Indian Rupee: 1 ಡಾಲರ್‌ಗೆ 91.95 ರೂಪಾಯಿ, ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕ ಕುಸಿತ
ಭಾರತದ ರೂಪಾಯಿ ಮೌಲ್ಯ ಇಂದು ಐತಿಹಾಸಿಕ ಮಟ್ಟಕ್ಕೆ ಕುಸಿತ ಕಂಡಿದೆ, ಒಂದು ಕಡೆ ಷೇರುಪೇಟೆ ಕುಸಿದಿರುವ ಬೇಸರದ ನಡುವೆಯೇ ಇದೀಗ ರೂಪಾಯಿ ಮೌಲ್ಯ ಕೂಡ ಇಳಿಕೆಯಾಗಿದೆ. ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಾಣುತ್ತಾ ಇದೆ. ಹಲವಾರು ಕಾರಣಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದ್ದು, ಇಂದು 1 ಡಾಲರ್ ಎದುರಿಗೆ ಬರೋಬ್ಬರಿ 91.95ಕ್ಕೆ ರೂಪಾಯಿ ಕುಸಿತ ಕಾಣುವ ಮೂಲಕ ಮಾರುಕಟ್ಟೆ ಆತಂಕಕ್ಕೆ ಕಾರಣವಾಗಿದೆ. ಭಾರತದ ರೂಪಾಯಿ ಮೌಲ್ಯ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಂಡರೂ ನಿರಂತರವಾಗಿ ಇಳಿಕೆಯಾಗುತ್ತಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ನಿರಂತರ ಷೇರು ಮಾರಾಟ ಪ್ರಕ್ರಿಯೆ ನಡೆಯುತ್ತಿರುವ ಕಾರಣಕ್ಕೆ ಇಂದು ಕೂಡ ಷೇರುಪೇಟೆ ಕುಸಿತ ದಾಖಲಿಸಿದೆ. ಇನ್ನು 2026 ಜನವರಿ ತಿಂಗಳಲ್ಲಿ ಈವರೆಗೂ ವಿದೇಶಿ ಹೂಡಿಕೆದಾರರು ಸುಮಾರು 36591 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 50,720 ಕೋಟಿ ರೂಪಾಯಿಯ ಷೇರುಗಳನ್ನ ಖರೀದಿಸಿ ಮಾರುಕಟ್ಟೆಗೆ ಬಲ ತುಂಬುವ ಪ್ರಯತ್ನ ಮಾಡಿದ್ದಾರೆ. ಹೀಗಿದ್ದರೂ ಷೇರುಪೇಟೆ ಈಕ್ವಿಟಿ ಮಾರಾಟ ಹೆಚ್ಚಾಗಿ, ರೂಪಾಯಿ ಮೌಲ್ಯ ಕೂಡ ಕುಸಿಯಲು ಕಾರಣವಾಗಿದೆ ಎಂಬ ಮಾಹಿತಿ ನೀಡುತ್ತಿದ್ದಾರೆ ತಜ್ಞರು.

ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ
ಈ ಒಂದು ವಾರದಲ್ಲೇ ರೂಪಾಯಿ ಮೌಲ್ಯ ಶೇಕಡಾ 1ರಷ್ಟು ಕುಸಿತ ಕಂಡಿದ್ದು, ಬೆಳ್ಳಿ ಮತ್ತು ಇತರ ಆಮದುದಾರರಿಂದ ಬೇಡಿಕೆ, ಡಾಲರ್ ಖರೀದಿ ವ್ಯತ್ಯಾಸಗಳು ಮತ್ತು ಈಕ್ವಿಟಿ ಮೂಲಕ ಈಗ ವಿದೇಶಿ ಹೊರಹರಿವು ಪರಿಣಾಮ ರೂಪಾಯಿ ಮೌಲ್ಯ ಕುಸಿತ ಕಂಡಿದೆ ಎನ್ನಲಾಗಿದೆ. ವಿದೇಶಿ ಹೂಡಿಕೆದಾರರು ಸುಮಾರು 36591 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಮಾರಾಟ ಮಾಡಿರುವ ಹಿನ್ನೆಲೆ ನಿಫ್ಟಿ-50 ಸುಮಾರು ಶೇಕಡಾ 5ರಷ್ಟು ಕುಸಿತ ಕಂಡಿದೆ. ಇನ್ನೊಂದು ಕಡೆ ಚಿನ್ನ ಮತ್ತು ಬೆಳ್ಳಿ ಬೆಲೆ ಮಾತ್ರ ಭಾರಿ ಏರಿಕೆ ಕಂಡಿದೆ.
ಬೆಳ್ಳಿ & ಚಿನ್ನದ ಬೆಲೆ ಏರಿಕೆ
ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಬೆಳ್ಳಿಯ ಬೆಲೆ ಕೂಡ ವಿಪರೀತ ಏರಿಕೆ ಆಗಿದೆ. ಇಂದು ಕೂಡ ಅದೇ ರೀತಿ ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ ಭಾರಿ ಏರಿಕೆ ಕಂಡಿದೆ. ಇರಾನ್ ಹಾಗೂ ಅಮೆರಿಕ ನಡುವಿನ ಕಿರಿಕ್ ಮಧ್ಯೆ ಯುದ್ಧ ಭೀತಿ ಹಿನ್ನೆಲೆ ಚಿನ್ನದ ಬೆಲೆ ನಡುಕ ಹುಟ್ಟಿಸುವ ಹಂತಕ್ಕೆ ತಲುಪುತ್ತಿದೆ ಈಗ. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 1,59,710 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 10 ಗ್ರಾಂಗೆ ಇದೀಗ 1,46,400 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆ ಒಂದೇ ದಿನ 15,000 ಪ್ರತಿ ಕೆಜಿಗೆ ಏರಿಕೆಯಾಗಿ ಇದೀಗ 3,40,000 ರೂಪಾಯಿಗೆ ತಲುಪಿದೆ.
ಒಟ್ನಲ್ಲಿ ಷೇರುಪೇಟೆ ಹಾಗೂ ಬಂಗಾರ ಮಾರುಕಟ್ಟೆಯಲ್ಲಿ ಇಂದು ಭಾರಿ ದೊಡ್ಡ ಬದಲಾವಣೆ ಆಗಿ ಗಮನ ಸೆಳೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಬಜೆಟ್ ಬರಲಿದ್ದು, ಷೇರು ಮಾರುಕಟ್ಟೆಯಲ್ಲಿ ಭಾರಿ ದೊಡ್ಡ ಏರಿಳಿತ ನಿರೀಕ್ಷೆ ಮಾಡಲಾಗುತ್ತಿದೆ. ವಿದೇಶಿ ಹೂಡಿಕೆದಾರರು ಹೊರಗೆ ಹೋದರೂ, ದೇಶೀಯ ಹೂಡಿಕೆದಾರರು ಈ ಹಂತದಲ್ಲಿ ಕೈಹಿಡಿಯುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ಕೂಡ ಹೂಡಿಕೆದಾರರಿಗೆ ಹಲವು ಗುಡ್‌ನ್ಯೂಸ್ ಕೊಡುವ ಸಾಧ್ಯತೆ ಇದ್ದು, ಎಲ್ಲರ ಚಿತ್ತ ಈಗ ಫೆಬ್ರವರಿ 1ರ 2026-27ನೇ ಸಾಲಿನ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications