60ನೇ ವಯಸ್ಸಿನಲ್ಲಿ ಬಿಸಿನೆಸ್‌ ಶುರು ಮಾಡಿ 23,000 ಕೋಟಿ ಓಡೆಯನಾದ LIC ಏಜೆಂಟ್

ನವದೆಹಲಿ, ಆಗಸ್ಟ್‌ 11: ವಯಸ್ಸಿದ್ದಾಗಲೇ ಶ್ರಮಪಟ್ಟು ದುಡಿದು ಹಣ ಮಾಡಬೇಕು ಎಂಬ ಟ್ರೆಂಟ್‌ ಈಗ ಬದಲಾಗುತ್ತಿದೆ. ಬಿಸಿನೆಸ್‌ ಮಾಡಲು ಈಗ ವಯಸ್ಸಿನ ಮಿತಿ ಹಾಕಿಕೊಳ್ಳಬೇಕಿಲ್ಲ. ಅಂತಹ ಮೇರು ಉದಾಹರಣೆ ಇಲ್ಲಿದೆ.

ಎಲ್‌ಐಸಿ ಏಜೆಂಟ್‌ ಆಗಿದ್ದ ವ್ಯಕ್ತಿಯೊಬ್ಬರು ತಮ್ಮ 60 ವರ್ಷ ವಯಸ್ಸಿನಲ್ಲಿ ಕಂಪೆನಿಯನ್ನು ಆರಂಭ ಮಾಡಿ ಈಗ ಬರೋಬ್ಬರಿ 23,000 ಕೋಟಿ ಕಂಪೆನಿಯ ಮಾಲೀಕನಾಗಿ ಯಶಸ್ಸು ಸಾಧಿಸಿದ್ದಾರೆ. ಅವರೇ ಭಾರತದ ಹಿರಿಯ ಬಿಲಿಯನೇರ್ 92 ವರ್ಷ ವಯಸ್ಸಿನ ಲಚ್ಮನ್ ದಾಸ್ ಮಿತ್ತಲ್.

lic-agent-who-started-business

ಭಾರತದ ಹಿರಿಯ ಬಿಲಿಯನೇರ್ 92 ವರ್ಷ ವಯಸ್ಸಿನ ಲಚ್ಮನ್ ದಾಸ್ ಮಿತ್ತಲ್ ಅವರು 2.5 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಭಾರತದಲ್ಲಿ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಕ ಸೋನಾಲಿಕಾ ಗ್ರೂಪ್, ಲಚ್ಮನ್ ದಾಸ್ ಮಿತ್ತಲ್ ಅವರ ಮಾಲೀಕತ್ವದಲ್ಲಿ ನಡೆಸಲ್ಪಡುತ್ತಿದೆ.

ಫೋರ್ಬ್ಸ್ 2023 ರ ಪಟ್ಟಿಯ ಪ್ರಕಾರ, 99 ವರ್ಷ ವಯಸ್ಸಿನ ಅತ್ಯಂತ ಹಳೆಯ ಬಿಲಿಯನೇರ್ ಎನಿಸಿಕೊಂಡಿದ್ದವರು ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ. ಆದರೆ ದುರದೃಷ್ಟವಶಾತ್ ಕೇಶುಬ್ ಮಹೀಂದ್ರಾ ಅವರು ಏಪ್ರಿಲ್ 12 ರಂದು ನಿಧನರಾದರು.

