ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಹೆಚ್ಚಾಯ್ತು ಇನ್ಸುರೆನ್ಸ್ ಕ್ಲೇಮ್; ವಿಮಾ ಕಂಪನಿಗಳ ಪೀಕಲಾಟ

|
Google Oneindia Kannada News

ಬೆಂಗಳೂರು, ಸೆ. 15: ನಗರದಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಹಾಮಳೆ ಮತ್ತು ಪ್ರವಾಹ ಕೆಲ ಪ್ರದೇಶಗಳಲ್ಲಿ ಜನಜೀವನವನ್ನು ಅಲುಗಾಡಿಸಿದೆ. ದೊಡ್ಡ ದೊಡ್ಡ ಲೇಔಟ್‌ಗಳಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದ ಶ್ರೀಮಂತರೂ ನಲುಗಿ ಹೋಗಿದ್ದರು. ಎತ್ತರದ ಕಟ್ಟಡದಿಂದ ನಿಂತು ನೋಡಿದರೆ ಇಡೀ ಪ್ರದೇಶವೇ ಕೆರೆ ಎಂಬಂತೆ ಭಾಸವಾಗುತ್ತಿತ್ತು ಆವತ್ತಿನ ದಿನಗಳ ದೃಶ್ಯ.

ವಿಲ್ಲಾಗಳ ಒಳಗೆ ನೀರು ನುಗ್ಗಿದ್ದು, ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿಹೋಗಿದ್ದು, ಇವೆಲ್ಲವೂ ರಾಷ್ಟ್ರಾದ್ಯಂತ ಗಮನ ಸೆಳೆಯಿತು. ಐಟಿ ವಲಯದಲ್ಲೇ ಹೆಚ್ಚಾಗಿ ಈ ಅವಾಂತರ ಆಗಿದ್ದು. ಮಳೆಯಿಂದಾಗಿ ಬೆಂಗಳೂರಿನ ಐಟಿ ಕಂಪನಿಗಳು ನೂರಾರು ಕೋಟಿ ರೂ ನಷ್ಟ ಮಾಡಿಕೊಂಡಿವೆ. ಇನ್ನು, ನಿವಾಸಿಗಳು ಅನುಭವಿಸಿದ ನಷ್ಟಗಳೂ ಕೋಟ್ಯಂತರ.

ನೀರಲ್ಲಿ ಕಾರು ನಿಂತರೆ ಸ್ಟಾರ್ಟ್ ಮಾಡದಿರಿ ಜೋಕೆ; ಇನ್ಷೂರೆನ್ಸ್ ಟಿಪ್ಸ್ನೀರಲ್ಲಿ ಕಾರು ನಿಂತರೆ ಸ್ಟಾರ್ಟ್ ಮಾಡದಿರಿ ಜೋಕೆ; ಇನ್ಷೂರೆನ್ಸ್ ಟಿಪ್ಸ್

ನಿನ್ನೆ ಮೊನ್ನೆ ಮಳೆ ರಾಚಿದೆಯಾದರೂ ಸೆಪ್ಟೆಂಬರ್ 5ರಿಂದ 8ರವರೆಗೆ ಸುರಿದ ಮಳೆ ಬೆಂಗಳೂರಿನ ಔಟರ್ ರಿಂಗ್ ರಸ್ತೆ, ಸರ್ಜಾಪುರ ಇತ್ಯಾದಿ ಪ್ರದೇಶಗಳಲ್ಲಿ ಜನರನ್ನು ಹೈರಾಣಗೊಳಿಸಿತು. ಇದೇ ವೇಳೆ, ಬೆಂಗಳೂರಿನ ಮಹಾಮಳೆ ಕೇವಲ ಜನಜೀವನ ಮಾತ್ರವಲ್ಲ ವಿಮಾ ಕಂಪನಿಗಳನ್ನೂ ಹೈರಾಣಗೊಳಿಸಿದೆ.

Insurance Companies Flooded With Claims After The Bengaluru Rain and Flood

ಮಳೆ ಮತ್ತು ಪ್ರವಾಹದಿಂದ ಅನೇಕ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಆ ವಾಹನಗಳ ಮಾಲೀಕರು ಇನ್ಸುರೆನ್ಸ್ ಕ್ಲೇಮ್ ಮಾಡತೊಡಗಿದ್ದಾರೆ. ಕೋಟ್ಯಂತರ ರೂ ಮೊತ್ತವನ್ನು ಕ್ಲೇಮ್ ಮಾಡಲಾಗಿದೆ. ದಿನವೂ ಕ್ಲೇಮ್‌ಗಳಿಗೆ ಕೋರಿ ಅರ್ಜಿ ಬರುತ್ತಲೇ ಇವೆ.

