• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಜಿಯೋದಲ್ಲಿ 5,683.50 ಕೋಟಿ ರು. ಹೂಡಿಕೆ ಮಾಡಲಿರುವ ಎಡಿಐಎ(ADIA)

|
Google Oneindia Kannada News

ಮುಂಬೈ, ಜೂನ್ 8: ರಿಲಯನ್ಸ್ ಜಿಯೋ ಫ್ಲಾಟ್‌ಫಾರ್ಮ್‌ಗಳಲ್ಲಿ ಹಣ ಹೂಡಿಕೆಗೆ ಒಂದರ ಹಿಂದೆ ಮತ್ತೊಂದು ಕಂಪನಿಗಳು ಮುಂದಾಗುತ್ತಿದ್ದು, ಇದೀಗ ಆ ಸಾಲಿಗೆ ಅಬುಧಾಬಿಯ ಇನ್‌ವೆಸ್ಟ್‌ಮೆಂಟ್ ಅಥಾರಿಟಿ (ಎಡಿಐಎ) ಜಿಯೋದಲ್ಲಿ 5,683.50 ಕೋಟಿ ರುಪಾಯಿ ಹೂಡಿಕೆ ಮಾಡಲು ಮುಂದಾಗಿದೆ.

ಭಾರತದಲ್ಲಿ ಎಲ್ಲರನ್ನೂ ಒಳಗೊಂಡ ಡಿಜಿಟಲ್ ಸಮಾಜ ನಿರ್ಮಿಸುವ ಜಿಯೋ ಧ್ಯೇಯವನ್ನು ಈ ಹೂಡಿಕೆಗಳು ಇನ್ನಷ್ಟು ಬಲಪಡಿಸಲಿವೆ. ಏಳು ವಾರಗಳಲ್ಲಿ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 97,885.65 ಕೋಟಿ ರುಪಾಯಿ ಹೂಡಿಕೆಯ ಘೋಷಣೆ ಆಗಿದೆ.

 ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ: ಜಿಯೋದಲ್ಲಿ 4,546 ಕೋಟಿ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್ ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ: ಜಿಯೋದಲ್ಲಿ 4,546 ಕೋಟಿ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್

7 ವಾರಗಳಲ್ಲಿ ಒಟ್ಟು 8 ಬೃಹತ್ ಹೂಡಿಕೆ

7 ವಾರಗಳಲ್ಲಿ ಒಟ್ಟು 8 ಬೃಹತ್ ಹೂಡಿಕೆ

ಹೌದು, ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಕಳೆದ 7 ವಾರಗಳಲ್ಲಿ 8 ಬೃಹತ್ ಹೂಡಿಕೆಯನ್ನು ನಾವು ಕಾಣಬಹುದು. ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ.


ಏಳು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ ಹಾಗೂ ಎಡಿಐಎ ಸೇರಿದಂತೆ ಪ್ರಮುಖ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 97,885.65 ಕೋಟಿ ರೂ. ಹೂಡಿಕೆ ಪಡೆದುಕೊಂಡಂತಾಗಿದೆ.

ಎಡಿಐಎಯಿಂದ 1.16% ಪಾಲು ಖರೀದಿ

ಎಡಿಐಎಯಿಂದ 1.16% ಪಾಲು ಖರೀದಿ

ಸಿಲ್ವರ್ ಲೇಕ್‌ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ಎರಡನೇ ಬಾರಿಗೆ ಹಣ ಹೂಡಿಕೆ ಮಾಡಿದ ಬಳಿಕ ಅಬುದಾಬಿಯ ಎಡಿಐಎ ಹೊಸ ಡೀಲ್ ಕುದುರಿಸಿದೆ. ಎಡಿಐಎ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ 1.16% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.

ಜಿಯೋದಲ್ಲಿ 9,033 ಕೋಟಿ ರುಪಾಯಿ ಹೂಡಿಕೆ ಮಾಡಿದ ಮುಬದಾಲ: 6 ವಾರದಲ್ಲಿ 6 ಡೀಲ್ಜಿಯೋದಲ್ಲಿ 9,033 ಕೋಟಿ ರುಪಾಯಿ ಹೂಡಿಕೆ ಮಾಡಿದ ಮುಬದಾಲ: 6 ವಾರದಲ್ಲಿ 6 ಡೀಲ್

ಏನಿದು ಎಡಿಐಎ ಕಂಪನಿ?

ಏನಿದು ಎಡಿಐಎ ಕಂಪನಿ?

