ಮೇ ತಿಂಗಳಲ್ಲಿ ಹೆಚ್ಚಾಯ್ತು ಪೆಟ್ರೋಲ್, ಡೀಸೆಲ್ ಮಾರಾಟ

ನವದೆಹಲಿ, ಜೂನ್ 01; ಮೇ ತಿಂಗಳಿನಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಬೇಡಿಕೆ ಹೆಚ್ಚಳವಾಗಿದ್ದು, ಒಂದು ತಿಂಗಳಿನಲ್ಲಿ ಇಂಧನ ತೈಲ ಮಾರಾಟ ಪ್ರಮಾಣ ಗಗನಕ್ಕೇರಿದೆ ಎಂದು ಅಂಕಿ ಅಂಶಗಳು ಸಾಬೀತುಪಡಿಸಿವೆ.

ಮಾರುಕಟ್ಟೆಯಲ್ಲಿ ಶೇಕಡಾ 90 ರಷ್ಟು ಮಾರಾಟದ ಪಾಲನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು 2.8 ಮಿಲಿಯನ್ ಟನ್‌ ಪೆಟ್ರೋಲ್ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ ಪ್ರಮಾಣಕ್ಕಿಂತ ಶೇಕಡಾ 55.7 ರಷ್ಟು ಹೆಚ್ಚಾಗಿದ್ದರೆ, 2021ನೇ ಸಾಲಿಗೆ ಹೋಲಿಸಿಕೊಂಡರೆ ಈ ಸಾಲಿನಲ್ಲಿ ಶೇಕಡಾ 76 ರಷ್ಟು ಬೇಡಿಕೆ ಹೆಚ್ಚಳವಾಗಿದೆ.

ಕೋವಿಡ್‌-19 ಪೂರ್ವದಲ್ಲಿ 2019ರಲ್ಲಿ ಮೇ ತಿಂಗಳಲ್ಲಿ 2.5 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಪೆಟ್ರೋಲ್ ಮಾರಾಟವಾಗಿದೆ.
ಕೋವಿಡ್-19 ಕಾರಣದಿಂದ ಕಳೆದ ವರ್ಷ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಕುಸಿತ ಕಂಡುಬಂದಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ತಿಂಗಳ-ಮಾಸಿಕ ಮಾರಾಟವು ಶೇಕಡಾ 8.2 ರಷ್ಟು ಹೆಚ್ಚಾಗಿದೆ.

ದೇಶದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಇಂಧನವಾಗಿರುವ ಡೀಸೆಲ್ ಮಾರಾಟ ಮೇ ತಿಂಗಳಲ್ಲಿ 6.82 ಮಿಲಿಯನ್‌ ಟನ್‌ಗಳಷ್ಟಾಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 39.4 ರಷ್ಟು ಹೆಚ್ಚಾಗಿದೆ. ಮೇ 2019 ರಲ್ಲಿ ಮಾರಾಟವಾದ ಡೀಸೆಲ್ ಪ್ರಮಾಣಕ್ಕಿಂತ ಈ ಬಾರಿ ಶೇಕಡಾ 2.3 ರಷ್ಟು ಕಡಿಮೆಯಾಗಿದೆ. 2022ರ ಏಪ್ರಿಲ್‌ನಲ್ಲಿ 6.7 ಮಿಲಿಯನ್ ಟನ್ ಡೀಸೆಲ್ ಮಾರಾಟವಾಗಿತ್ತು. ಏಪ್ರಿಲ್‌ಗೆ ಹೋಲಿಸಿಕೊಂಡರೆ ಮೇ ತಿಂಗಳಲ್ಲಿ ಡೀಸೆಲ್ ಬಳಕೆ ಶೇ.1.8 ರಷ್ಟು ಹೆಚ್ಚಾಗಿದೆ.

ಬೆಲೆ ಇಳಿಕೆಯಿಂದ ಮಾರಾಟ ಹೆಚ್ಚಳ

ಬೆಲೆ ಇಳಿಕೆಯಿಂದ ಮಾರಾಟ ಹೆಚ್ಚಳ

ನಾಲ್ಕು ತಿಂಗಳು ತಟಸ್ಥವಾಗಿದ್ದ ಪೆಟ್ರೋಲ್, ಡೀಸೆಲ್‌ ಬೆಲೆ ಏಪ್ರಿಲ್ ತಿಂಗಳಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳವಾಗಿತ್ತು. ಬೆಲೆ ಏರಿಕೆಯೂ ತೈಲ ಮಾರಾಟದ ಮೇಲೆ ಪರಿಣಾಮ ಬೀರಿದೆ. ಏಪ್ರಿಲ್‌ಗೆ ಹೋಲಿಸಿಕೊಂಡರೆ ಮೇ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿದ್ದು ಕೂಡ ಮಾರಾಟ ಹೆಚ್ಚಳವಾಗಲು ಕಾರಣ ಎಂದು ಉದ್ಯಮದ ಮೂಲಗಳು ತಿಳಿಸಿದೆ. ಬೆಳೆ ಕೊಯ್ಲು ಆರಂಭವೂ ಪೆಟ್ರೋಲ್, ಡೀಸೆಲ್ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಬಿಸಿಲು, ಬೇಸಿಗೆಯೂ ತೈಲ ಬಳಕೆ ಹೆಚ್ಚಾಗಲು ಕಾರಣ