ಮಳೆಯಲ್ಲಿ ಕಾರು: ಸುರಕ್ಷಿತ ಕ್ರಮ ಮತ್ತು ದುರಸ್ತಿ ಹೇಗೆ?ಮಳೆಯಲ್ಲಿ ಕಾರು: ಸುರಕ್ಷಿತ ಕ್ರಮ ಮತ್ತು ದುರಸ್ತಿ ಹೇಗೆ?

ಇನ್ಸುರೆನ್ಸ್ ಕಂಪನಿಯಿಂದ ಪರಿಶೀಲನೆ

ಕಾರುಗಳನ್ನು ಪರಿಶೀಲನೆ ಮಾಡದೆಯೇ ಇನ್ಸುರೆನ್ಸ್ ಕ್ಲೇಮ್ ಪ್ರಕ್ರಿಯೆ ಮುಂದುವರಿಸಲು ಆಗುವುದಿಲ್ಲ. ಹೀಗಾಗಿ, ಕ್ಲೇಮ್‌ಗೆ ಅರ್ಜಿ ಹಾಕಿ ಹಲವು ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ.

ಹತ್ತು ದಿನಗಳ ಹಿಂದೆ ನೀರಿನಲ್ಲಿ ಮುಳುಗಿದ ಕಾರನ್ನು ಹಲವರು ಇನ್ನೂ ದುರಸ್ತಿ ಮಾಡದೇ ಹಾಗೇ ಬಿಟ್ಟಿದ್ದಾರೆ. ಇನ್ಸುರೆನ್ಸ್ ಕಂಪನಿಯ ಸಿಬ್ಬಂದಿಯ ಪರಿಶೀಲನೆಗಾಗಿ ಕಾಯುತ್ತಿರುವ ಜನರು ನೂರಾರು ಸಂಖ್ಯೆಯಲ್ಲಿದ್ದಾರೆ. ವಿಮಾ ಸಂಸ್ಥೆಗಳ ಸಿಬ್ಬಂದಿ ಕೂಡ ಪುರುಸೊತ್ತು ಇಲ್ಲದಂತಾಗಿದ್ದಾರೆ.

Insurance Companies Flooded With Claims After The Bengaluru Rain and Flood

"ಭಾರೀ ಮಳೆ ಬಂದು ಬೇಸ್ಮೆಂಟ್‌ನಲ್ಲಿ ಪಾರ್ಕ್ ಮಾಡಿದ್ದ ಕಾರಿಗೆ ನೀರು ತುಂಬಿಹೋಗಿತ್ತು. ಇನ್ಷೂರೆನ್ಸ್ ಸಿಬ್ಬಂದಿ ಬಂದು ಕಾರಿನ ಸರ್ವೇ ಮಾಡಿ, ಕಾರನ್ನು ಗ್ಯಾರೇಜ್‌ಗೆ ಟೋವ್ ಮಾಡಿ ವಾಹನಕ್ಕಾದ ನಷ್ಟವನ್ನು ಅಂದಾಜು ಮಾಡಿ ಕ್ಲೇಮ್ ಸೆಟಲ್ ಮಾಡಿದರು. ಇದಕ್ಕೆ 4 ದಿನ ಬೇಕಾಯಿತು," ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

"ಆದರೆ, ನನ್ನ ಕಾರನ್ನು ದುರಸ್ತಿಗೊಳಿಸಲು ಸಾಧ್ಯವಾಗದಷ್ಟು ಹಾಳಾಗಿ ಹೋಗಿದೆ ಎಂಬ ಸಂಗತಿ ತಿಳಿಯಿತು. ಮನೆಯ ಬಳಿ ಇರುವ ಗ್ಯಾರೇಜ್‌ನವರು ಈ ಕಾರನ್ನು ರಿಪೇರಿ ಮಾಡಬಹುದೇನೋ" ಎಂದು ಇವರು ಆಶಿಸಿದ್ದಾರೆ.

