ಸತತ ಕುಸಿತ ಬಳಿಕ ಚೇತರಿಕೆಯ ಹಾದಿ ಹಿಡಿದ GDP ದರ?

ನವದೆಹಲಿ, ಫೆಬ್ರವರಿ 28: ಭಾರತಕ್ಕೆ ಆರ್ಥಿಕ ಹೊಡೆತದ ಬಿಸಿ ಮತ್ತೆ ತಟ್ಟಿರುವುದು ಗುಟ್ಟಾದ ವಿಷಯವೇನಲ್ಲ. ಕಳೆದ ಆರು ವರ್ಷಗಳಲ್ಲಿಯೇ ಅತ್ಯಂತ ಕಳಪೆ ಸಾಧನೆ ಮಾಡುವ ಮೂಲಕ ಭಾರತದ ಆರ್ಥಿಕ ಕುಸಿತ ಕಂಡಿದೆ. ಸತತ 7 ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕುಸಿತ ಕಂಡಿತ್ತು. ಆದರೆ, ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 4.7ರಷ್ಟಿದ್ದು ಜಿಡಿಪಿ ಪ್ರಗತಿ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್ಎಸ್ಒ) ಶುಕ್ರವಾರದಂದು ಪ್ರಕಟಿಸಿದೆ.

ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯ ಭಾರತದ ಜಿಡಿಪಿ ವರದಿಯಲ್ಲಿ ಪ್ರಗತಿ ದರ ಶೇ 4.5ಕ್ಕೆ ಕುಸಿದಿತ್ತು. ಆದರೆ ಹಿಂದಿನ ತ್ರೈಮಾಸಿಕದಲ್ಲಿ ಪರಿಷ್ಕೃತ 5.1 ಪರ್ಸೆಂಟ್ ರಷ್ಟು ಬೆಳವಣಿಗೆಯ ದರಕ್ಕಿಂತ ಕಡಿಮೆಯಾಗಿದೆ.

2012-13ರಲ್ಲಿ ಜಿಡಿಪಿ ದರ ಶೇ 4.3ಕ್ಕೆ ಕುಸಿದಿತ್ತು. ನಂತರ ಏಳು ತ್ರೈಮಾಸಿಕ ಅವಧಿಗಳಲ್ಲಿ ಸತತ ಕುಸಿತ ಅನುಭವಿಸಿತ್ತು. 2017-18ರ 4ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ ಶೇ 8.13 ರಷ್ಟಿತ್ತು. 2018-19ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅದು ಶೇ 7.95ಕ್ಕೆ ಕುಸಿತ ಕಂಡಿತ್ತು. 2018-19ರ 2ನೇ ತ್ರೈಮಾಸಿಕ ಅವಧಿಯಲ್ಲಿ 7.00%ಕ್ಕೆ ಇಳಿದಿತ್ತು. 2018-19ರ 3ನೇ ತ್ರೈಮಾಸಿಕ ಅವಧಿಯಲ್ಲಿ 6.58%ಕ್ಕೆ ಹಿನ್ನಡೆ ಅನುಭವಿಸಿತ್ತು. 2018-19ರ ಕೊನೆಯ ಹಾಗೂ 4ನೇ ತ್ರೈಮಾಸಿಕ ಅವಧಿಯಲ್ಲಿಯೂ ಜಿಡಿಪಿ ತತ್ತರಿಸಿತ್ತು. ಆಗ ಅದು 5.83%ರ ಸಾಧನೆ ಮಾಡಿತ್ತು.

India’s GDP growth is at 4.7% in December quarter

2019-20ರ 1ನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ 5.01%ರಷ್ಟು ದಾಖಲಾಗಿತ್ತು. ಆದರೆ, ಮೊದಲ ಅವಧಿಗೆ ಶೇ 5.6ರಷ್ಟು ಎಂದು ಅಂದಾಜಿಸಲಾಗಿತ್ತು. ಆರ್ಥಿಕ ಕುಸಿತ ಅನುಭವಿಸುತ್ತಿರುವ ಕಾಲಘಟ್ಟದಲ್ಲಿ 3ನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಚೀನಾದ ಕೊರೊನಾ ವೈರಾಣು ಪರಿಣಾಮ ಜಾಗತಿಕವಾಗಿ ಆಥಿಕ ಪರಿಸ್ಥಿತಿ ಸ್ಥಿರವಾಗಿಲ್ಲದ ಕಾರಣ ಜಿಡಿಪಿ ದರ ಪರಿಷ್ಕರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+