ಬಿಸಿಲು, ಬೇಸಿಗೆಯೂ ತೈಲ ಬಳಕೆ ಹೆಚ್ಚಾಗಲು ಕಾರಣ

ಉತ್ತರ ಭಾರತದಲ್ಲಿ ದಾಖಲೆಯ ತಾಪಮಾನ ದಾಖಲಾಗಿದ್ದು ಕೂಡ ಪೆಟ್ರೋಲ್, ಡೀಸೆಲ್ ಬಳಕೆ ಹೆಚ್ಚಾಗಲು ಕಾರಣವಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ದ್ವಿಚಕ್ರ ವಾಹನ, ಸಾರ್ವಜನಿಕ ವಾಹನ ಬಿಟ್ಟು ಹೆಚ್ಚು ಕಾರು ಬಳಸಿದ್ದು ಕೂಡ ಕಾರಣವಾಗಿದೆ. ಶಾಲೆಗಳಿಗೆ ಬೇಸಿಗೆ ರಜೆ ಇದ್ದ ಕಾರಣ, ಬಿಸಿಲಿನ ತಾಪಮಾನದಿಂದ ತಪ್ಪಿಸಿಕೊಳ್ಳಲು ತಂಪಾದ ಪ್ರದೇಶಗಳೀಗೆ ಹೆಚ್ಚು ಜನ ಪ್ರವಾಸ ಕೈಗೊಂಡಿದ್ದು ಕೂಡ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಏರಿಕೆಯಾಗಲು ಕಾರಣವಾಯಿತು.

ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ 2020 ಮಾರ್ಚ್ 25ರಂದು ದೇಶವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಿತ್ತು. ಸಂಪೂರ್ಣ ಲಾಕ್‌ಡೌನ್‌ನಿಂದ ದೇಶದ ಬಹುತೇಕ ವಾಹನಗಳು ಸ್ತಬ್ದವಾಗಿದ್ದವು, ಪೆಟ್ರೋಲ್, ಡೀಸೆಲ್ ಮಾರಾಟ ಕುಂಠಿತವಾಗಿತ್ತು, ಎರಡು ತಿಂಗಳ ನಂತರ ಇಂಧನ ಮಾರಾಟ ಸುಧಾರಣೆ ಹಾದಿ ಹಿಡಿಯಿತು.

ಎಲ್‌ಪಿಜಿ ಬಳಕೆಯಲ್ಲೂ ಗಣನೀಯ ಏರಿಕೆ

ಎಲ್‌ಪಿಜಿ ಬಳಕೆಯಲ್ಲೂ ಗಣನೀಯ ಏರಿಕೆ

ಮಾರ್ಚ್‌ ತಿಂಗಳಿನಿಂದ ಮನೆ ಬಳಕೆ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ ಗೆ 103.50 ರೂಪಾಯಿ ಹೆಚ್ಚಳವಾಗಿದೆ. 2.19 ಮಿಲಿಯನ್‌ ಟನ್‌ ಅಡುಗೆ ಅನಿಲ ಮಾರಾಟವಾಗಿದ್ದು, ಮಾರಾಟದಲ್ಲಿ ಶೇಕಡಾ 1.48 ರಷ್ಟು ಹೆಚ್ಚಾಗಿದೆ. 2020 ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಇದು ಶೇಕಡಾ 4.8ರಷ್ಟು ಕಡಿಮೆ ಇದೆ. ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಕೇಂದ್ರ ಸರ್ಕಾರ ಉಚಿತ ಸಿಲಿಂಡರ್ ವಿತರಣೆ ಮಾಡಿತ್ತು.

ಎಲ್‌ಪಿಜಿ ಬಳಕೆಯು ಮೇ 2019 ರ ಬೇಡಿಕೆಗಿಂತ 7.6 ರಷ್ಟು ಹೆಚ್ಚಾಗಿದೆ. ಏಪ್ರಿಲ್ 2022 ರಲ್ಲಿ 2.21 ಮಿಲಿಯನ್ ಟನ್‌ ಮಾರಾಟವಾಗಿದ್ದು, ಮೇ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಜೆಟ್‌ ಇಂಧನ ಬಳಕೆಯೂ ಹೆಚ್ಚಳ

ಜೆಟ್‌ ಇಂಧನ ಬಳಕೆಯೂ ಹೆಚ್ಚಳ

5,40,200 ಟನ್ ಜೆಟ್ ಇಂಧನ (ATF) ಮಾರಾಟವಾಗಿದ್ದು, ಕೋವಿಡ್ ಕಾಲದ ಎರಡು ವರ್ಷಗಳ ವಿಮಾನಯಾನ ಕ್ಷೇತ್ರವು ಮತ್ತೆ ಕಾರ್ಯಾರಂಭ ಮಾಡಿದ ನಂತರ ಮಾರಾಟ ಪ್ರಮಾಣ ದ್ವಿಗುಣವಾಗಿದೆ.

2020 ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಜೆಟ್ ಇಂಧನ ಮಾರಾಟ ಪ್ರಮಾಣ ಶೇಕಡಾ 401 ರಷ್ಟು ಹೆಚ್ಚಾಗಿದೆ. ಆದರೆ 2019ರ ಮೇ ತಿಂಗಳಲ್ಲಿ 6,44,000 ಟನ್ ಮಾರಾಟವಾಗಿತ್ತು. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ 2022 ಮೇ ತಿಂಗಳಲ್ಲಿ ಶೇಕಡಾ 16.1ರಷ್ಟು ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+