ಟಾಪ್ ಡೌನ್‌ಲೋಡ್ ಸ್ಪೀಡ್‌ನಲ್ಲಿ ಜಿಯೋ ಫಸ್ಟ್‌: ಬ್ರಾಂಡ್‌ನಲ್ಲೂ ಬೆಸ್ಟ್‌

ನವದೆಹಲಿ, ಸೆ. 18: ರಿಲಯನ್ಸ್ ಜಿಯೋ 4G ಡೌನ್‌ಲೋಡ್ ಸ್ಪೀಡ್ ಆಗಸ್ಟ್‌ ತಿಂಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತಿಳಿಸಿದೆ, ಅಲ್ಲದೇ ಜಿಯೋ ಟಾಪ್ ಬೆಸ್ಟ್‌ 100 ಬ್ರಾಂಡ್‌ಗಳಲ್ಲಿ ಸ್ಥಾನವನ್ನು ಅಲಂಕರಿಸಲಿದೆ.

TRAI ಪ್ರತಿ ತಿಂಗಳು ಇಂಟರ್ನೆಟ್ ಸ್ಪೀಡ್ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಅದರಂತೆ ಆಗಸ್ಟ್‌ ತಿಂಗಳಿನಲ್ಲಿ ರಿಲಯನ್ಸ್ ಜಿಯೋ 4G ಸರಾಸರಿ ಡೌನ್‌ಲೋಡ್ ಸ್ಪೀಡ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದೆ. ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು TRAI ಲೆಕ್ಕಾಚಾರ ಮಾಡುತ್ತದೆ.

ಜುಲೈನಲ್ಲಿ 21.0 Mbps ಡೌನ್‌ಲೋಡ್ ವೇಗವನ್ನು ಹೊಂದಿದ್ದ ಜಿಯೋ, ಆಗಸ್ಟ್ ತಿಂಗಳಲ್ಲಿ ಸರಾಸರಿ 21.3 Mbps ಡೌನ್‌ಲೋಡ್ ವೇಗವನ್ನು ಸಾಧಿಸಿದೆ. ಇದೇ ಸಮಯದಲ್ಲಿ TRAI ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಆಗಸ್ಟ್‌ನಲ್ಲಿ ಭಾರ್ತಿ ಏರ್‌ಟೆಲ್‌ನ ಡೌನ್‌ಲೋಡ್ ವೇಗ 8.2 Mbps ಗೆ ಇಳಿದಿದೆ.

ರಿಲಯನ್ಸ್ ಜಿಯೋ ಅತಿ ವೇಗದ 4G ಆಪರೇಟರ್ ಆಗಿದ್ದು, 2018ರಲ್ಲಿ ಎಲ್ಲಾ 12 ತಿಂಗಳಲ್ಲಿ ಗರಿಷ್ಠ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿತ್ತು. ಈ ವರ್ಷ ಮತ್ತೆ, ಜಿಯೋ ಇದುವರೆಗಿನ ಎಲ್ಲಾ ಎಂಟು ತಿಂಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಭಾರತೀಯರಿಗೆ ಬೆಸ್ಟ್‌ ಸೇವೆಯನ್ನು ನೀಡುತ್ತಿದೆ.

ಜಿಯೋ ಬೆಸ್ಟ್‌ ಬ್ರಾಂಡ್

ಜಿಯೋ ಬೆಸ್ಟ್‌ ಬ್ರಾಂಡ್

ರಿಲಯನ್ಸ್ ಜಿಯೋ ಪ್ರಸ್ತುತ ಬೆಳೆಯುತ್ತಿರುವ ದರದ ಆಧಾರದ ಮೇಲೆ ಮೂರು ವರ್ಷಗಳಲ್ಲಿ ಜಾಗತಿಕವಾಗಿ 100 ಅಮೂಲ್ಯ ಬ್ರಾಂಡ್‌ಗಳಲ್ಲಿ ಒಂದಾಗಲಿದೆ ಎಂದು ಸಂವಹನ ಸೇವಾ ಪೂರೈಕೆದಾರ WPP ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಾಂತರ್ ಮಿಲ್ವರ್ಡ್ ಬ್ರೌನ್ ವರದಿ ಮಾಡಿವೆ.

