ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ: ಕರ್ನಾಟಕದ ಯಾವ ನಗರಗಳಿಗೆ ಕೊಡುಗೆ? ತಿಳಿಯಿರಿ

ದೇಶದ 50 ನಗರಗಳಲ್ಲಿ ತನ್ನ 5G ಸೇವೆಗಳನ್ನು ಆರಂಭಿಸಿರುವುದಾಗಿ ರಿಲಯನ್ಸ್ ಜಿಯೋ ಮಂಗಳವಾರ ಘೋಷಿಸಿದೆ. ಈ 50 ನಗರಗಳಲ್ಲಿ ಕರ್ನಾಟಕದ 5 ನಗರಗಳೂ ಸೇರಿವೆ. ಈ ನಗರಗಳು ಯಾವುದೆಂದು ಇಲ್ಲಿ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜನವರಿ 24: ದೇಶದ 50 ನಗರಗಳಲ್ಲಿ ತನ್ನ 5G ಸೇವೆಗಳನ್ನು ಆರಂಭಿಸಿರುವುದಾಗಿ ರಿಲಯನ್ಸ್ ಜಿಯೋ ಮಂಗಳವಾರ ಘೋಷಿಸಿತು. ಇದು ಈ 5G ಸೇವೆಗಳಿಗೆ ಸಂಬಂಧಿಸಿದ ಅತಿದೊಡ್ಡ ಘೋಷಣೆಯಾಗಿದೆ ಎಂದು ರಿಲಯನ್ಸ್‌ ಕಂಪನಿ ತಿಳಿಸಿದೆ.

ಜಿಯೋ ಹೇಳಿಕೆಯ ಪ್ರಕಾರ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಹರಿಯಾಣ, ಜಾರ್ಖಂಡ್, ಕರ್ನಾಟಕ, ಪುದುಚೇರಿ ಮತ್ತು ಕೇರಳದ ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿದೆ.

ಜಿಯೋ ಬಳಕೆದಾರರಿಗೆ ಗುಡ್‌ನ್ಯೂಸ್‌: ಮಂಗಳೂರಿನಲ್ಲಿ ಜಿಯೋ 5G ಸೇವೆ ಆರಂಭಜಿಯೋ ಬಳಕೆದಾರರಿಗೆ ಗುಡ್‌ನ್ಯೂಸ್‌: ಮಂಗಳೂರಿನಲ್ಲಿ ಜಿಯೋ 5G ಸೇವೆ ಆರಂಭ

ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯದ ನಗರಗಳೂ ಇದರಲ್ಲಿ ಸೇರಿವೆ.

Jio 5G now available in Bagalkote, Chikkamagaluru, Hassan, Mandya and Tumakuru

ಇದರೊಂದಿಗೆ, 184 ನಗರಗಳಲ್ಲಿ ಜಿಯೋ ಬಳಕೆದಾರರು ಈಗ 5G ಸೇವೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಟೆಲ್ಕೊದ ಹೇಳಿಕೆ ತಿಳಿಸಿದೆ.

'ರಿಲಯನ್ಸ್ ಜಿಯೋ ಇಂದು 50 ನಗರಗಳಲ್ಲಿ ತನ್ನ ನಿಜವಾದ 5G ಸೇವೆಗಳನ್ನು ಘೋಷಿಸಿದೆ' ಎಂದು ಕಂಪನಿ ಹೇಳಿದೆ.

ಇಂದಿನಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 Gbps ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಬಹುದು ಎಂದು ತಿಳಿಸಿದೆ. ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು Jio ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ ಎಂದು ಕಂಪನಿ ಹೇಳಿದೆ,

'17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5G ಸೇವೆಗಳನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಈಗ 5G ಸೇವೆಗಳನ್ನು 184 ನಗರಗಳಿಗೆ ವಿಸ್ತರಿಸಿದಂತಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳ ಪೈಕಿ, 5G ಸೇವೆಗಳ ಅತಿದೊಡ್ಡ ಘೋಷಣೆ ಇದಾಗಿದೆ' ಎಂದು ಜಿಯೋ ವಕ್ತಾರರು ಹೇಳಿದ್ದಾರೆ.

