ್ಕೆ 52,527.08 ರ ದಿನದ ಅಂತ್ಯಕ್ಕೆ ಕನಿಷ್ಠವನ್ನು ಮುಟ್ಟಿತು. ನಿಫ್ಟಿ 427.40 ಪಾಯಿಂಟ್‌ಗಳು ಅಥವಾ 2.64% ನಷ್ಟು ಕುಸಿದು 15,774.40 ಕ್ಕೆ ತಲುಪಿದೆ. ಸುಮಾರು 650 ಷೇರುಗಳ ಬೆಲೆ ಹೆಚ್ಚಳವಾದರೆ, 2759 ಷೇರುಗಳು ಕುಸಿತ ಕಂಡವು ಮತ್ತು 117 ಷೇರುಗಳು ತಟಸ್ಥವಾಗಿದ್ದವು.

ಬ್ಯಾಂಕ್, ಬಂಡವಾಳ ಸರಕುಗಳು, ಆಟೋ, ಐಟಿ, ಲೋಹ, ಐಟಿ, ರಿಯಾಲ್ಟಿ, ಪಿಎಸ್‌ಯು ಬ್ಯಾಂಕ್, ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ 2-3% ನಷ್ಟು ಇಳಿಕೆಯೊಂದಿಗೆ ಎಲ್ಲಾ ವಲಯದ ಸೂಚ್ಯಂಕಗಳು ಕನಿಷ್ಠ ಬೆಲೆಯಲ್ಲಿ ಕೊನೆಗೊಂಡಿವೆ. ಮಿಡ್‌ಕ್ಯಾಪ್‌ಗಳು ಮತ್ತು ಸ್ಮಾಲ್‌ಕ್ಯಾಪ್‌ಗಳು ಕುಸಿತ ದಾಖಲಿಸಿವೆ.

ಡಾಲರ್ ಎದುರು ಕುಸಿದ ರುಪಾಯಿ

ಡಾಲರ್ ಎದುರು ಕುಸಿದ ರುಪಾಯಿ

ಒಂದೆಡೆ ಷೇರು ಮಾರುಕಟ್ಟೆ ಕುಸಿತ ಕಂಡರೆ, ಮತ್ತೊಂದೆಡೆ ಡಾಲರ್ ಎದುರು ರುಪಾಯಿ ಮೌಲ್ಯ ಕೂಡ ಕುಸಿತ ಕಂಡಿತು. ಸೋಮವಾರ ಡಾಲರ್ ಎದುರು 20 ಮೌಲ್ಯ ಕಳೆದುಕೊಂಡು, ಸಾರ್ವಕಾಲಿಕ ಕನಿಷ್ಠ ಮಟ್ಟವಾದ 78.13 ರುಪಾಯಿಗೆ ಕುಸಿದಿದೆ. ದೇಶೀಯ ಷೇರುಗಳ ಕುಸಿತ ಮತ್ತು ವಿದೇಶಿ ಬಂಡವಾಳದಾರರ ನಿರಾಸಕ್ತಿ ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ.

ಒಂದೇ ದಿನ ಕರಗಿದ 6.65 ಲಕ್ಷ ಕೋಟಿ ಸಂಪತ್ತು

ಒಂದೇ ದಿನ ಕರಗಿದ 6.65 ಲಕ್ಷ ಕೋಟಿ ಸಂಪತ್ತು

ಸೆನ್ಸೆಕ್ಸ್ ಕುಸಿತದ ಪರಿಣಾಮ ಹೂಡಿಕೆದಾರರ 6.65 ಲಕ್ಷ ಕೋಟಿಗೂ ಅಧಿಕ ಸಂಪತ್ತು ನಷ್ಟವಾಗಿದೆ. ಶುಕ್ರವಾರ ಕೂಡ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು, ಎರಡು ದಿನಗಳಲ್ಲಿ ಹೂಡಿಕೆದಾರರ 9.75 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

ಟೆಕ್ ಮಹಿಂದ್ರಾ, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫಿನ್‌ ಸರ್ವ್, ಬಜಾಜ್ ಫೈನಾನ್ಸ್, ಹಿಂಡಲ್ಕೋ ಇಂಡಸ್ಟ್ರೀಸ್ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಮತ್ತೊಂದೆಡೆ ನೆಸ್ಲೆ ಇಂಡಿಯಾ, ಬಜಾಜ್ ಆಟೋ ಷೇರುಗಳು ಲಾಭ ಗಳಿಸಿದವು.

English summary
Life Insurance Corporation (LIC) Shares have continued to decline. LIC shares fell sharply on the opening day of the stock market week. Sensex Crashes 1456 Points, Investors Lost Rs 6.65 Lakh Crore on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X