ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರು ಶಾಪಿಂಗ್ ಮಾಡುವುದನ್ನು ಬಿಟ್ಟು ಹಣ ಉಳಿಸಬೇಕು: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಲಹೆ

|
Google Oneindia Kannada News

ರಜಾದಿನಗಳಲ್ಲಿ ದೊಡ್ಡ ಪ್ರಮಾಣದ ಖರೀದಿಗಳನ್ನು ಜನರು ಮಾಡುವುದು ಬಿಡಬೇಕು ಎಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಎಚ್ಚರಿಸಿದ್ದಾರೆ.

ಆರ್ಥಿಕ ಹಿಂಜರಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಹೀಗೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತೀವ್ರ ಆರ್ಥಿಕ ಹಿಂಜರಿತ ಉಂಟಾಗಬಹುದು. ಆದ್ದರಿಂದ ಜನರು ಶಾಪಿಂಗ್ ಮಾಡುವುದನ್ನು ತಪ್ಪಿಸಿ ಹಣ ಉಳಿಸಬೇಕು ಎಂದು ಜೆಫ್ ಬೆಜೋಸ್ ಭವಿಷ್ಯ ನುಡಿದಿದ್ದಾರೆ.

ಸಂಪತ್ತಿನ ಬಹುಪಾಲು ದಾನ ಮಾಡಲು ಮುಂದಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಂಪತ್ತಿನ ಬಹುಪಾಲು ದಾನ ಮಾಡಲು ಮುಂದಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್

ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಮತ್ತು ಬೆಳೆಯುತ್ತಿರುವ ಸಾಮಾಜಿಕ ಅಂತರದ ನಡುವೆ ಜನರಿಗೆ ಸಹಾಯ ಮಾಡಲು $ 124 ಬಿಲಿಯನ್ ಆಸ್ತಿಯನ್ನು ದಾನ ಮಾಡುವುದಾಗಿ ಜೆಫ್‌ ಬೆಜೋಸ್‌ ಈ ಹಿಂದೆ ಘೋಷಿಸಿದ್ದರು.

Keep cash on hand, dont buy TV, fridge this holiday season: Jeff Bezos

ಜಾಗತಿಕ ಆರ್ಥಿಕ ಹಿಂಜರಿತ

ಸಿಎನ್‌ಎನ್‌ನೊಂದಿಗೆ ಮಾತನಾಡಿದ ಬಿಲಿಯನೇರ್ ಜೆಫ್ ಬೆಜೋಸ್, ಗ್ರಾಹಕರು ತಮ್ಮ ಹಣವನ್ನು ಉಳಿಸಲು ಮತ್ತು ಮುಂಬರುವ ದಿನಗಳಲ್ಲಿ ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಲು ಸಲಹೆ ನೀಡಿದರು. ಹೊಸ ಕಾರುಗಳು, ಟಿವಿಗಳು, ಫ್ರಿಜ್‌ಗಳು ಮುಂತಾದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸುವಂತೆ ಅವರು ಅಮೆರಿಕನ್ ಕುಟುಂಬಗಳನ್ನು ಕೇಳಿಕೊಂಡರು. ಇದೀಗ ಆರ್ಥಿಕತೆ ಉತ್ತಮವಾಗಿ ಕಾಣುತ್ತಿಲ್ಲ. ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು. ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಕಾಣುತ್ತಿದ್ದೀರಿ ಎಂದರು.

ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಬಡ ಜನರಿಗೆ ಸಹಾಯವಾಗಲು $124 ಬಿಲಿಯನ್ ಸಂಪತ್ತಿನ ಬಹುಪಾಲು ಹಣವನ್ನು ದಾನ ಮಾಡುವುದಾಗಿ ಜೆಫ್ ಬೆಜೋಸ್ ಹೇಳಿದ್ದಾರೆ. ಆದರೆ, ಅವರು ತಮ್ಮ ಆಸ್ತಿಯಲ್ಲಿ ಎಷ್ಟು ದಾನ ಮಾಡಲು ಯೋಜಿಸುತ್ತಿದ್ದಾರೆ ಎಂಬುದನ್ನು ಅವರು ಇನ್ನೂ ಸ್ಪಷ್ಟಪಡಿಸಿಲ್ಲ.

English summary
The billionaire told American families not to buy new cars and TVs as US is staring at a recession, with household debt soaring to $16.5 trillion and Americans relying on credit to make ends meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X