1995 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ಏರ್‌ಟೆಲ್‌ಗಿಂತ 2016ರಲ್ಲಿ ಪ್ರಾರಂಭವಾದ ಜಿಯೋವನ್ನು ಭಾರತೀಯ ಗ್ರಾಹಕರು ಅಪ್ಪಿಕೊಂಡು ಒಪ್ಪಿದ್ದಾರೆ ಎಂದು 2019 ರ 'BrandZ ಟಾಪ್ 100 ಹೆಚ್ಚು ಮೌಲ್ಯಯುತ ಜಾಗತಿಕ ಬ್ರಾಂಡ್' ವರದಿಯಲ್ಲಿ ಉಲ್ಲೇಖಿಸಲಾಗಿದೆ.

340 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರಿಕೆ

340 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರಿಕೆ

ಡೇಟಾ ಬಳಕೆಗಾಗಿ ರಿಯಾಯಿತಿ ದರಗಳೊಂದಿಗೆ ಭಾರತೀಯ ಟೆಲಿಕಾಂ ಪೂರೈಕೆದಾರರಿಗೆ ಭಯ ಹುಟ್ಟಿಸಿದ ಜಿಯೋ, ಈಗ 340 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರಿಕೆಯನ್ನು ಹೊಂದಿದೆ. ಜಿಯೋ ಪ್ರಸ್ತುತ ಬ್ರಾಂಡ್ ಮೌಲ್ಯ $ 4.1 ಬಿಲಿಯನ್ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಆರು ತಿಂಗಳು ಉಚಿತ ಡೇಟಾ

ಆರು ತಿಂಗಳು ಉಚಿತ ಡೇಟಾ

ಪ್ರಾರಂಭದಲ್ಲಿ, ಜಿಯೋ ಮೊದಲ ಆರು ತಿಂಗಳು ಉಚಿತ ಡೇಟಾವನ್ನು ಒದಗಿಸಿತು ಮತ್ತು ನಂತರ ಮಾತ್ರ ತುಲನಾತ್ಮಕವಾಗಿ ಸಾಧಾರಣ ಬೆಲೆಗಳನ್ನು ಪರಿಚಯಿಸಿತು ಎಂದು ಕಾಂತರ್‌ನ ಗ್ಲೋಬಲ್ BrandZ ಸಂಶೋಧನಾ ನಿರ್ದೇಶಕ ಮಾರ್ಟಿನ್ ಗೆರಿಯೇರಿಯಾ ಹೇಳಿದ್ದಾರೆ.

ಡೇಟಾ ಬೆಲೆ ತಗ್ಗಿದೆ

ಡೇಟಾ ಬೆಲೆ ತಗ್ಗಿದೆ

ಜಿಯೋ ಆರಂಭದಿಂದಲೇ ಮಾರುಕಟ್ಟೆ ನಾಯಕರಾದ ಏರ್‌ಟೆಲ್ ಮತ್ತು ವೊಡಾಫೋನ್ ಮೇಲೆ ಸವಾರಿ ನಡೆಸಿತು, 'ಜಿಯೋ ಎಫೆಕ್ಟ್'ನ ಪ್ರಯೋಜನವನ್ನು ಎಲ್ಲಾ ಆಪರೇಟರ್‌ಗಳ ಗ್ರಾಹಕರು ಅನುಭವಿಸಿದರು, ಏಕೆಂದರೆ ಗ್ರಾಹಕರನ್ನು ಉಳಿಸಿಕೊಳ್ಳಲು ಏರ್‌ಟೆಲ್ ಮತ್ತು ವೊಡಾಫೋನ್ ಸೇರಿದಂತೆ ಎಲ್ಲಾ ಅಪರೇಟರ್‌ಗಳು ತಮ್ಮ ಡೇಟಾ ಬೆಲೆಗಳನ್ನು ಇಳಿಸಬೇಕಾಯಿತು" ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+