ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Jio 5G services: 34 ನಗರಗಳಲ್ಲಿ ಇಂದಿನಿಂದ ಪ್ರಾರಂಭ- ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ

ದೇಶದ 34 ನಗರಗಳಲ್ಲಿ ತನ್ನ 5G ಸೇವೆಗಳನ್ನು ಆರಂಭಿಸಿರುವುದಾಗಿ ರಿಲಯನ್ಸ್ ಜಿಯೋ ಮಂಗಳವಾರ ಘೋಷಿಸಿದೆ. ಈ 34 ನಗರಗಳಲ್ಲಿ ಕರ್ನಾಟಕದ ಒಂದು ನಗರವೂ ಸೇರಿವೆ. ಈ ನಗರ ಯಾವುದೆಂದು ಇಲ್ಲಿ ತಿಳಿಯಿರಿ.

|
Google Oneindia Kannada News

ಮುಂಬೈ, ಜನವರಿ 31: ರಿಲಯನ್ಸ್ ಜಿಯೋ ಜನವರಿ 31 ರಂದು ತನ್ನ 5G ಸೇವೆಗಳನ್ನು 34 ನಗರಗಳಲ್ಲಿ ಪ್ರಾರಂಭಿಸಿದೆ. ಇದುವರೆಗೆ ದೇಶದಾದ್ಯಂತ 225 ನಗರಗಳಿಗೆ 5G ಸಂಪರ್ಕವನ್ನು ವಿಸ್ತರಿಸಿದೆ. ಇದರೊಂದಿಗೆ, ರಿಲಯನ್ಸ್ ಜಿಯೋ ದೇಶದ ಅತೀ ಹೆಚ್ಚು ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಈ ಕೆಳಗಿನ ನಗರಗಳಲ್ಲಿನ ಜಿಯೋ ಬಳಕೆದಾರರನ್ನು 1 Gbps + ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು Jio ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಜನವರಿ 31 ರಿಂದ ಪ್ರಾರಂಭವಾಗುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಟೆಲಿಕಾಂ ವಿಭಾಗವು ಹೇಳಿಕೆಯಲ್ಲಿ ತಿಳಿಸಿದೆ. ದೇಶಾದ್ಯಂತ ಹಂತಹಂತವಾಗಿ 5G ಸೇವೆಯನ್ನು ಜಿಯೋ ಆರಂಭಿಸಿತ್ತು. ಜಿಯೋ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ನಗರಗಳಿಗೆ ಸಂಪರ್ಕವನ್ನು ಕಲ್ಪಿಸಿದೆ ಎಂದು ಈ ಹಿಂದೆ ಘೋಷಿಸಿತ್ತು.

'ಈ ಪ್ರಮಾಣದ 5G ನೆಟ್‌ವರ್ಕ್ ಸಂಪರ್ಕ ಸೇವೆ ನೀಡುತ್ತಿರುವುದು ಪ್ರಪಂಚದಲ್ಲೇ ಮೊದಲನೆಯದು ಮತ್ತು 2023 ಭಾರತಕ್ಕೆ ಒಂದು ಹೆಗ್ಗುರುತು ವರ್ಷವಾಗಲಿದೆ' ಎಂದು ರಿಯಲಯನ್ಸ್‌ ಜಿಯೋ ಹೇಳಿಕೊಂಡಿದೆ.

Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆJio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, 'ಬೀಟಾ ಟ್ರಯಲ್ ಪ್ರಾರಂಭವಾದಾಗಿನಿಂದ ಕೇವಲ 120 ದಿನಗಳಲ್ಲಿ ಜಿಯೋ ಈ ಮೈಲಿಗಲ್ಲನ್ನು ಸಾಧಿಸಿದೆ. ಡಿಸೆಂಬರ್ 2023 ರ ವೇಳೆಗೆ ಇಡೀ ರಾಷ್ಟ್ರವನ್ನು ಜಿಯೋ ಟ್ರೂ 5G ಸೇವೆಗಳೊಂದಿಗೆ ಸಂಪರ್ಕಿಸುವ ಹಾದಿಯಲ್ಲಿದೆ ಎಂದು ತಿಳಿಸಿದ್ದಾರೆ.

