ನೇಪಾಳದಲ್ಲಿ ಭಾರತದ ಕರೆನ್ಸಿ ಧೈರ್ಯವಾಗಿ ಬಳಸಿ

ಕಠ್ಮಂಡು, ನ.26: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಲು ನೇಪಾಳಕ್ಕೆ ಆಗಮಿಸಿರುವ ಬೆನ್ನಲ್ಲೇ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ, ಒಪ್ಪಂದಗಳು ಜೊತೆ ಜೊತೆಯಲ್ಲೇ ನಡೆದಿವೆ.

ಭಾರತ ಹಾಗೂ ನೇಪಾಳದ ನಡುವಿನ ಬಸ್ ಸಂಚಾರಕ್ಕೆ, ವಿಶೇಷ ಆಸ್ಪತ್ರೆಗೆ ಚಾಲನೆ ನೀಡಿದ ನಂತರ ಕರೆನ್ಸಿ ಬಳಕೆ ಕುರಿತಂತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

India relaxes ban on use & flow of currency notes in Nepal

ನೇಪಾಳದಲ್ಲಿ ಭಾರತದ ಕರೆನ್ಸಿ(ರುಪಾಯಿ) ಧಾರಾಳವಾಗಿ ಬಳಕೆ ಮಾಡಬಹುದು ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ. ಅದರೆ, 500 ರು ಹಾಗೂ 1000 ರು ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮಾತ್ರ ನೇಪಾಳಿಯರ ಕೈಗಿತ್ತರೆ ಬೆಚ್ಚಿ ಬೀಳುತ್ತಿದ್ದರು. ಕಾರಣ, ಭಾರತದ ದೊಡ್ಡ ಮೊತ್ತದ ಕರೆನ್ಸಿಗಳು ಗಡಿ ದಾಟಿ ನಕಲಿಯಾಗಿ ನೇಪಾಳಿ ಮಾರುಕಟ್ಟೆಯಲ್ಲಿ ಹರಿದಾಡಿತ್ತು. ಹೀಗಾಗಿ ದೊಡ್ಡ ಮೊತ್ತದ ನೋಟುಗಳ ಬಳಕೆಗೆ ಅಘೋಷಿತ ನಿರ್ಬಂಧ ಎಲ್ಲೆಡೆ ಜಾರಿಯಲ್ಲಿತ್ತು.

ಅದರೆ, ಈಗ 500 ರು ಹಾಗೂ 1000 ರು ನೋಟುಗಳ ಬಳಕೆ ಕುರಿತಂತೆ ಭಾರತ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ನೇಪಾಳಿ ಮಾರುಕಟ್ಟೆಯಲ್ಲಿ ಈ ನೋಟುಗಳಿಗೆ ಇದ್ದ ನಿರ್ಬಂಧ, ನಿಷೇಧ ತೆರವುಗೊಂಡಿದೆ.

Narendra Modi

ನೇಪಾಳದಲ್ಲಿ ವಿಶೇಷ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಶೀಲ್ ಕೊಯಿರಾಲ ಅವರು ಈ ಕರೆನ್ಸಿ ಬಳಕೆ ಕುರಿತಂತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದರು. ಹೀಗಾಗಿ ಇನ್ಮುಂದೆ 500 ಹಾಗೂ 1000 ರು ನೋಟುಗಳನ್ನು ನಿರಾಂತಕವಾಗಿ ಬಳಕೆ ಮಾಡಬಹುದಾಗಿದೆ.

ಈ ಒಪ್ಪಂದದ ಫಲವಾಗಿ ವಲಸಿಗರು, ಕಾರ್ಮಿಕರು, ಪ್ರವಾಸಿಗರಿಗೆ ನೆರವಾಗಲಿದೆ. ಗರಿಷ್ಠ 25,000 ರು ಭಾರತೀಯ ಕರೆನ್ಸಿಯನ್ನು ಒಮ್ಮೆಗೆ ಒಯ್ಯಬಹುದಾಗಿದೆ ಎಂದು ಸ್ಥಳೀಯ ಮಾಧ್ಯಮ ನೇಪಾಳಿನ್ಯೂಸ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+