ಶೀಘ್ರವೇ ಭಾರತದ ಮಾರುಕಟ್ಟೆಗೆ ಆಲಿಬಾಬಾ ಆಗಮನ
ನವದೆಹಲಿ, ಏ. 1 : ಇ ಕಾಮರ್ಸ್ ಕ್ಷೇತ್ರದ ಬೆಳವಣಿಗೆಗೆ ಭಾರತದಲ್ಲಿ ಉತ್ತಮ ಅವಕಾಶ ಇದೆ ಎಂದು ಮನಗಂಡಿರುವ ಚೀನಾದ ದೈತ್ಯ ಕಂಪನಿ ಆಲಿಬಾಬಾ ಹೆಜ್ಜೆ ಇಡಲು ಸಿದ್ಧವಾಗಿದೆ. ಆಲಿಬಾಬಾ ಮುಖ್ಯಸ್ಥ ಜಾಕ್ ಮಾ ಪ್ರಾಥಮಿಕವಾಗಿ ಸಣ್ಣ ಸಂಸ್ಥೆಗಳಲ್ಲಿ ಬಂಡವಾಳ ಹೂಡುತ್ತೇನೆ ಎಂದು ತಿಳಿಸಿದ್ದಾರೆ.[ಆಲಿಬಾಬಾ ಚೀನಾದ ಇ ಕಾಮರ್ಸ್ ದೈತ್ಯ]
ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಜಾಕ್ ಮಾ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಭಾರತದಲ್ಲಿ ಸಣ್ಣ ಉದ್ದಿಮೆಗಳ ವೃದ್ಧಿಗೆ ನೆರವಾಗುವ ಕುರಿತಾದ ತಮ್ಮ ಯೋಜನೆಯನ್ನು ಪ್ರಧಾನಿ ಮುಂದಿಟ್ಟಿದ್ದಾರೆ.

ಮುಂದಿನ 3 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಣ್ಣ ಉದ್ದಿಮೆಗಳಿಗೆ ನೆರವಾಗುವುದು ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಾಕ್ ಮಾ ಹೇಳಿದ್ದಾರೆ.
ಈಗಾಗಲೇ ಚೀನಾದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ಆಲಿಬಾಬಾ ಭಾರತಕ್ಕೆ ಕಾಲಿಡುವದು ಬಹುತೇಕ ಖಚಿತವಾಗಿದೆ. ಆಲಿಬಾಬಾ ಬಂದರೆ ಆನ್ ಲೈನ್ ಮಾರುಕಟ್ಟೆಯಲ್ಲಿ ಮತ್ತಷ್ಟು ಪೈಪೋಟಿ ನಿರೀಕ್ಷಿಸಬಹುದು.[ಬೇಸಿಗೆ ಆನ್ ಲೈನ್ ಹಬ್ಬಕ್ಕೆ ಭರಪೂರ ಕೊಡುಗೆ]
Had a very good meeting with Mr. Jack Ma. @alibabagroup pic.twitter.com/QhMbrVTvWE
— Narendra Modi (@narendramodi) March 30, 2015 ಜಾಕ್ ಮಾ ಅವರೊಂದಿಗಿನ ಮಾತುಕತೆ ಉತ್ತಮವಾಗಿತ್ತು ಎಂದು ಪ್ರಧಾನಿ ಮೋದಿ ಕೂಡಾ ಟ್ವೀಟ್ ಮಾಡಿದ್ದಾರೆ. ಹಿಂದೆ 2014ರ ನವೆಂಬರ್‌ನಲ್ಲಿ ಜಾಕ್ ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಎಲ್ಲ ವಿವರಗಳನ್ನು ಮಾಧ್ಯಮಕ್ಕೆ ನೀಡಲಾಗಿಲ್ಲ.












Click it and Unblock the Notifications