Gold Price: ಚಿನ್ನದ ಬೆಲೆ ಭಾರಿ ಏರಿಕೆ, ಇಂದಿನ ಬೆಲೆ ಎಷ್ಟು?
ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ, ಊಹೆಗೂ ಮೀರಿ ಚಿನ್ನದ ಬೆಲೆ ಮೇಲಕ್ಕೆ ಏರುತ್ತಿದೆ. ಇಷ್ಟುದಿನ ಕೈಗೆ ಸಿಗುವಂತೆ ಇದ್ದ ಚಿನ್ನದ ಬೆಲೆ ಇದೀಗ ಭಾರಿ ಏರಿಕೆ ಕಾಣುತ್ತಿದೆ. ಹಾಗಾದ್ರೆ ಇಂದು ಎಷ್ಟು ಏರಿಕೆ ಆಗಿದೆ ಚಿನ್ನದ ಬೆಲೆ? ಚಿನ್ನದ ಬೆಲೆ ಏರಿಕೆಗೆ ಕಾರಣ ಏನು? ಚಿನ್ನದ ಬೆಲೆ ಯಾವಾಗ ಕಡಿಮೆ ಆಗಬಹುದು? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಚಿನ್ನ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ, ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೆ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನು ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸ್ತಿದೆ.

ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಬೆಲೆ ಈ ವರ್ಷದ ಅಂತ್ಯಕ್ಕೆ 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.
ಚಿನ್ನ 7,600 ರೂಪಾಯಿ ಏರಿಕೆ!
ಶುದ್ಧ ಚಿನ್ನ ಎಂದು ಕರೆಯಲಾಗುವ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 7,600 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,28,700 ರೂಪಾಯಿ ಆಗಿದೆ. ಇದರ ಜೊತೆಗೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,110 ರೂಪಾಯಿಗೆ ಏರಿಕೆ ಆಗಿದೆ.
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದೆ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 7,000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 700 ರೂ. ರಷ್ಟು ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 66,800 ರೂಪಾಯಿಗೆ ಮಾರಾಟ ಆಗುತ್ತಿದೆ.
ಅಮೆರಿಕದ ಬಳಿ ಇದೆ ಅತಿಹೆಚ್ಚು ಚಿನ್ನ!
ಚಿನ್ನ ಜಗತ್ತಿನ ಪ್ರತಿಯೊಂದು ದೇಶಕ್ಕೂ ಬೇಕು, ಹೀಗಾಗಿ ಚಿನ್ನ ಸಂಗ್ರಹಣೆ ಬಗ್ಗೆ ಪ್ರಪಂಚ ಒತ್ತು ನೀಡುತ್ತದೆ. ಅದರಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂಬ ಬಿರುದು ಪಡೆದ, ಅಮೆರಿಕ ಬಳಿ ಅತಿಹೆಚ್ಚು ಚಿನ್ನ ಇದೆ. ಅಮೆರಿಕ ಬಳಿ ಸುಮಾರು 8,133 ಟನ್ ಚಿನ್ನವಿದೆ. ಹಾಗಾದ್ರೆ ಭಾರತ ಈಗ ಎಷ್ಟನೇ ಸ್ಥಾನದಲ್ಲಿ ಇದೆ ಗೊತ್ತಾ? ಅತಿಹೆಚ್ಚು ಚಿನ್ನ ಹೊಂದಿರುವ ಸಂಪೂರ್ಣ ಟಾಪ್-10 ದೇಶಗಳ ಪಟ್ಟಿಗೆ ಮುಂದೆ ಓದಿ.