Jio 5G services now available at chitradurga in karnataka

ಏತನ್ಮಧ್ಯೆ, ಜಿಯೋ ಡಿಸೆಂಬರ್ 31, 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ 4,638 ಕೋಟಿ ನಿವ್ವಳ ಲಾಭವನ್ನು ತನ್ನದಾಗಿಸಿಕೊಂಡಿದೆ. ಇದು ಹಿಂದಿನ ವರ್ಷದ ಅವಧಿಗಿಂತ 28.3 ಶೇಕಡಾ ಹೆಚ್ಚಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯು ರೂ.3,615 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಅದರ ಡಿಸೆಂಬರ್ ತ್ರೈಮಾಸಿಕದಲ್ಲಿ, ಜಿಯೋದ ನಿವ್ವಳ ಚಂದಾದಾರರ ಸೇರ್ಪಡೆ 5.3 ಮಿಲಿಯನ್ ಆಗಿದ್ದು, 3Q FY23 ರಲ್ಲಿ ಒಟ್ಟು ಚಂದಾದಾರರ ಸೇರ್ಪಡೆ 34.2 ಮಿಲಿಯನ್‌ಗೆ ತಲುಪಿದೆ ಎಂದು RIL ಹೇಳಿದೆ.

ಇಂದಿನಿಂದ ಯಾವ ನಗರಗಳಲ್ಲಿ Jio 5G services ಲಭ್ಯ

ಆಂಧ್ರಪ್ರದೇಶದ ಆರು ನಗರಗಳು (ಅನಂತಪುರಂ, ಭೀಮಾವರಂ, ಚಿರಾಲ, ಗುಂತಕಲ್, ನಂದ್ಯಾಲ್, ತೆನಾಲಿ),
ಅಸ್ಸಾಂನಲ್ಲಿ ಮೂರು ನಗರಗಳು (ದಿಬ್ರುಗಢ, ಜೋರ್ಹತ್, ತೇಜ್‌ಪುರ),
ಬಿಹಾರದಲ್ಲಿ ಒಂದು ನಗರ (ಗಯಾ)

Jio 5G services now available at chitradurga in karnataka

ಛತ್ತೀಸ್‌ಗಢದಲ್ಲಿ ಎರಡು ನಗರ (ಅಂಬಿಕಾಪುರ, ಧಮತರಿ),
ಹರಿಯಾಣದಲ್ಲಿ ಎರಡು ನಗರ ( ಥಾನೇಸರ್, ಯಮುನಾನಗರ),
ಕರ್ನಾಟಕದಲ್ಲಿ ಒಂದು ನಗರ (ಚಿತ್ರದುರ್ಗ)
ಮಹಾರಾಷ್ಟ್ರದ ಎರಡು ನಗರ (ಜಲಗಾಂವ್, ಲಾತೂರ್)
ಒಡಿಶಾದಲ್ಲಿ ಎರಡು ನಗರ (ಬಲಂಗಿರ್, ನಾಲ್ಕೊ)
ಪಂಜಾಬ್‌ನಲ್ಲಿ ಎರಡು ನಗರ (ಜಲಂಧರ್, ಫಗ್ವಾರ)
ರಾಜಸ್ಥಾನ ಒಂದು ನಗರ (ಅಜ್ಮೀರ್)
ತಮಿಳುನಾಡಿನ ಎಂಟು ನಗರ (ಕಡಲೂರು, ದಿಂಡಿಗಲ್, ಕಾಂಚೀಪುರಂ, ಕರೂರ್, ಕುಂಭಕೋಣಂ, ನಾಗರ್‌ಕೋಯಿಲ್, ತಂಜಾವೂರು, ತಿರುವಣ್ಣಾಮಲೈ)
ತೆಲಂಗಾಣದ ಮೂರು ನಗರ (ಆದಿಲಾಬಾದ್, ಮಹಬೂಬ್‌ನಗರ, ರಾಮಗುಂಡಂ)
ಉತ್ತರ ಪ್ರದೇಶದ ಮಥುರಾದಲ್ಲಿಯೂ ಸೇವೆಗಳನ್ನು ಪ್ರಾರಂಭಿಸಲಾಗಿದೆ.

English summary
Reliance Jio on Tuesday announced the launch of 5G services across 34 cities spread across 13 states, taking the cumulative tally of the number of cities in the country having access to the company's True 5G services to 225
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X