ಲೆವಿಸ್‍ನಿಂದ ದೀಪಿಕಾ ಪಡುಕೋಣೆ ಸಹಯೋಗ, ಅ.8ಕ್ಕೆ ಹೊಸ ಸಂಗ್ರಹ ಬಿಡುಗಡೆ
ಬೆಂಗಳೂರು, ಅಕ್ಟೋಬರ್ 07: ಲೆವಿಸ್ ಸ್ಟೈಲ್‍ಐಕಾನ್ ಮತ್ತು ಬ್ರಾಂಡ್ ರಾಯಭಾರಿ ದೀಪಿಕಾ ಪಡುಕೋಣೆ ಅವರೊಂದಿಗೆ ಸಹಯೋಗವನ್ನು ಪ್ರಾರಂಭಿಸಿದೆ. ಲೆವಿಸ್‍ಎಕ್ಸ್ ದೀಪಿಕಾ ಪಡುಕೋಣೆ ಈ ಐಕಾನ್‍ನ ಫ್ಯಾಷನ್ ಸಂವೇದನೆ ಮತ್ತು ವಿಶ್ವಾಸಾರ್ಹ ಸ್ಟೈಲ್‍ಅನ್ನು ವ್ಯಾಖ್ಯಾನಿಸುತ್ತದೆ.
ಲೆವಿಸ್‍ನ ವಿಶ್ವಾಸಾರ್ಹ ಸ್ಟೈಲ್‍ನಲ್ಲಿ ಬೇರೂರಿರುವ ಮತ್ತು ಪಡುಕೋಣೆಯ ಸಿಗ್ನೇಚರ್ ಸ್ಟೈಲ್‍ನೊಂದಿಗೆ ಅಪ್‍ಡೇಟ್ ಆಗಿರುವ ಈ ಪ್ರಾರಂಭಿಕ ಲೆವಿಸ್‍ಎಕ್ಸ್ ದೀಪಿಕಾ ಪಡುಕೋಣೆ ಸಹಯೋಗವು ಹೊಸತನ ಮತ್ತು ವಿಶ್ವಾಸವನ್ನು ಹೊರಹೊಮ್ಮಿಸುತ್ತಿದೆ. ಈ ಸಂಗ್ರಹವು ಲೆವಿಸ್ ಕ್ಲಾಸಿಕ್ಸ್ ಅನ್ನು ತನ್ನ ಶ್ರೇಣಿಯ ಜೀನ್ಸ್ ಮತ್ತು ಡೆನಿಮ್ಸ್ ಮೂಲಕ ಮರುಕಲ್ಪಿಸುತ್ತಿದ್ದು ಪಡುಕೋಣೆಯ ಅಚ್ಚುಮೆಚ್ಚಿನ ಅಥ್ಲೀಷರ್ ಪೀಸ್‍ಗಳು, ಎಡ್ಜಿ ಫಾಕ್ಸ್ ಲೆದರ್ ಪ್ಯಾಂಟ್‍ಗಳು ಮತ್ತುದೊಡ್ಡ ಗಾತ್ರದ ಶರ್ಟ್‍ಗಳನ್ನು ಪರಿಚಯಿಸುತ್ತಿವೆ.
''ಈ ಪ್ರಯತ್ನವು ನಮ್ಮ ಮೊಟ್ಟಮೊದಲ ಲೆವಿಸ್ ಸಹಯೋಗವಾಗಿದ್ದುಅದು ನನ್ನ ವೈಯಕ್ತಿಕ ಸ್ಟೈಲ್‍ನ ವಿಶ್ವಾಸಾರ್ಹ ಪ್ರಾತಿನಿಧ್ಯವಾಗಿದೆ. ಮತ್ತು ನಾವು ಈ ದೃಷ್ಟಿಕೋನಕ್ಕೆ ಬದ್ಧಳಾಗಿರುವುದರಲ್ಲಿ ನಂಬಿಕೆ ಇರಿಸಿದ್ದೇನೆ'' ಎಂದು ಪಡುಕೋಣೆ ಹೇಳಿದರು.

