• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ತಯಾರಿಕಾ ಕ್ಷೇತ್ರದ ರಫ್ತು 2028ರಲ್ಲಿ 1 ಟ್ರಿಲಿಯನ್ ಡಾಲರ್‌ಗೆ ಏರುವ ನಿರೀಕ್ಷೆ

|
Google Oneindia Kannada News

ನವದೆಹಲಿ, ಜುಲೈ 14: ಮುಂದಿನ ಆರು ವರ್ಷದೊಳಗೆ ಭಾರತದ ತಯಾರಿಕಾ ಕ್ಷೇತ್ರಗಳಿಂದ ಆಗುವ ರಫ್ತು ಪ್ರಮಾಣ 1 ಟ್ರಿಲಿಯನ್ ಡಾಲರ್‌ಗೆ ಏರುವ ಸಾಧ್ಯತೆ ಇದೆ. ಹಾಗಂತ ಬೇನ್ ಅಂಡ್ ಕ್ಯಾಪಿಟಲ್ (Bain and Capital) ಸಂಸ್ಥೆ ತಯಾರಿಸಿದ ವರದಿಯಲ್ಲಿ ಅಂದಾಜು ಮಾಡಲಾಗಿದೆ.

'ದಿ ಟ್ರಿಲಿಯನ್-ಡಾಲರ್ ಮ್ಯಾನುಫ್ಯಾಕ್ಚರಿಂಗ್ ಎಕ್ಸ್‌ಪೋರ್ಟ್ಸ್ ಆಪೋರ್ಚುನಿಟಿ ಫಾರ್ ಇಂಡಿಯಾ' ಎಂಬ ಈ ವರದಿಯಲ್ಲಿ, ತಯಾರಿಕಾ ಕ್ಷೇತ್ರದಿಂದ ಅತಿಹೆಚ್ಚು ರಫ್ತು ಮಾಡುವ ಆರು ವಲಯಗಳನ್ನು ಗುರುತಿಸಲಾಗಿದೆ.

Make-in-India Effect: ಭಾರತದಲ್ಲಿ ಆಟಿಕೆಗಳ ಆಮದು ಇಳಿಕೆ, ರಫ್ತು ಏರಿಕೆMake-in-India Effect: ಭಾರತದಲ್ಲಿ ಆಟಿಕೆಗಳ ಆಮದು ಇಳಿಕೆ, ರಫ್ತು ಏರಿಕೆ

ರಾಸಾಯನಿಕ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಫಾರ್ಮಾ, ಟೆಕ್ಸ್‌ಟೈಲ್ಸ್ ಮತ್ತು ಇಂಡಸ್ಟ್ರಿಯಲ್ ಮೆಷಿನರಿ ವಲಯಗಳಿಂದ ರಫ್ತು ಪ್ರಮಾಣ ಹೆಚ್ಚಬಹುದೆಂದು ಈ ವರದಿಯಲ್ಲಿ ನಿರೀಕ್ಷಿಸಲಾಗಿದೆ.

ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ. ಒಂದು ಟ್ರಿಲಿಯನ್ ಡಾಲರ್ ಎಂದರೆ ಸುಮಾರು 80 ಲಕ್ಷ ಕೋಟಿ ರೂಪಾಯಿ ಆಗುತ್ತದೆ. 2027-28ರ ಹಣಕಾಸು ವರ್ಷದಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಉದ್ಯಮಗಳಿಂದ 80 ಲಕ್ಷ ಕೋಟಿ ರೂ ಮೌಲ್ಯದಷ್ಟು ವಸ್ತುಗಳನ್ನು ರಫ್ತು ಮಾಡಲು ಸಾಧ್ಯ ಎಂದು ಬೇನ್ ಅಂಡ್ ಕ್ಯಾಪಿಟಲ್ ವಿಶ್ಲೇಷಿಸಿದೆ.

