27 ಹೊಸ ನಗರಗಳಲ್ಲಿ Jio 5G ಪ್ರಾರಂಭ: ಕರ್ನಾಟಕದ ಯಾವ ನಗರಗಳಿಗೆ ಕೊಡುಗೆ? ತಿಳಿಯಿರಿ
ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ, ತನ್ನ ಅಲ್ಟ್ರಾ ಹೈಸ್ಪೀಡ್ ಟೆಲಿಫೋನ್ ಜಾಲವಾದ 5G ಸೇವೆಯನ್ನು 27 ನಗರಗಳಲ್ಲಿ ಪ್ರಾರಂಭಿಸಿರುವುದಾಗಿ ಬುಧವಾರ ಘೋಷಿಸಿದೆ. ಇದು ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
ನವದೆಹಲಿ, ಮಾರ್ಚ್ 09: ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ, ತನ್ನ ಅಲ್ಟ್ರಾ ಹೈಸ್ಪೀಡ್ ಟೆಲಿಫೋನ್ ಜಾಲವಾದ 5G ಸೇವೆಯನ್ನು 27 ನಗರಗಳಲ್ಲಿ ಪ್ರಾರಂಭಿಸಿರುವುದಾಗಿ ಬುಧವಾರ ಘೋಷಿಸಿದೆ. ಇದು ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಈ ಮೂಲಕ ಜಿಯೋ 5G ಜಾಲವನ್ನು 331 ನಗರಗಳಿಗೆ ವಿಸ್ತರಿಸಿರುವುದಾಗಿ ತಿಳಿಸಿದೆ.
Jio True 5G ಈಗ ಆಂಧ್ರಪ್ರದೇಶ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಂತಹ ಪ್ರಮುಖ ರಾಜ್ಯಗಳ 27 ಹೆಚ್ಚುವರಿ ನಗರಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್ 8, 2023 ರಿಂದ, ಈ 27 ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 Gbps ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಬಹುದೆಂದು ಬಳಕೆದಾರರಿಗೆ ಮಾಹಿತಿ ರವಾನಿಸಿದೆ.
ಜಿಯೋದ 5G ಸೇವೆಗಳು 2023 ರ ಅಂತ್ಯದ ವೇಳೆಗೆ ಇಡೀ ದೇಶವನ್ನು ಆವರಿಸಲಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಈ ಹಿಂದೆ ಘೋಷಿಸಿದ್ದರು.
'ಇಂದಿನಿಂದ, ಹೆಚ್ಚಿನ ವೇಗದ ಇಂಟರ್ನೆಟ್, ಟ್ರೂ 5G ಸೇವೆಗಳ ತಾಂತ್ರಿಕ ಅನುಕೂಲಗಳನ್ನು 27 ನಗರಗಳ ಜನರಿಗೆ ಮತ್ತು ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು' ಎಂದು ಜೀಯೋ ಕಂಪನಿಯ ಹೇಳಿಕೆ ತಿಳಿಸಿದೆ.

'Jio True 5G, 1 Gbps ವರೆಗಿನ ಮಿಂಚಿನ ವೇಗದ ಇಂಟರ್‌ನೆಟ್ ನೀಡುತ್ತದೆ. ಹೈ-ಡೆಫಿನಿಷನ್ ವಿಡಿಯೊಗಳ ತಡೆರಹಿತ ಸ್ಟ್ರೀಮಿಂಗ್ ಮಾಡಬಹುದು. ಇದು ಸಂವಾದಾತ್ಮಕ ವೀಕ್ಷಣೆ ಮತ್ತು ಕ್ಲೌಡ್ ಗೇಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ' ಎಂದು ಕಂಪನಿ ಹೇಳಿದೆ.
5G ತಂತ್ರಜ್ಞಾನವು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಆಗ್ಮೆಂಟೆಡ್ ರಿಯಾಲಿಟಿ (AR), ಮತ್ತು ವರ್ಚುವಲ್ ರಿಯಾಲಿಟಿ (VR) ಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಭರವಸೆ ನೀಡುತ್ತದೆ. ಇದು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರಗಳಲ್ಲಿ ನವೀನ ಅಪ್ಲಿಕೇಶನ್‌ಗಳಿಗೆ ದಾರಿ ಮಾಡಿಕೊಡುತ್ತದೆ.
'ಪ್ರತಿ ಜಿಯೋ ಬಳಕೆದಾರರು 2023 ರಲ್ಲಿ Jio True 5G ತಂತ್ರಜ್ಞಾನದ ರೂಪಾಂತರ ಪ್ರಯೋಜನಗಳನ್ನು ಆನಂದಿಸಬೇಕೆಂದು ನಾವು ಬಯಸುತ್ತೇವೆ. ಡಿಸೆಂಬರ್ 2023 ರ ವೇಳೆಗೆ, Jio True 5G ದೇಶದ ಪ್ರತಿಯೊಂದು ಪಟ್ಟಣ/ನಗರವನ್ನು ಆವರಿಸುತ್ತದೆ' ಎಂದು ಜಿಯೋ ವಕ್ತಾರರು ತಿಳಿಸಿದ್ದಾರೆ.

5ಜಿ ತಂತ್ರಜ್ಞಾನ ಲಭ್ಯವಿರುವ ದೇಶದ 27 ನಗರಗಳು ಇಲ್ಲಿವೆ
ಆಂಧ್ರಪ್ರದೇಶ - ತಾಡಿಪತ್ರಿ
ಛತ್ತೀಸ್‌ಗಢ - ಭಟಪರಾ
ಜಮ್ಮು ಕಾಶ್ಮೀರ - ಅನಂತನಾಗ್
ಕರ್ನಾಟಕ - ಭದ್ರಾವತಿ, ರಾಮನಗರ, ದೊಡ್ಡಬಳ್ಳಾಪುರ, ಚಿಂತಾಮಣಿ
ಕೇರಳ - ಚಂಗನಾಶ್ಶೇರಿ, ಮುವಾಟ್ಟುಪುಳ, ಕೊಡುಂಗಲ್ಲೂರು
ಮಧ್ಯಪ್ರದೇಶ - ಕಟ್ನಿ ಮುರ್ವಾರ
ಮಹಾರಾಷ್ಟ್ರ - ಸತಾರಾ
ಪಂಜಾಬ್ - ಪಠಾಣ್ ಕೋಟ್
ತಮಿಳುನಾಡು - ಪೊಲ್ಲಾಚಿ ಕೋವಿಲ್ಪಟ್ಟಿ
ತೆಲಂಗಾಣ - ಸಿದ್ದಿಪೇಟ್, ಸಂಗಾರೆಡ್ಡಿ, ಜಗ್ತಿಯಾಲ್, ಕೊತಗುಡೆಂ, ಕೊಡಾಡ್,
ತಾಂಡೂರ್, ಜಹೀರಾಬಾದ್, ನಿರ್ಮಲ್
ಉತ್ತರ ಪ್ರದೇಶ - ರಾಂಪುರ
ಉತ್ತರಾಖಂಡ - ಕಾಶಿಪುರ, ರಾಮನಗರ
ಪಶ್ಚಿಮ ಬಂಗಾಳ - ಬಂಕುರಾ
-
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications