• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ ಸೊನ್ನೆ!

|

ಬೆಂಗಳೂರು, ಮೇ 05: ಭಾರತದ ಆಟೋಮೊಬೈಲ್ಸ್ ಕ್ಷೇತ್ರಕ್ಕೆ ಕೊರೊನಾ ಭಾರಿ ಹೊಡೆತವನ್ನೇ ಕೊಟ್ಟಿದೆ. ಏಪ್ರಿಲ್ ತಿಂಗಳಲ್ಲಿ ಬಹುತೇಕ ಎಲ್ಲಾ ಕಂಪನಿಗಳು ಶೂನ್ಯ ಮಾರಾಟ ದಾಖಲೆ ಬರೆದಿವೆ.

ಮಾರುತಿ ಸುಜುಕಿ, ಮಹೀಂದ್ರಾ ಅಂಡ್ ಮಹೀಂದ್ರಾ, ಹ್ಯುಂಡೈ , ಎಂಜಿ ಮೋಟರ್, ಟೋಯೋಟಾ ಕಿರ್ಲೋಸ್ಕರ್ ಕಂಪನಿಗಳ ಒಂದೇ ಒಂದು ಕಾರು/ವಾಹನಗಳು ಮಾರಾಟವಾಗಿಲ್ಲ.

ಕೊರೊನಾ ಎಫೆಕ್ಟ್: ಬಡ್ಡಿ ರಹಿತ EMI ಆಫರ್ ನೀಡಿದ ಕಾರು ಕಂಪನಿ

ಮಾರ್ಚ್ 25ಕ್ಕೆ ಆರಂಭವಾದ ಲಾಕ್ಡೌನ್ ಈಗ ಮೂರನೇ ಅವಧಿಗೆ ವಿಸ್ತರಣೆಗೊಂಡಿದೆ. ದೇಶದೆಲ್ಲೆಡೆಯಲ್ಲಿರುವ ಕಾರು ಡೀಲರ್ ಶಿಪ್ ಹಾಗೂ ಉತ್ಪಾದನಾ ಘಟಕಗಳು ಬಂದ್ ಆಗಿವೆ. ಉತ್ಪಾದನೆ ಸ್ಥಗಿತದಿಂದ ಆಟೋಮೊಬೈಲ್ಸ್ ಕ್ಷೇತ್ರಕ್ಕೆ ಪ್ರತಿ ದಿನ 2,300 ಕೋಟಿ ರು (306 ಮಿಲಿಯನ್ ಡಾಲರ್) ನಷ್ಟವಾಗುತ್ತಿದೆ ಎಂದು ಭಾರತೀಯ ಆಟೋಮೊಬೈಲ್ ಉತ್ಪಾದಾನಾ ಸೊಸೈಟಿ (SIAM) ಹೇಳಿದೆ.

ಮಾರ್ಚ್ ತಿಂಗಳಿನಲ್ಲೇ ಬೇಡಿಕೆ ಕುಸಿತ ಎದುರಿಸಬೇಕಾಯಿತು. ಕಳೆದ 20 ವರ್ಷಗಳಲ್ಲೇ ಕಾಣದಂಥ ಕುಸಿತ ದಾಖಲಾಗಿದೆ ಎಂದು ಐಸಿಆರ್ ಎ ಕ್ರೆಡಿಟ್ ರೇಟಿಂಗ್ ಸಂಸ್ಥೆ ಉಪಾಧ್ಯಕ್ಷ ಸುಬ್ರತಾರಾಯ್ ಹೇಳಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಮಾರಾಟ ಶೇ 47.9ರಷ್ಟು ಕುಸಿತ ಕಂಡಿದ್ದರೆ, ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಶೇ 90ರಷ್ಟು ಕುಸಿತ ಕಂಡಿತ್ತು.

ಉತ್ಪಾದನಾ ಕ್ಷೇತ್ರಕ್ಕೆ ಅಗತ್ಯ ಕಚ್ಚಾವಸ್ತು ಒದಗಿಸುತ್ತಿದ್ದ ಸಣ್ಣ ಪುಟ್ಟ ಕಂಪನಿಗಳು ಬಂದ್ ಆಗಿವೆ, ಎಲ್ಲಾ ಕಡೆ ಆದಾಯಯಿಲ್ಲ, ಲಾಕ್ಡೌನ್ ನಂತರ ಬೇಡಿಕೆ ಹೆಚ್ಚಾಗಿ, ಉತ್ಪಾದನಾ ಪೂರೈಕೆ ಸಮರ್ಪಕವಾಗಿ ನಡೆದರೆ ಮಾರಾಟ ವೃದ್ಧಿಯಾಗಬಲ್ಲುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
All major automakers, including Maruti Suzuki, Mahindra & Mahindra, Hyundai Motor, MG Motor, and Toyota Kirloskar, reported zero domestic car sales during the month due to the nationwide Covid-19 shutdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X