ರಷ್ಯಾ ಭಾರತದ ಅತಿದೊಡ್ಡ ಗೊಬ್ಬರ ರಫ್ತುದಾರರಷ್ಯಾ ಭಾರತದ ಅತಿದೊಡ್ಡ ಗೊಬ್ಬರ ರಫ್ತುದಾರ

ಅಂದರೆ, ತಯಾರಿಕಾ ಉದ್ಯಮಗಳಿಗೆ 1 ಟ್ರಿಲಿಯನ್ ಡಾಲರ್‌ನಷ್ಟು ರಫ್ತು ಮಾಡುವ ಅವಕಾಶ ಇದೆ. ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಮಾತ್ರ ಇದು ಸಾಧ್ಯ ಎಂಬ ಅಘೋಷಿತ ಸಂದೇಶವೂ ಈ ವರದಿಯಲ್ಲಿ ಅಡಕವಾಗಿದೆ.

ರಫ್ತಿನಲ್ಲಿ ಹಿಂದುಳಿದಿದ್ದ ಭಾರತ

ರಫ್ತಿನಲ್ಲಿ ಹಿಂದುಳಿದಿದ್ದ ಭಾರತ

ಭಾರತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯುಳ್ಳ ದೇಶವಾಗಿದೆ. ವಿಶ್ವದ ಒಟ್ಟೂ ಜಿಡಿಪಿಯಲ್ಲಿ ಭಾರತದ ಪಾಲು ಶೇ. 3.1 ಇದೆ. ಆದರೂ ಕೂಡ ಜಾಗತಿಕ ರಫ್ತು ವ್ಯವಹಾರದಲ್ಲಿ ಭಾರತದ ಪಾಲು ಕೇವಲ 1.6 ಮಾತ್ರ. ಇದೇ ವೇಳೆ, ಜಾಗತಿಕ ರಫ್ತಿನಲ್ಲಿ ಚೀನಾದ್ದೇ ಸಿಂಹಪಾಲಿದೆ. ಶೇ. 15ರಷ್ಟು ರಫ್ತು ಚೀನಾದಿಂದಲೇ ಆಗುತ್ತದೆ. ಅಮೆರಿಕ 8.3%, ಜರ್ಮನಿ 7.9%, ಜಪಾನ್ 3.7% ಮತ್ತು ಬ್ರಿಟನ್ 2.3% ರಫ್ತಿನಲ್ಲಿ ಪಾಲು ಹೊಂದಿವೆ.

ಒಂದೇ ವರ್ಷದಲ್ಲಿ ಗಣನೀಯ ಏರಿಕೆ

ಒಂದೇ ವರ್ಷದಲ್ಲಿ ಗಣನೀಯ ಏರಿಕೆ

ಕೋವಿಡ್ ಸಾಂಕ್ರಾಮಿಕ ರೋಗಕ್ಕೂ ಮುನ್ನ 2018-19ರ ಹಣಕಾಸು ವರ್ಷದಲ್ಲಿ ಭಾರತದ ತಯಾರಿಕಾ ಕ್ಷೇತ್ರದಿಂದ 328 ಬಿಲಿಯನ್, ಅಂದರೆ 0.328 ಟ್ರಿಲಿಯನ್ ಡಾಲರ್‌ನಷ್ಟು ರಫ್ತು ಆಗಿತ್ತು. ಅದು ಆಗಿನ ಮಟ್ಟಕ್ಕೆ ಹೊಸ ದಾಖಲೆ. ಕೋವಿಡ್ ಬಂದ ಬಳಿಕ 2020-21ರ ವರ್ಷದಲ್ಲಿ ಇದು 290 ಬಿಲಿಯನ್ ಡಾಲರ್‌ಗೆ ಕುಸಿಯಿತು. ಆದರೆ, 2021-22ರ ಹಣಕಾಸು ವರ್ಷದಲ್ಲಿ ಭಾರತದ ತಯಾರಿಕಾ ವಲಯದ ಒಟ್ಟಾರೆ ರಫ್ತು 418 ಬಿಲಿಯನ್ ಡಾಲರ್‌ಗೆ ಏರಿದೆ. ಇದು ಗಮನಾರ್ಹ ಏರಿಕೆ ಎಂಬುದರಲ್ಲಿ ಸಂಶಯ ಇಲ್ಲ. ಕೋವಿಡ್ ಸಂಕಷ್ಟದ ಕಾಲದಲ್ಲೂ 290 ಬಿಲಿಯನ್ ಡಾಲರ್‌ನಷ್ಟು ರಫ್ತು ಮಾಡಿದ್ದೂ ಕೂಡ ಸಣ್ಣ ವಿಷಯವಲ್ಲ.