ದೊಡ್ಡಗಾತ್ರದ ಶರ್ಟ್‍ಗಳ ಶ್ರೇಣಿ
ಈ ಸಹಯೋಗವು ಪಡುಕೋಣೆಯ ಅಲ್ಟ್ರಾ-ಕ್ಯಾಶುಯಲ್ ಸ್ಟೈಲ್‍ಗೆ ಜೀವ ತರುತ್ತಿದ್ದು ಲಾಂಗ್ ವಾರ್ಸಿಟಿ ಜಾಕೆಟ್ಸ್, ಕೋ-ಆರ್ಡ್ ಸ್ವೆಟ್ ಸೂಟ್ಸ್, ಕ್ರಾಪ್-ಟಾಪ್ಸ್ ಮತ್ತು ಬ್ರೇಸ್‍ಲೆಟ್ಸ್ ಒಳಗೊಂಡಿವೆ. ನೀವು ಎಡ್ಜಿ ಫಾಕ್ಸ್ ಲೆದರ್ ಪ್ಯಾಂಟ್ಸ್ ಮತ್ತುಆಲ್-ಡೆನಿಮ್‍ಜಂಪ್‍ಸೂಟ್ ಪಡೆಯಬಹುದು. ಇದು ಆಧುನಿಕ ಮತ್ತುಅಪ್‍ಡೇಟ್ ಆದ ಲೆವಿಸ್‍ಡೆನಿಮ್ಸ್ ನಿರೂಪಣೆಗಳನ್ನು ಕಾಣಬಹುದು, ಹೊಸ 70ರ ದಶಕದಿಂದ ಸ್ಫೂರ್ತಿ ಪಡೆದ ಹೈ ವೇಸ್ಟ್ ಜೀನ್ಸ್ ಮತ್ತುಕಟ್ ಅಂಡ್ ಸ್ಯೂ ವೈಡ್ ಲೆಗ್ ಸಿಲ್ಹೌಟ್ಸ್ ಅನ್ನು ಹೆಚ್ಚು ಉದ್ದದ ಅಥವಾ ಕ್ರಾಪ್ಡ್ ಟ್ರಾಕರ್ ಜಾಕೆಟ್‍ಗಳೊಂದಿಗೆ ಧರಿಸಬಹುದು. ದೊಡ್ಡಗಾತ್ರದ ಶರ್ಟ್‍ಗಳ ಶ್ರೇಣಿಯಲ್ಲಿ ಸಾಫ್ಟ್ ರೋಮ್ಯಾಂಟಿಕ್ ಟಾಪ್ಸ್ ಆಗ್ರ್ಯಾಂಜಾ ಸ್ಲೀವ್ಸ್, ಈಸಿ ಗ್ರಾಫಿಕ್ ಟಿ-ಶರ್ಟ್ಸ್ ಮತ್ತು ಎಲಿವೇಟೆಡ್ ಶರ್ಟ್ಸ್ ಗಳನ್ನು ಹೊಂದಿದೆ. ಒಟ್ಟಾರೆ ಈ ಸಂಗ್ರಹವು ಯಾವುದೇ ವಾರ್ಡ್‍ರೋಬ್‍ನಲ್ಲಿಎದ್ದುಕಾಣುವ ಉತ್ತಮ ಶ್ರೇಣಿ ಉಡುಪುಗಳನ್ನು ಹೊಂದಿದೆ.

ಲೆವಿಸ್‍ಗೆ ಅದು ಅತ್ಯಂತ ಐಕಾನಿಕ್
''ಲೆವಿಸ್‍ಗೆ ಅದು ಅತ್ಯಂತ ಐಕಾನಿಕ್ ಆದರೆ ಪರ್ಸನಲ್ ಆಗಿರುವ ದೀಪಿಕಾ ಪಡುಕೋಣೆ ಬ್ರಾಂಡ್‍ರಾಯಭಾರಿಯಾಗಿರುವುದು ನಮಗೆ ಥ್ರಿಲ್ ಉಂಟು ಮಾಡಿದೆ. ಲೆವಿಸ್ ಸದಾ 'ವಿಶ್ವಾಸಾರ್ಹ ಸ್ವಯಂ-ಅಭಿವ್ಯಕ್ತಿ' ಯಲ್ಲಿ ನಂಬಿಕೆ ಇರಿಸುತ್ತದೆ ಮತ್ತು ಈ ಸಹಯೋಗ ಅದನ್ನೇ ಮಾಡಿದೆ. ನಾವು ದೀಪಿಕಾ ಜೊತೆಯಲ್ಲಿ ಕೆಲಸ ಮಾಡಲು ಬಯಸಿದ್ದು ಅವರ ಐಕಾನಿಕ್ ಸ್ಟೈಲ್‍ನ ಸಂವೇದನೆಗೆ ಮತ್ತುಗ್ರಾಹಕರ ಮೇಲೆ ಅದರ ಪ್ರಭಾವಕ್ಕಾಗಿ. ಬಣ್ಣಗಳು, ಬಟ್ಟೆಗಳು ಮತ್ತು ಸಿಲ್ಹೌಟ್‍ಗಳನ್ನು ಆಕೆ ಅರ್ಥ ಮಾಡಿಕೊಂಡಿರುವುದು ವಿಶಿಷ್ಟವಾಗಿದೆ ಮತ್ತುಅತ್ಯಂತ ವೈಯಕ್ತಿಕವಾಗಿದೆ. ಈ ಸಹಯೋಗದಿಂದ ನಾವು ಹೊಸ ಉಡುಪುಗಳು, ಫಿನಿಷ್‍ಗಳು ಮತ್ತು ಫಿಟ್‍ಗಳ ಸೇರ್ಪಡೆ ಕಾಣುತ್ತಿದ್ದೇವೆ. ಅಥ್ಲೀಷರ್, ಫಾಕ್ಸ್ ಲೆದರ್ ಪ್ಯಾಂಟ್ಸ್, ಲಾಂಗ್ ವಾರ್ಸಿಟಿ ಜಾಕೆಟ್‍ಗಳು ಮತ್ತು ದೊಡ್ಡಗಾತ್ರದ ಶರ್ಟ್‍ಗಳ ಬಿಡುಗಡೆಯು ಗೊತ್ತಿಲ್ಲದ ವಸ್ತ್ರಗಳ ಕ್ಷೇತ್ರವನ್ನು ಆವಿಷ್ಕರಿಸಲು ಮತ್ತು ಹೊಸ ಫ್ಯಾಷನ್ ಗ್ರಾಹಕರಿಗೆ ನಿರೂಪಿಸಿಕೊಳ್ಳಲು ನಮಗೆ ಮಾರ್ಗ ಸೂಚಿಸಿದೆ'' ಎಂದು ಲೆವಿಸ್‍ನ ದಕ್ಷಿಣಏಷ್ಯಾ, ಮಧ್ಯಪ್ರಾಚ್ಯ ಮತ್ತುಆಫ್ರಿಕಾದ ಎಸ್‍ವಿಪಿ ಮತ್ತುಎಂ.ಡಿ. ಸಂಜೀವ್ ಮೊಹಂತಿ ಹೇಳಿದರು.

