KTM 250: ಹೊಸ ಅಡ್ವೆಂಚರ್ ಮಾಡೆಲ್ ಬೈಕ್, ಬೆಲೆ ಎಷ್ಟು?

ನವದೆಹಲಿ, ನವೆಂಬರ್ 21: ಯುವ ಜನತೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಬಜಾಜ್ ಆಟೋದ ಕೆಟಿಎಂ ಬೈಕ್‌ನ ಹೊಸ ಮಾಡೆಲ್ ಬಿಡುಗಡೆಯಾಗಿದ್ದು, KTM 250 CC ಅಡ್ವೆಂಚರ್ ಬೈಕ್ ಅನಾವರಣಗೊಂಡಿದೆ. ಬಜಾಜ್ ಕಂಪನಿಯ ಈ ಹೊಸ ಬೈಕ್ ಅನ್ನು 2,48,256 ರೂಪಾಯಿ (ಎಕ್ಸ್‌ಶೋರೂಂ ದೆಹಲಿ) ಗೆ ಬಿಡುಗಡೆ ಮಾಡಿದೆ. ಆಸಕ್ತ ಖರೀದಿದಾರರು ದೇಶಾದ್ಯಂತ ಶೋ ರೂಂಗಳ ಮೂಲಕ ಹೊಸ ಕೆಟಿಎಂ 250 ಅಡ್ವೆಂಚರ್ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಕಂಪನಿಯ ಹೇಳಿಕೆಯ ಪ್ರಕಾರ, ಭಾರತದಲ್ಲಿ ಮೋಟಾರ್‌ಸೈಕಲ್‌ಗಳ ಸಾಹಸ ಮನೋಬಲವನ್ನು ಆಕರ್ಷಿಸುವ ಸಲುವಾಗಿ ಕೆಟಿಎಂ 250 ಅಡ್ವೆಂಚರ್ ಬೈಕ್ ಅನ್ನು ಉತ್ಪಾದಿಸಲಾಗಿದೆ. "ಕೆಟಿಎಂ 250 ಅಡ್ವೆಂಚರ್ ಜಗತ್ತಿನಲ್ಲಿ ಸಾಹಸ ಪ್ರವೃತ್ತಿಯ ಗ್ರಾಹಕರನ್ನು ಉತ್ತೇಜಿಸುವ ಮೂಲಕ (ಕೆಟಿಎಂ ಅಡ್ವೆಂಚರ್) ಫ್ರ್ಯಾಂಚೈಸ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ" ಎಂದು ಅದು ಹೇಳಿದೆ.

ಕೆಟಿಎಂ 250 ಬೈಕ್, 248 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ ಮತ್ತು ಇದು 30 ಎಚ್‌ಪಿ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಆರು ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

KTM 250: New Adventure Bike Launch; Price and Other Details

ಈ ವರ್ಷದ ಆರಂಭದಲ್ಲಿ ಕೆಟಿಎಂ 390 ಅಡ್ವೆಂಚರ್ ಬೈಕ್ ಅನ್ನು ಬಜಾಜ್ ಬಿಡುಗಡೆ ಮಾಡಿತು. ಈ ಬೈಕ್ ಹೊಸ ಟ್ರೆಂಡ್ ಸೃಷ್ಟಿಸಿ ಬೈಕಿಂಗ್ ಉತ್ಸಾಹಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು ಎಂದು ಕೆಟಿಎಂ ಅಡ್ವೆಂಚರ್ ತಯಾರಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+