ತಯಾರಿಕಾ ಕ್ಷೇತ್ರದ ಪ್ರಕಾಶಕ್ಕೆ ಏನು ಕಾರಣ?

ತಯಾರಿಕಾ ಕ್ಷೇತ್ರದ ಪ್ರಕಾಶಕ್ಕೆ ಏನು ಕಾರಣ?

ಬೇನ್ ಅಂಡ್ ಕಂಪನಿಯ ವರದಿಯಲ್ಲಿ ಭಾರತದ ತಯಾರಿಕಾ ವಲಯ ಕಳೆದ 2 ವರ್ಷದಲ್ಲಿ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಾಣಲು ಕೆಲ ಸಂಗತಿಗಳನ್ನು ಪತ್ತೆ ಹೆಚ್ಚಿದೆ. ಕೋವಿಡ್ ಕಾಲಘಟ್ಟದಲ್ಲಿ ಬಹಳ ತೊಂದರೆಯಾಗಿದ್ದ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಜಾಗತಿಕ ಪ್ರಯತ್ನವು ಭಾರತಕ್ಕೆ ಅನುಕೂಲ ಮಾಡಿಕೊಟ್ಟಿರುವ ಸಂಗತಿಯೂ ಇದರಲ್ಲಿ ಒಂದು.

ಅಮೆರಿಕದ ಕಂಪನಿಗಳು ತಮ್ಮ ಕಾರ್ಯಕ್ಷೇತ್ರವನ್ನು ಹೆಚ್ಚಾಗಿ ಸ್ಥಳಾಂತರ ಮಾಡಿದ ನಾಲ್ಕು ದೇಶಗಳಲ್ಲಿ ಭಾರತವೂ ಒಂದು. ಹಾಗೆಯೇ, ಫಾರ್ಮಾ, ರಾಸಾಯನಿಕ, ಔದ್ಯಮಿಕ ಯಂತ್ರೋಪಕರಣ, ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಜವಳಿ ಕ್ಷೇತ್ರದಲ್ಲಿ ಭಾರತದ ತಯಾರಿಕಾ ಕಂಪನಿಗಳು ಸುದೃಢವಾಗಿವೆ.

ಕೇಂದ್ರ ಸರಕಾರ ಹೊಸ ಹೂಡಿಕೆಗಳಿಗೆ ಆದ್ಯತೆ ಕೊಡುವುದರ ಜೊತೆಗೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣಕ್ಕೂ ಒತ್ತು ಕೊಡುತ್ತಿರುವುದು ಫಲ ನೀಡುತ್ತಿರಬಹುದು ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ

ತಯಾರಿಕಾ ಕ್ಷೇತ್ರದಲ್ಲಿ ಡಿಜಿಟಲ್ ಮತ್ತು ತಂತ್ರಜ್ಞಾನದ ಪುಷ್ಟಿ ಸಿಕ್ಕಿದ್ದು ಅನುಕೂಲ ಮಾಡಿಕೊಟ್ಟಿದೆ. ಹಾಗೆಯೇ, ಭಾರತದ ಕಂಪನಿಗಳ ಮೇಲೆ ಜಾಗತಿಕ ಹೂಡಿಕೆ ಸಂಸ್ಥೆಗಳಿಂದ ಬಂಡವಾಳ ಹರಿದುಬರುವ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಇದೂ ಕೂಡ ತಯಾರಿಕಾ ಕ್ಷೇತ್ರ ಪ್ರಕಾಶಮಾನವಾಗಿ ಬೆಳಗಲು ಸಹಾಯವಾಗುತ್ತಿರಬಹುದು.