ಅಮೆರಿಕದ ನಂತರದ ಸ್ಥಾನದಲ್ಲಿ ಜರ್ಮನಿ ಇದ್ದು, 3,352 ಟನ್ ಚಿನ್ನವನ್ನು ಜರ್ಮನಿಯು ಹೊಂದಿದೆ. ಇಟಲಿ ಬಳಿ 2,451 ಟನ್, ಫ್ರಾನ್ಸ್ ಬಳಿ 2,436 ಟನ್, ರಷ್ಯಾ ಬಳಿ 2,332 ಟನ್, ಚೀನಾ ಬಳಿ 2,262 ಟನ್, ಸ್ವಿಜರ್ಲ್ಯಾಂಡ್ ಬಳಿ 1,040, ಜಪಾನ್ ಬಳಿ 845.97 ಟನ್ ಇದ್ದರೆ, ಭಾರತದ ಬಳಿ 822.09 ಟನ್ ಚಿನ್ನದ ಸಂಗ್ರಹ ಇದೆ. ಈ ಮೂಲಕ ಇಡೀ ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಇರುವ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ.
ಚಿನ್ನದ ಬೆಲೆ ಮುಗಿಲು ಮುಟ್ಟುತ್ತಿದೆ!
ಒಟ್ನಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಹಳದಿ ಲೋಹ ಚಿನ್ನ ಭಾರಿ ಏರಿಕೆ ಕಂಡಿದೆ. ಹಾಗೇ, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಚಿನ್ನ ಭಾರಿ ಏರಿಕೆ ಕಾಣುವ ರೀತಿ ಇದೆ ಎನ್ನಲಾಗಿದೆ. ಆದರೆ ಮುಂದಿನ ತಿಂಗಳುಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಕೂಡ ಇದೆ.
ಭಾರತಕ್ಕೂ ಇದೆ ದೊಡ್ಡ ಇತಿಹಾಸ!
ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಈ ಹೆಮ್ಮೆ ಇಂದು ಅಥವಾ ನಿನ್ನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಚಿನ್ನವನ್ನ ವ್ಯಾಪಾರದ ಉದ್ದೇಶಕ್ಕಾಗಿ, ಭಾರತದಲ್ಲಿ ಈ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗುತ್ತಿತ್ತು. ಆಗಿನ ಕರೆನ್ಸಿ ಅಂದ್ರೆ ನಾಣ್ಯಗಳ ಮುದ್ರಣಕ್ಕೆ ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗೆ ನಮ್ಮ ನೆಲದ ಜೊತೆಯಲ್ಲೇ ಚಿನ್ನವು ಕೂಡ ಬೆರೆತು ಹೋಗಿದೆ. ಹೀಗಾಗಿಯೇ ಇಂದಿಗು ಕೂಡ ಈ ವಿಚಾರದಲ್ಲಿ ಭಾರತ ಮುಂದೆ ಇದ್ದು, ಅಪಾರ ಪ್ರಮಾಣದ ಚಿನ್ನವನ್ನು ಭಾರತ ಪ್ರತಿವರ್ಷ ಆಮದು ಮಾಡಿಕೊಳ್ಳುತ್ತದೆ.
ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುತ್ತಾ?
ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆಯೇ ಎನ್ನುವಂತಾಗಿದೆ. ಯಾಕಂದ್ರೆ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದರೂ ಲಾಭ ಗ್ಯಾರಂಟಿ. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಆಗುತ್ತಿದೆ. ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಯಾಕಂದ್ರೆ ಚಿನ್ನದ ಬೆಲೆ ಈ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಹೆಚ್ಚಿದೆ. ಮತ್ತೊಂದು ಕಡೆ ಸದ್ಯದ ಸ್ಥಿತಿಯಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ಚಿನ್ನ ಇಷ್ಟಪಡುವ ಮಹಿಳೆಯರಿಗೆ ಹಾಗೂ ಚಿನ್ನ ಪ್ರಿಯರಿಗೆ ಸಖತ್ ಸುದ್ದಿ ನೀಡಿದಂತೆ ಆಗಿದೆ.
ಚಿನ್ನದ ಬೆಲೆ 2 ಲಕ್ಷ ರೂಪಾಯಿ?