ಲಚ್ಮನ್ ದಾಸ್ ಮಿತ್ತಲ್ ಅವರು ರೋಚಕ ಜೀವನ ಕಥೆಯನ್ನು ಹೊಂದಿದ್ದಾರೆ. ಜೀವನದಲ್ಲಿ ಯಶಸ್ವಿಯಾಗಲು ಸಾಕಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದಾರೆ. 60ನೇ ವಯಸ್ಸಿನಲ್ಲಿ ತಮ್ಮ ಸಂಸ್ಥೆಯನ್ನು ಪ್ರಾರಂಭಿಸಿದ ಲಚ್ಮನ್ ದಾಸ್ ಮಿತ್ತಲ್ ಅವರು ಒಮ್ಮೆ ಎಲ್ಐಸಿ ಏಜೆಂಟ್ ಆಗಿದ್ದವರು. ಅವರು 1996 ರಲ್ಲಿ ಟ್ರಾಕ್ಟರ್‌ಗಳನ್ನು ತಯಾರಿಸಲು ಪ್ರಾರಂಭಿಸಿ ಮತ್ತು ನಂತರ ಸೋನಾಲಿಕಾ ಟ್ರಾಕ್ಟರ್‌ಗಳನ್ನು ಸ್ಥಾಪಿಸಿದರು.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೋನಾಲಿಕಾ ಟ್ರಾಕ್ಟರ್‌ಗಳು ಗಣನೀಯ ಪ್ರಮಾಣದ ಉತ್ಪಾದನಾ ಕಾರ್ಖಾನೆಯನ್ನು ಹೊಂದಿದೆ. ಸೋನಾಲಿಕಾ ಗ್ರೂಪ್ ಐದು ವಿಭಿನ್ನ ರಾಷ್ಟ್ರಗಳಲ್ಲಿ ಕಾರ್ಖಾನೆಗಳನ್ನು ಈಗ ಹೊಂದಿದೆ ಮತ್ತು ಇದು 120 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುತ್ತದೆ.

ಸರ್ಕಾರಿ ಕಾಲೇಜಿನಿಂದ ಪದವಿ ಪಡೆದ ನಂತರ ಲಚ್ಮನ್ ದಾಸ್ ಮಿತ್ತಲ್ ಅವರು ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಕಾರ್ಯಕ್ರಮಕ್ಕೆ ಸೇರಿಕೊಂಡರು. ಅವರು ಎಂಎ ಇಂಗ್ಲಿಷ್ ಚಿನ್ನದ ಪದಕವನ್ನು ಪಡೆದವರು. ಲಚ್ಮನ್ ದಾಸ್ ಮಿತ್ತಲ್ ಅವರು 1955 ರಲ್ಲಿ ಎಲ್ಐಸಿಗೆ ಸೇರಿದರು ಮತ್ತು ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಗಳಂತೆ ಅವರು ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಉಳಿತಾಯಕ್ಕಾಗಿ ಮೀಸಲಿಡಲು ಪ್ರಾರಂಭಿಸಿದರು.

ಲಚ್ಮನ್ ದಾಸ್ ಮಿತ್ತಲ್ ಅವರ ಎಲ್ಲಾ ಉಳಿತಾಯವನ್ನು ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಸೈಡ್ ವೆಂಚರ್ ಅನ್ನು ಪ್ರಾರಂಭಿಸಲು ಬಳಸಲಾಯಿತು, ಆದರೆ ಉದ್ಯಮವು ವಿಫಲವಾಯಿತು, ಲಚ್ಮನ್ ದಾಸ್ ಮಿತ್ತಲ್ ದಿವಾಳಿಯಾಗಿದ್ದರು. ಆದರೆ ಅವರು ಪಟ್ಟುಹಿಡಿದ ಅವರು ಪ್ರಯತ್ನ ಮಾಡಿ ಕೆಲವು ವರ್ಷಗಳ ನಂತರ, ಅವರು ಅಂತಿಮವಾಗಿ ಯಶಸ್ಸನ್ನು ಪಡೆದರು.

ಲಚ್ಮನ್ ದಾಸ್ ಮಿತ್ತಲ್ ಅವರ ಪುತ್ರರಾದ ಅಮೃತ್ ಸಾಗರ್ ಮಿತ್ತಲ್ ಮತ್ತು ದೀಪಕ್ ಮಿತ್ತಲ್ ಅವರು ಈಗ ಸೋನಾಲಿಕಾ ಗ್ರೂಪ್ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾರೆ. ಲಚ್ಮನ್ ದಾಸ್ ಮಿತ್ತಲ್ ಅವರು ತುಂಬಾ ಬಿಡುವಿಲ್ಲದ ವೃತ್ತಿಪರ ಜೀವನವನ್ನು ಮುಂದುವರೆಸುತ್ತಾರೆ ಮತ್ತು ಪ್ರತಿ ದಿನವೂ ಕೆಲಸಕ್ಕೆ ಹಾಜರಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+