Jio 5G now available in Bagalkote, Chikkamagaluru, Hassan, Mandya and Tumakuru

ಇಂದಿನಿಂದ ಜಿಯೋ 5G ಸೇವೆ ಹೊಂದಲಿರುವ ನಗರಗಳ ಸಂಪೂರ್ಣ ಪಟ್ಟಿ ಇಲ್ಲಿದೆ

- ಚಿತ್ತೂರು, ಆಂಧ್ರಪ್ರದೇಶ
- ಕಡಪ, ಆಂಧ್ರಪ್ರದೇಶ
- ನರಸರಾವ್‌ಪೇಟೆ, ಆಂಧ್ರಪ್ರದೇಶ
- ಓಂಗೋಲ್, ಆಂಧ್ರಪ್ರದೇಶ
- ರಾಜಮಹೇಂದ್ರವರಂ, ಆಂಧ್ರಪ್ರದೇಶ
- ಶ್ರೀಕಾಕುಳಂ, ಆಂಧ್ರಪ್ರದೇಶ
- ವಿಜಯನಗರಂ, ಆಂಧ್ರಪ್ರದೇಶ
- ನಾಗಾನ್, ಅಸ್ಸಾಂ
- ಬಿಲಾಸ್‌ಪುರ, ಛತ್ತೀಸ್‌ಗಢ
- ಕೊರ್ಬಾ, ಛತ್ತೀಸ್‌ಗಢ
- ರಾಜನಂದಗಾಂವ್, ಛತ್ತೀಸ್‌ಗಢ
- ಪಣಜಿ, ಗೋವಾ
- ಅಂಬಾಲಾ, ಹರಿಯಾಣ
- ಬಹದ್ದೂರ್‌ಗಢ, ಹರಿಯಾಣ
- ಹಿಸಾರ್, ಹರಿಯಾಣ
- ಕರ್ನಾಲ್, ಹರಿಯಾಣ
- ಪಾಣಿಪತ್, ಹರಿಯಾಣ
- ರೋಹ್ಟಕ್, ಹರಿಯಾಣ
- ಸಿರ್ಸಾ, ಹರಿಯಾಣ
- ಸೋನಿಪತ್, ಹರಿಯಾಣ
- ಧನ್ಬಾದ್, ಜಾರ್ಖಂಡ್
- ಬಾಗಲಕೋಟೆ, ಕರ್ನಾಟಕ
- ಚಿಕ್ಕಮಗಳೂರು, ಕರ್ನಾಟಕ
- ಹಾಸನ, ಕರ್ನಾಟಕ
- ಮಂಡ್ಯ, ಕರ್ನಾಟಕ
- ತುಮಕೂರು, ಕರ್ನಾಟಕ
- ಆಲಪ್ಪುಳ, ಕೇರಳ
- ಕೊಲ್ಲಾಪುರ, ಮಹಾರಾಷ್ಟ್ರ
- ನಾಂದೇಡ್-ವಘಾಲಾ, ಮಹಾರಾಷ್ಟ್ರ
- ಸಾಂಗ್ಲಿ, ಮಹಾರಾಷ್ಟ್ರ
- ಬಾಲಸೋರ್, ಒಡಿಶಾ
- ಬರಿಪಾದ, ಒಡಿಶಾ
- ಭದ್ರಕ್, ಒಡಿಶಾ
- ಜರ್ಸುಗುಡ, ಒಡಿಶಾ
- ಪುರಿ, ಒಡಿಶಾ
- ಸಂಬಲ್ಪುರ್, ಒಡಿಶಾ
- ಪುದುಚೇರಿ, ಪುದುಚೇರಿ
- ಅಮೃತಸರ, ಪಂಜಾಬ್
- ಬಿಕಾನೇರ್, ರಾಜಸ್ಥಾನ
- ಕೋಟಾ, ರಾಜಸ್ಥಾನ
- ಧರ್ಮಪುರಿ, ತಮಿಳುನಾಡು
- ಈರೋಡ್, ತಮಿಳುನಾಡು
- ತೂತುಕುಡಿ, ತಮಿಳುನಾಡು
- ನಲ್ಗೊಂಡ, ತೆಲಂಗಾಣ
- ಝಾನ್ಸಿ, ಉತ್ತರ ಪ್ರದೇಶ
- ಅಲಿಗಢ, ಉತ್ತರ ಪ್ರದೇಶ
- ಮೊರಾದಾಬಾದ್, ಉತ್ತರ ಪ್ರದೇಶ
- ಸಹರಾನ್‌ಪುರ, ಉತ್ತರ ಪ್ರದೇಶ
- ಅಸನ್ಸೋಲ್, ಪಶ್ಚಿಮ ಬಂಗಾಳ
- ದುರ್ಗಾಪುರ, ಪಶ್ಚಿಮ ಬಂಗಾಳ

English summary
In the largest-ever launch of 5G services, Reliance Jio has rolled out its Jio True 5G service in 50 cities today. With this, Jio 5G services are available across 184 cities in the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X