ಹೀಗಾಗಿಯೇ ಕಳೆದ ಕೆಲವು ತಿಂಗಳಿಂದಲು ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಆದರೆ ಜೂನ್ ಆರಂಭದಲ್ಲೇ ಚಿನ್ನದ ಬೆಲೆ ಒಂದಷ್ಟು ಕಡಿಮೆ ಆಗಿತ್ತು. ಈಗ ಮತ್ತೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ಇರಾನ್ & ಇಸ್ರೇಲ್ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿ ಭಯ ಹುಟ್ಟಿಸಿತ್ತು. ಈ ಕಾರಣಕ್ಕೆ, ಚಿನ್ನದ ಬೆಲೆ ಮುಂದಿನ ಕೆಲವೇ ವರ್ಷದಲ್ಲಿ 2 ಲಕ್ಷ ರೂಪಾಯಿಗೆ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.
ಚಿನ್ನದ ಬೆಲೆ ಕುಸಿದಿದ್ದು ಏಕೆ?
ಚರಿತ್ರೆಯಲ್ಲಿ ಯುದ್ಧಗಳು ನಡೆದಿರುವುದು ಚಿನ್ನಕ್ಕಾಗಿ ಹಾಗೂ ಅಮೂಲ್ಯ ವಸ್ತುಗಳಿಗೆ ಮಾತ್ರ. ಚಿನ್ನ ಒಂದು ಕಾಲದಲ್ಲಿ ನಾಣ್ಯ ಕೂಡ ಆಗಿತ್ತು. ಇದೀಗ ಚಿನ್ನ ಅನ್ನೋದು ಆಭರಣವಾಗಿ & ಬ್ಯಾಂಕ್ ಲಾಕರ್ ಒಳಗೆ ಮಾತ್ರ ಕಾಣಲು ಸಾಧ್ಯ. ಈ ಕಾರಣಕ್ಕೆ, ಚಿನ್ನ ಅನ್ನೋ ಹಳದಿ ಲೋಹದ ಬೆಲೆ ಆಕಾಶ ಮುಟ್ಟುತ್ತಿತ್ತು. ಆದರೆ ಈಗ ದಿಢೀರ್ ಅಂತಾ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಆಗಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆ ಭರ್ಜರಿ 20,000 ರೂಪಾಯಿ ಕುಸಿತವನ್ನು ಕಂಡು ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ ನೀಡಿದೆ. ಮುಂದಿನ ದಿನಗಳಲ್ಲಿ, ಚಿನ್ನದ ಬೆಲೆಯ ಬಗ್ಗೆ ಚಿಂತೆ ಶುರುವಾಗಿದೆ.
ಯುದ್ಧದ ಕಾರಣಕ್ಕೆ ಬೆಲೆ ಏರಿಕೆ?
ಜಾಗತಿಕವಾಗಿ ಯುದ್ಧಗಳು ಶುರುವಾದಾಗ, ಮೊದಲು ಆ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್, ಡಿಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿಯೇ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹಣ ಬದಲಾಯಿಸಿ, ಸಂಗ್ರಹ ಮಾಡಲು ಜನಗಳು ಮುಂದಾಗುತ್ತಾರೆ. ಹಾಗೆ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನ ಯುದ್ಧದ ವೇಳೆ ಬಂದಾಗ ಖರೀದಿ ಮಾಡುತ್ತವೆ. ಹೀಗಾಗಿಯೆ ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ಇದೀಗ ಚಿನ್ನ ಕುಸಿತವನ್ನು ಕಾಣುತ್ತಿದೆ.
ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ!
ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ ಹತ್ತಿರ ಹತ್ತಿರ 1 ಲಕ್ಷ ರೂಪಾಯಿಗೆ ತಲುಪಿತ್ತು ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಬೆಳ್ಳಿ ಬೆಲೆಯಲ್ಲಿ 1200 ರೂಪಾಯಿ ಕುಸಿತ ಕಂಡಿದೆ! ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆಯು ಇದೆ. ಈ ನಡುವೆ ಬೆಳ್ಳಿ ಬೆಲೆ ಒಂದಷ್ಟು ಇಳಿಕೆ ಕಂಡಿರುವುದು, ಬೆಳ್ಳಿ ಇಷ್ಟಪಡುವವರಿಗೆ ಒಂದಷ್ಟು ಖುಷಿ ಕೊಟ್ಟಿದೆ.












Click it and Unblock the Notifications