ಭಾರತ ಬಲಿಷ್ಠವಾಗಿರುವ ಕ್ಷೇತ್ರಗಳು

ಭಾರತ ಬಲಿಷ್ಠವಾಗಿರುವ ಕ್ಷೇತ್ರಗಳು

ರಾಸಾಯನಿಕ, ಫಾರ್ಮಾ, ಔದ್ಯಮಿಕ ಯಂತ್ರೋಪಕರಣ, ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್ ಮತ್ತು ಜವಳಿ ಕ್ಷೇತ್ರಗಳಲ್ಲಿ ಭಾರತಕ್ಕೆ ಅನುಕೂಲವಾಗುವ ಹಲವು ಅಂಶಗಳಿವೆ.

ರಾಸಾಯನಿಕ ಕ್ಷೇತ್ರದಲ್ಲಿ ಭಾರತದ ಕಂಪನಿಗಳು ಬಹಳ ಕಡಿಮೆ ವೆಚ್ಚಕ್ಕೆ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ. ಈ ಕ್ಷೇತ್ರದಲ್ಲಿ ಆರ್ ಅಂಡ್ ಡಿ ಕೂಡ ಉತ್ತಮವಾಗಿದೆ. ಸರಬರಾಜುದಾರರ ವ್ಯವಸ್ಥೆ ಕೂಡ ಬಲಿಷ್ಠವಾಗಿದೆ.

ಇನ್ನು, ಫಾರ್ಮಾ ಕ್ಷೇತ್ರದಲ್ಲಿ ಭಾರತದ ಔಷಧ ಕಂಪನಿಗಳು ಪಾಶ್ಚಿಮಾತ್ಯ ದೇಶಗಳಿಗಿಂತ ಶೇ. 30ರಷ್ಟು ಕಡಿಮೆ ದರದಲ್ಲಿ ಅಷ್ಟೇ ಉತ್ತಮ ಗುಣಮಟ್ಟದ ಔಷಧಗಳನ್ನು ತಯಾರಿಸಬಲ್ಲವು.

ಇನ್ನು ವಾಹನ ಕ್ಷೇತ್ರದಲ್ಲೂ ಭಾರತ ಪ್ರವರ್ಧಮಾನಕ್ಕೆ ಬರುತ್ತಿದೆ. 2022ರ ಏಪ್ರಿಲ್ ತ್ರೈಮಾಸಿಕದಲ್ಲಿ ಭಾರತದ ವಾಹನ ತಯಾರಕರು 1,27 ಲಕ್ಷ ವಾಹನಗಳನ್ನು ರಫ್ತು ಮಾಡಿದ್ದಾರೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿಗಿಂತ ಹೆಚ್ಚೂಕಡಿಮೆ ಮೂರು ಪಟ್ಟು ಹೆಚ್ಚು ರಫ್ತಾಗಿದೆ.

ಔದ್ಯಮಿಕ ಯಂತ್ರೋಪಕರಣ, ಜವಳಿ ಕ್ಷೇತ್ರದಲ್ಲೂ ಭಾರತದ ಕಂಪನಿಗಳು ಕಡಿಮೆ ಬೆಲೆಗೆ ಉತ್ಪಾದನೆ ಮಾಡುತ್ತವೆ. ಹೀಗಾಗಿ ಭಾರತದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಭಾರತದ ಆರ್ ಅಂಡ್ ಡಿ ಸಾಮರ್ಥ್ಯ ಉತ್ತಮ ಇರುವುದರಿಂದ ಸ್ಯಾಮ್ಸುಂಗ್, ವಿಸ್ಟ್ರಾನ್, ಫಾಕ್ಸ್‌ಕಾನ್ ಮೊದಲಾದ ದೊಡ್ಡದೊಡ್ಡ ತಯಾರಕಾ ಕಂಪನಿಗಳು ಭಾರತದಲ್ಲಿ ಉತ್ಪಾದನೆಗೆ ತೊಡಗಿಸಿಕೊಳ್ಳುತ್ತಿವೆ.

(ಒನ್ಇಂಡಿಯಾ ಸುದ್ದಿ)

English summary
Bain and Capital company in its report says Indian manufacturing sectors can reach the level of exporting worth 1 trillion dollar by 2028.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X