ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್

ನವದೆಹಲಿ, ಡಿಸೆಂಬರ್ 19: ಜಗತ್ತಿನ ಆರ್ಥಿಕತೆಗೆ ಭಾರತದ ಕೊಡುಗೆಯ ಪಾಲಿನಲ್ಲಿ ಏರಿಕೆ ಆಗಿದೆ. 2014ರಲ್ಲಿ 2.6% ಇದ್ದದ್ದು 2017ರಲ್ಲಿ 3.2%ಗೆ ಹೆಚ್ಚಳ ಆಗಿದೆ ಎಂದು ವಿಶ್ವ ಅಭಿವೃದ್ಧಿ ಸೂಚ್ಯಂಕ ದತ್ತಾಂಶವು ಮಾಹಿತಿ ಬಹಿರಂಗ ಮಾಡಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪೊಣ್ ರಾಧಾಕೃಷ್ಣನ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈ ಮಾಹಿತಿ ಇದೆ.

1960ರಿಂದ 2013ರ ಮಧ್ಯೆ ಜಾಗತಿಕ ಆರ್ಥಿಕತೆ ಭಾರತದ ಅರ್ಥ ವ್ಯವಸ್ಥೆಯ ಸರಾಸರಿ ಕೊಡುಗೆ 1.8%. 2014-15ರಿಂದ 2017-18ರ ಮಧ್ಯೆ ದೇಶದ ಆರ್ಥಿಕತೆಯ ಸರಾಸರಿ 7.3 ಪರ್ಸೆಂಟ್. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಭಾರತದ್ದು.

2018-19, 2019-20ರಲ್ಲಿ ಭಾರತದ ಆರ್ಥಿಕತೆಯನ್ನು ಬಹಳ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಬಿಂಬಿಸಲಾಗಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಅಕ್ಟೋಬರ್ 2018ರಲ್ಲಿ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಅಂಶ ಬಯಲಾಗಿದೆ. 2018-19ರ ಮೊದಲಾರ್ಧದಲ್ಲಿ ಜಿಡಿಪಿ ಬೆಳವಣಿಗೆ ದರ 7.6% ಇದೆ.

India becoming worlds fastest growing economy, IMF data reveals

ಕೇಂದ್ರ ಸಾಂಖ್ಯಿಕ ಕಚೇರಿ ಮಾಹಿತಿ ಪ್ರಕಾರ, ದೇಶದ ತಲಾದಾಯ ಕೂಡ ಹೆಚ್ಚಳವಾಗಿದೆ. 2014-15ರಲ್ಲಿ 86,647 ರುಪಾಯಿ ಇದ್ದದ್ದು, 2017-18ರಲ್ಲಿ 1,12,835 ರುಪಾಯಿಗೆ ಏರಿಕೆ ಆಗುವ ಮೂಲಕ 30.2 ಪರ್ಸೆಂಟ್ ಹೆಚ್ಚಳ ಕಂಡಿದೆ.

ಭಾರತ -ಟರ್ಕಿ ವ್ಯಾಪಾರ ಒಕ್ಕೂಟವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಪ್ರಭು, ಮುಂದಿನ ಏಳೆಂಟು ವರ್ಷಗಳಲ್ಲಿ ಭಾರತದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್ ಆಗುತ್ತದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+