1976ರಲ್ಲಿ ಸ್ಥಾಪನೆಯಾದ ಎಡಿಐಎ ಜಾಗತಿಕ ಮಟ್ಟದಲ್ಲಿ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಯಾಗಿದ್ದು, ದೀರ್ಘಾವಧಿಯ ಮೌಲ್ಯ ಸೃಷ್ಟಿಯ ಮೇಲೆ ಕೇಂದ್ರೀಕೃತವಾದ ಕಾರ್ಯತಂತ್ರದ ಮೂಲಕ ಅಬುಧಾಬಿ ಸರ್ಕಾರದ ಪರವಾಗಿ ವಿವೇಕಯುತ ಹೂಡಿಕೆಗಳನ್ನು ಮಾಡುತ್ತದೆ. ಎರಡು ಡಜನ್‌ಗಿಂತಲೂ ಹೆಚ್ಚಿನ ಆಸ್ತಿ ವರ್ಗಗಳು ಮತ್ತು ಉಪ-ವರ್ಗಗಳಲ್ಲಿ ವಿವಿಧ ಉದ್ಯಮಗಳಾದ್ಯಂತ ವ್ಯಾಪಿಸಿರುವ ಜಾಗತಿಕ ಹೂಡಿಕೆಗಳ ಪೋರ್ಟ್‌ಫೋಲಿಯೋ ಅನ್ನು ಎಡಿಐಎ ನಿರ್ವಹಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, "ವಿಶ್ವದಾದ್ಯಂತ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ದೀರ್ಘಕಾಲೀನ ಮೌಲ್ಯದ ಹೂಡಿಕೆಯ ಯಶಸ್ವಿ ದಾಖಲೆಯಿರುವ ಎಡಿಐಎ, ಭಾರತವನ್ನು ಡಿಜಿಟಲ್ ನಾಯಕತ್ವಕ್ಕೆ ಕೊಂಡೊಯ್ಯುವ ಮತ್ತು ಸಮಗ್ರ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವ ಧ್ಯೇಯದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನೊಂದಿಗೆ ಜೊತೆಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಈ ಹೂಡಿಕೆಯು ನಮ್ಮ ಕಾರ್ಯತಂತ್ರ ಮತ್ತು ಭಾರತದ ಸಾಮರ್ಥ್ಯದ ಬಲವಾದ ಅನುಮೋದನೆಯಾಗಿದೆ." ಎಂದು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ.

ಯಾವೆಲ್ಲಾ ಕಂಪನಿಗಳು ಎಷ್ಟು ಹಣ ಹೂಡಿವೆ?

ಯಾವೆಲ್ಲಾ ಕಂಪನಿಗಳು ಎಷ್ಟು ಹಣ ಹೂಡಿವೆ?

ಹೌದು, ಜಗತ್ತಿನಲ್ಲಿ ಕೊರೊನಾ ಕಾಟದಿಂದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಕಂಗೆಟ್ಟು ಹೋಗಿದೆ, ಇದರಿಂದ ಭಾರತವೂ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ವಿದೇಶಿ ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಏಳು ವಾರಗಳಲ್ಲಿ ಎಂಟು ಡೀಲ್ ಮಾಡಿಕೊಂಡಿದೆ. ಇದರ ಜೊತೆಗೆ ಈಗ ಎಡಿಐಎ ಸೇರಲಿದೆ.

ಏಪ್ರಿಲ್ 22 ರಂದು ಫೇಸ್‌ಬುಕ್‌ ಜಿಯೋದ 9.99 ಪರ್ಸೆಂಟ್‌ರಷ್ಟು ಪಾಲು ಖರೀದಿಸಲು 43,574 ಕೋಟಿ ರುಪಾಯಿ ಹೂಡಿಕೆ ಮಾಡಿತ್ತು. ನಂತರದಲ್ಲಿ ಸರಣಿ ಒಪ್ಪಂದಗಳು ನಡೆದವು. ಅಂದಿನಿಂದ, ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್ ಮತ್ತು ಕೆಕೆಆರ್, ಮುಬದಾಲ, ಎಡಿಐಎ ಪಾಲನ್ನು ಪಡೆದಿದ್ದು ಒಟ್ಟಾರೆ ಹೂಡಿಕೆ 97,885.65 ಕೋಟಿ ರುಪಾಯಿ ಆಗಿದೆ.

2021ರ ವೇಳೆಗೆ ಶೂನ್ಯ ಸಾಲ ಹೊಂದಲಿರುವ RIL

2021ರ ವೇಳೆಗೆ ಶೂನ್ಯ ಸಾಲ ಹೊಂದಲಿರುವ RIL

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಸೇರಿದಂತೆ ಏಳು ಕಂಪನಿಗಳು ರಿಲಯನ್ಸ್‌ ಜಿಯೋದಲ್ಲಿ ಭಾರೀ ಹೂಡಿಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮಾರ್ಚ್ 2021ರ ವೇಳೆಗೆ ಶೂನ್ಯ ನಿವ್ವಳ ಸಾಲ ಕಂಪನಿಯಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಒಪ್ಪಂದದ ನಗದು ಹರಿವು ಆರ್ಐಎಲ್ ಒಟ್ಟಾರೆ ನಿವ್ವಳ ಸಾಲವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಮಾರ್ಚ್ 2021 ರ ವೇಳೆಗೆ ಶೂನ್ಯ ನಿವ್ವಳ ಸಾಲವನ್ನು ಸಾಧಿಸುವ ಗುರಿಯತ್ತ ಸಾಗಲು ಸಹಾಯ ಮಾಡುತ್ತದೆ.

English summary
Jio Platforms is set to raise Rs 5683.50 crore from ADIA, the largest investment arm of the government of Abu Dhabi, by selling a 1.16% stake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X