ಪ್ರೀಮಿಯಂ ಕಾರುಗಳಿಗೆ ಭಾರೀ ನಷ್ಟ

ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್, ಬಜಾಜ್ ಅಲಾಯನ್ಸ್, ಆಕೋ ಜನರಲ್ ಇನ್ಸೂರೆನ್ಸ್, ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಮೊದಲಾದ ವಿಮಾ ಸಂಸ್ಥೆಗಳಿಗೆ ಸಾಕಷ್ಟು ಕ್ಲೇಮ್ ಅರ್ಜಿಗಳು ಬಂದಿವೆಯಂತೆ. ಪ್ರೀಮಿಯಂ ಕೆಟಗರಿಗೆ ಸೇರಿದ ಐಷಾರಾಮಿ ಕಾರುಗಳ ಹಾನಿಗೆ ಕ್ಲೇಮ್ ಮಾಡಿದ ಅರ್ಜಿಗಳೂ ಬಹಳ ಇವೆ. ಐಸಿಐಸಿಐ ಲೊಂಬಾರ್ಡ್ ಸಂಸ್ಥೆ ಪ್ರಕಾರ ಐಷಾರಾಮಿ ಕಾರುಗಳಿಗೆ ಆಗಿರುವ ನಷ್ಟ 10 ಕೋಟಿ ದಾಟಿದೆ.

"ಬಿಎಂಡಬ್ಲ್ಯೂ, ಮರ್ಸಿಡೆಸ್, ಆಡಿ ಮೊದಲಾದ ಪ್ರೀಮಿಯಂ ಸೆಗ್ಮೆಂಟ್‌ನ ಕಾರುಗಳಿಗೆ ದೊಡ್ಡ ಮೊತ್ತದ ಕ್ಲೇಮ್‌ಗಳು ಸಲ್ಲಿಕೆ ಆಗಿವೆ. ಸೆಪ್ಟೆಂಬರ್ 13ರವರೆಗೆ ಬಂದಿರುವ ಅರ್ಜಿಗಳನ್ನು ನೋಡಿದರೆ ಈ ಪ್ರೀಮಿಯಂ ವಾಹನಗಳಿಗೆ ಆಗಿರುವ ನಷ್ಟ 10 ಕೋಟಿ ದಾಟಿರುವ ಅಂದಾಜು ಇದೆ" ಎಂದು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷೂರೆನ್ಸ್ ಸಂಸ್ಥೆಯ ಅಧಿಕಾರಿ ಸಂಜಯ್ ದತ್ತ ಹೇಳುತ್ತಾರೆ. ಮುಂದಿನ ಕೆಲ ದಿನಗಳಲ್ಲಿ ಪ್ರವಾಹ ಸಂಬಂಧಿತ ಕಾರು ಹಾನಿ ಪ್ರಕರಣಗಳಲ್ಲಿ ಇನ್ನೂ ನೂರಕ್ಕೂ ಹೆಚ್ಚು ಕ್ಲೇಮ್‌ಗಳು ಬರಬಹುದು ಎಂದು ಇವರು ನಿರೀಕ್ಷಿಸಿದ್ದಾರೆ.

ಆ್ಯಕೋ ಜನರಲ್ ಇನ್ಸುರೆನ್ಸ್ ಕಂಪನಿ ಈಗಾಗಲೇ 200ಕ್ಕೂ ಹೆಚ್ಚು ಕ್ಲೇಮ್ ಅರ್ಜಿಗಳನ್ನು ಪಡೆದಿದೆ. ಇದರಲ್ಲಿ ಶೇ. 20ರಷ್ಟು ಪ್ರಕರಣಗಳಲ್ಲಿ ವಾಹನ ಸಂಪೂರ್ಣ ಹಾಳಾಗಿರುವುದ್ದಾಗಿದೆ.

ಇನ್ನು ಬಜಾಜ್ ಅಲಯನ್ಸ್ ಸಂಸ್ಥೆಗೆ ಬರುವ ಆಸ್ತಿ ನಷ್ಟ ಅರ್ಜಿಗಳ ಸಂಖ್ಯೆ ಈಗ ದ್ವಿಗುಣಗೊಂಡಿದೆ. ಬಹುತೇಕ ಎಲ್ಲಾ ಇನ್ಷೂರೆನ್ಸ್ ಕಂಪನಿಗಳದ್ದೂ ಇದೇ ಕಥೆ. ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಸಂಸ್ಥೆಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನ ಪ್ರವಾಹ ಘಟನೆ ಸಂಬಂಧ ಈಗಾಗಲೇ 5 ಕೋಟಿ ರೂಗೂ ಹೆಚ್ಚು ಮೊತ್ತದಷ್ಟು ಕ್ಲೇಮ್‌ಗೆ ಅರ್ಜಿ ಬಂದಿರುವ ಮಾಹಿತಿ ಇದೆ.

(ಒನ್ಇಂಡಿಯಾ ಸುದ್ದಿ)

English summary
The great rain and flood in Bengaluru has created huge loss of properties for the residents. Number of insurance claims for flood damage is raised drastically after September 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X