ಲೆವಿಸ್‍ನ ಬದ್ಧತೆಗೆ ಪೂರಕವಾಗಿದೆ
ಲೆವಿಸ್‍ಎಕ್ಸ್ ದೀಪಿಕಾ ಪಡುಕೋಣೆ ಸಹಯೋಗವು ಜವಾಬ್ದಾರಿಯುತವಾಗಿ ಸುಸ್ಥಿರತೆಗೆ ಲೆವಿಸ್‍ನ ಬದ್ಧತೆಗೆ ಪೂರಕವಾಗಿದೆ. ಸಹಯೋಗದ ಶೇ.60ರಷ್ಟು ಶ್ರೇಣಿಯು ಶೇ.100ರಷ್ಟು ಸುಸ್ಥಿರವಾಗಿ ಪಡೆದಿದ್ದು ನೈತಿಕವಾಗಿ ಉತ್ಪಾದಿಸಲಾಗಿದೆ. ಸಾವಯವ ಹತ್ತಿಯನ್ನು ಹೊಂದಿದ ಮರದ ಪಲ್ಪ್ ನಿಂದ ತಯಾರಿಸಲಾದ ಅತ್ಯಂತ ಮೃದು ಟೆನ್ಸೆಲ್, ಹತ್ತಿಯಾಗಿಸಿದ ಸೆಣಬು ಮತ್ತು ಡೆನಿಮ್‍ಅನ್ನು ಬ್ರಾಂಡ್‍ನ ವಾಟರ್ ಲೆಸ್ ತಂತ್ರಜ್ಞಾನದಿಂದ ಉತ್ಪಾದಿಸಲಾಗುತ್ತದೆ, ಈ ಶ್ರೇಣಿಯು ಗ್ರಾಹಕರಿಗೆ ಸುಸ್ಥಿರತೆಯು ಮುಂಚೂಣಿಯಲ್ಲಿರುವ ಪ್ರಕಟವಾಗುತ್ತದೆ.
ಲೆವಿಸ್‍ಎಕ್ಸ್ ದೀಪಿಕಾ ಪಡುಕೋಣೆಯ ಸಹಯೋಗವು ಎಲ್ಲ ಲೆವಿಸ್‍ರೀಟೇಲ್ ಮಳಿಗೆಗಳು, ಲೆವಿ.ಇನ್ ಮತ್ತುಆಯ್ದಇ-ಕಾಮರ್ಸ್ ಪ್ಲಾಟ್‍ಫಾರಂಗಳಲ್ಲಿ ಅಕ್ಟೋಬರ್ 8, 2021ರಿಂದ ಲಭ್ಯ.

ದೀಪಿಕಾ ಅವರ ಮುಂಬರುವ ಸಿನಿಮಾ
ದೀಪಿಕಾ ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ, ರಣ್ವೀರ್ ಸಿಂಗ್ ನಟಿಸಿರುವ '83' ಚಿತ್ರದಲ್ಲಿ ದೀಪಿಕಾ ಸಣ್ಣದೊಂದು ಪಾತ್ರ ಮಾಡಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ನಟಿಸಿದ್ದರೆ, ಕಪಿಲ್ ದೇವ್ ಪತ್ನಿ ಪಾತ್ರದಲ್ಲಿ ದೀಪಿಕಾ ಅಭಿನಯಿಸಿದ್ದಾರೆ. ಹೃತಿಕ್ ರೋಷನ್ ಜೊತೆ 'ಫೈಟರ್' ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಶಾರೂಖ್ ಖಾನ್ ಜೊತೆ 'ಪಠಾಣ್' ಚಿತ್ರದಲ್ಲಿಯೂ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ಹಾಗೂ ಪ್ರಭಾಸ್-ನಾಗ್ ಅಶ್ವಿನ್ ಜೋಡಿಯ ಚಿತ್ರದಲ್ಲಿ ದೀಪಿಕಾ ಬಣ್ಣ ಹಚ್ಚಲಿದ್ದಾರೆ ಎಂದು ಫಿಲ್ಮಿಬೀಟ್ ವರದಿ ಮಾಡಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications