2025ರ ಹೊತ್ತಿಗೆ ಭಾರತದಲ್ಲಿ ಶೇ 18 ಐಫೋನ್‌ಗಳ ಉತ್ಪಾದನೆ: ಬ್ಯಾಂಕ್ ಆಫ್ ಅಮೆರಿಕ ಹೇಳಿದ್ದೇನು?
ನವದೆಹಲಿ, ಜೂನ್ 14: 2025ರ ಹೊತ್ತಿಗೆ ಭಾರತದಲ್ಲಿ ಶೇ 18 ಐಫೋನ್‌ಗಳ ಉತ್ಪಾದನೆಯಾಗಬಹುದು ಎಂದು ಬ್ಯಾಂಕ್ ಆಫ್ ಅಮೆರಿಕ ಊಹಿಸಿದೆ. ಆಫಲ್ ಕಂಪನಿಯು ದೊಡ್ಡ ಪ್ರಮಾಣದಲ್ಲಿ ಐಫೋನ್‌ಗಳ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.
2023 ರಲ್ಲಿ ಶೇಕಡಾ 7 ರಷ್ಟು ಐಫೋನ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿವೆ. 2025 ರಲ್ಲಿ ಶೇಕಡಾ 18 ರಷ್ಟು ಐಫೋನ್‌ಗಳು ಭಾರತದಲ್ಲಿ ಉತ್ಪಾದನೆಯಾಗಬಹುದು ಎಂದು ಬ್ಯಾಂಕ್ ಆಫ್ ಅಮೆರಿಕ ಹೇಳಿದೆ.

'ಮೊಬೈಲ್ ಫೋನ್/ಎಲೆಕ್ಟ್ರಾನಿಕ್ಸ್‌ಗೆ ಭಾರತವು ವಿಶ್ವಾಸಾರ್ಹ ಮಾರುಕಟ್ಟೆಯಾಗಿ ಹೊರಹೊಮ್ಮಬಹುದು ಎಂದು ನಾವು ನಂಬುತ್ತೇವೆ. ಇತರ ಕ್ಷೇತ್ರಗಳಲ್ಲಿಯೂ ಯಶಸ್ಸು ಸಿಗುವ ಸಾಧ್ಯತೆ ಇದೆ. ಆಮದು ಹಾಗೂ ರಫ್ತುಗಳನ್ನು ಕಡಿತಗೊಳಿಸುವ ಭಾರತದ ಪ್ರಯತ್ನಗಳು ಅದರ ಮ್ಯಾಕ್ರೋ-ಔಟ್‌ಲುಕ್ ಅನ್ನು ಸುಧಾರಿಸಬಹುದು ಎಂಬುದಾಗಿ ನಾವು ತಿಳಿದುಕೊಂಡಿದ್ದೇವೆ' ಎಂದು ಬ್ಯಾಂಕ್ ಆಫ್ ಅಮೆರಿಕದ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದ ಸಂಶೋಧನೆಯ ಮುಖ್ಯಸ್ಥ ಅಮಿಶ್ ಶಾ ಹೇಳಿದ್ದಾರೆ.
'2025 ರ ಹೊತ್ತಿಗೆ 18 ಐಫೋನ್ ಉತ್ಪಾದನೆಯು ಭಾರತದಲ್ಲಿ ಆಗಬಹುದು. ಪಿಎಲ್‌ಐ ಯೋಜನೆಯಡಿಯಲ್ಲಿ ಗುರಿಗಳು ದೊಡ್ಡ ಪ್ರಮಾಣದಲ್ಲಿ ತನ್ನ ಮಾರಾಟಗಾರರನ್ನು ಭಾರತದಲ್ಲಿ ವಿಸ್ತರಿಸಲು ಉತ್ತೇಜಿಸಿದರೆ ಆಪಲ್‌ನ ಪಾಲು ಮತ್ತಷ್ಟು ವಿಸ್ತರಿಸಬಹುದು' ಎಂದು ಅವರು ತಿಳಿಸಿದ್ದಾರೆ.
ಆಪಲ್‌ನ ಮಾರಾಟಗಾರರು ಎರಡು ನೇರ ಚಿಲ್ಲರೆ ಆಪಲ್ ಸ್ಟೋರ್‌ಗಳನ್ನು ಭಾರತದಲ್ಲಿ ತೆರೆದಿದ್ದಾರೆ. ಈ ದೇಶದಲ್ಲಿ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಿದರೆ ಷೇರು ಇನ್ನೂ ಹೆಚ್ಚಾಗಬಹುದು ಎಂದು ಬ್ಯಾಂಕ್ ಆಫ್ ಅಮೆರಿಕಾ ವರದಿ ಹೇಳಿದೆ.

ಸ್ಥಳೀಯವಾಗಿ ತಯಾರಿಸಿದ ಐಫೋನ್‌ಗಳನ್ನು ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಿದರೆ ಭಾರತದಲ್ಲಿ ಆಪಲ್‌ನ ಮಾರುಕಟ್ಟೆ ಪಾಲು ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ಶೇಕಡಾ 4 ರಷ್ಟಿದೆ.
ಮೊಬೈಲ್ ಫೋನ್‌ನ ಉತ್ಪಾದನಾ ವೆಚ್ಚದ ಶೇಕಡಾ 70 ರಷ್ಟು ಅದರ ಡಿಸ್‌ಪ್ಲೇ, ಮೆಮೊರಿ ಮತ್ತು ಚಿಪ್‌ಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಕ್ಯಾಪೆಕ್ಸ್ ಮತ್ತು ಉನ್ನತ-ಮಟ್ಟದ ತಂತ್ರಜ್ಞಾನದ ಅಗತ್ಯತೆಯಿಂದಾಗಿ ಮುಂದಿನ ದಿನಗಳಲ್ಲಿ ಇವುಗಳನ್ನು ಸ್ಥಳೀಕರಿಸುವುದು ಕಷ್ಟ ಎಂದು ಅಮಿಶ್ ಶಾ ಹೇಳಿದ್ದಾರೆ. ಆದಾಗ್ಯೂ, ಚೀನಾದ 38 ಪ್ರತಿಶತ ಮತ್ತು ವಿಯೆಟ್ನಾಂನ 24 ಪ್ರತಿಶತಕ್ಕಿಂತ ಭಾರತದ ಉತ್ಪಾದನಾ ಮೌಲ್ಯವರ್ಧನೆಯು 18 ಪ್ರತಿಶತದಷ್ಟು ಕಡಿಮೆಯಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.












Click it and Unblock the Notifications