ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4,500 ಕೋಟಿಗೆ ಇಳಿದಿದೆ ಸ್ವಿಟ್ಜರ್ ಲೆಂಡ್ ನಲ್ಲಿನ ಭಾರತೀಯರ ಕಪ್ಪು ಹಣ

|
Google Oneindia Kannada News

ಪೊಲೀಸರ ಜೀಪ್ ಬರುವಾಗ ಭೋಂ ಎಂದು ಶಬ್ದ ಮಾಡಿ ಬರುತ್ತದಲ್ಲಾ, ಹಾಗಾಗಿದೆ ನೋಡಿ ಕೇಂದ್ರ ಸರಕಾರದ ಸ್ಥಿತಿ. ಸ್ವಿಟ್ಜರ್ ಲೆಂಡ್ ನ ಬ್ಯಾಂಕ್ ಗಳಲ್ಲಿ ಭಾರತೀಯ ಇಟ್ಟಿದ್ದಾರೆ ಎನ್ನಲಾದ ಕಪ್ಪು ಹಣದ ಮೊತ್ತ 2016ರಲ್ಲಿ ಭಾರತೀಯ ರುಪಾಯಿಗಳಲ್ಲೇ ಹೇಳುವುದಾದರೆ 4,500 ಕೋಟಿಗೆ ಇಳಿದಿದೆಯಂತೆ.

ಇದು ದಾಖಲೆ ಮೊತ್ತಕ್ಕೆ ಇಳಿಕೆ ಕಂಡಿದೆ ಎಂಬುದು ಸುದ್ದಿ. ಒಟ್ಟಾರೆಯಾಗಿ ಜಗತ್ತಿನ ನಾನಾ ದೇಶಗಳ ಕಪ್ಪು ಹಣ ಖದೀಮರು ಆ ದೇಶದಲ್ಲಿ ಇಟ್ಟಿರುವ ಮೊತ್ತ 96 ಲಕ್ಷ ಕೋಟಿಗೂ ಸ್ವಲ್ಪ ಹೆಚ್ಚು. ಇನ್ನು ಗುರುವಾರ ಭಾರತೀಯರು ಬಚ್ಚಿಟ್ಟಿರುವ ಕಪ್ಪು ಹಣದ ಮೊತ್ತ ಇಷ್ಟು ಎಂದು ಸ್ವಿಟ್ಜರ್ ಲೆಂಡ್ ದೇಶದವರೇ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಸ್ವಿಸ್ ಸರ್ಕಾರದಿಂದ ಕಪ್ಪು ಹಣದ ಮಾಹಿತಿ ರವಾನೆಗೆ ಕ್ರಮಸ್ವಿಸ್ ಸರ್ಕಾರದಿಂದ ಕಪ್ಪು ಹಣದ ಮಾಹಿತಿ ರವಾನೆಗೆ ಕ್ರಮ

ಭಾರತೀಯರು ಅಲ್ಲಿಟ್ಟಿದ್ದ ಮೊತ್ತ ಕಳೆದ ವರ್ಷವೇ ಶೇ ನಲವತ್ತೈದರಷ್ಟು ಕಡಿಮೆ ಆಗಿದೆ. ಈ ರೀತಿ ಇಲ್ಲಿವರೆಗೆ ಇಟ್ಟಿದ್ದ ಮೊತ್ತದ ಪೈಕಿಯೇ ಇದು ಕನಿಷ್ಠ ಎಂದು ಕೂಡ ತಿಳಿಸಲಾಗಿದೆ.

Black Money

ಸತತ ಮೂರನೇ ವರ್ಷ ಈ ರೀತಿ ಕಪ್ಪು ಹಣದ ಮೊತ್ತ ಕಡಿಮೆ ಆಗುತ್ತಿದೆ. ಭಾರತದೊಂದಿಗೆ ಒಪ್ಪಂದಕ್ಕೆ ಬಂದಿರುವ ಅಲ್ಲಿನ ಬ್ಯಾಂಕ್ ಗಳು ಮುಂದಿನ ವರ್ಷ ಅಲ್ಲ, ಅದಕ್ಕೂ ಮುಂದಿನ ವರ್ಷ ಕಪ್ಪು ಹಣದ ಬಗ್ಗೆ ದಾಖಲೆ ಹಂಚಿಕೊಳ್ಳುತ್ತೇವೆ ಎಂದಿವೆ.

ಭಾರತದ ಸುಪ್ರೀಂ ಕೋರ್ಟ್ ನ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡವನ್ನೇ ರಚಿಸಲಾಗಿದೆ. ಅದರ ಕೆಲಸ ಏನೆಂದರೆ ಸ್ವಿಟ್ಜರ್ ಲೆಂಡ್ ಸೇರಿದಂತೆ ಅಂಥ ದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಹೊರ ತೆಗೆಯುವುದು. ಅವರೇನೋ ಪ್ರಕರಣ ಅದು-ಇದು ಅಂತೇನೋ ದಾಖಲಿಸಿದರೂ ಸಾಕ್ಷ್ಯ ಪುರಾವೆ ಮೂಲಕ ಸಾಬೀತು ಪಡಿಸಲು ಸಾಧ್ಯವಾಗಿದ್ದು ಕೆಲವೇ.

ಇನ್ನು ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪು ಹಣ ತಂದರೆ ದೇಶದ ಪ್ರತಿ ಪ್ರಜೆಯ ಖಾತೆಗೆ ಐದು ಲಕ್ಷ ರುಪಾಯಿ ಹಾಕಬಹುದು ಎಂಬುದು ಬಿಜೆಪಿಯವರ ಮಾತಾಗಿತ್ತು. ಇದೇ ಸ್ಥಿತಿ ನೋಡಿದರೆ ಪ್ರತಿ ಪ್ರಜೆಗೆ ನೂರು ಗ್ರಾಂ ಕಳ್ಳೇಬೀಜ ಕೂಡ ಸಿಗಲ್ಲ ಅನ್ನಿಸುತ್ತೆ.

English summary
Money parked by Indians in Switzerland’s banks nearly halved to 676 Swiss francs (about Rs. 4,500 crore) in 2016 to hit a record low amid a continuing clampdown on the suspected black money stashed behind their famed secrecy walls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X