ಮೊದಲ ದಿನವೇ ದಾಖಲೆ ನಿರ್ಮಿಸಿದ ಜಿಯೋ ಫೋನ್ ಬುಕಿಂಗ್
ನವದೆಹಲಿ, ಸೆಪ್ಟೆಂಬರ್ 02 : ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ಮೊಬೈಲ್ ಫೋನ್ ಮಾರಾಟದಲ್ಲೂ ಹೊಸ ದಾಖಲೆ ಸೃಷ್ಟಿಸಿದೆ.
ಇತ್ತೀಚೆಗೆ ಜಾರಿಗೆ ತಂದಿದ್ದ ಅತ್ಯಂತ ಕಡಿಮೆ ದರದ 4ಜಿ ಜಿಯೋ ಫೋನ್ ಗಳಿಗೆ ದೇಶದೆಲ್ಲೆಡೆ ಬೇಡಿಕೆ ಹೆಚ್ಚಾಗಿದ್ದು, ಮೊದಲ ದಿನವೇ 60 ಲಕ್ಷ ಮೊಬೈಲ್ ಫೋನ್ ಬುಕ್ ಆಗಿವೆ.

ಆಗಸ್ಟ್ 24ರಂದು ಜಿಯೋ ಫೋನ್ ಬುಕಿಂಗ್ ಆರಂಭವಾದ ಬಳಿಕ ಮೂರು ದಿನದಲ್ಲಿ 60 ಲಕ್ಷ ಫೋನ್ ಗಳು ಬುಕ್ ಆಗಿವೆ.
ಗ್ರಾಹಕರಿಗೆ ಫೋನ್ ಗಳ ವಿತರಣೆ ಸೆಪ್ಟೆಂಬರ್ 21ರಿಂದ ಆರಂಭವಾಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 500 ರು. ಮುಂಗಡ ಹಣ ನೀಡಿ ಫೋನ್ ಬುಕ್ ಮಾಡಲು ಆ.24ರಿಂದ ಅವಕಾಶ ಕಲ್ಪಿಸಲಾಗಿತ್ತು.
ಫೋನ್ ಪಡೆದ ಬಳಿಕ ಗ್ರಾಹಕರು 1000 ರು. ಪಾವತಿಸಬೇಕು. 3 ವರ್ಷದ ಬಳಿಕ ಗ್ರಾಹಕರಿಗೆ ಕಂಪನಿ ಪೂರ್ತಿ ಹಣ ಮರು ಪಾವತಿ ಮಾಡಲಿದೆ.












Click it and Unblock the Notifications