ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ Ikea ಸ್ಟೋರ್ ಆರಂಭ; ದಾವೊಸ್‌ನಲ್ಲಿ ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಸಿಇಒ

|
Google Oneindia Kannada News

ಬೆಂಗಳೂರು, ಮೇ 25: ನಗರದಲ್ಲಿ ಮುಂದಿನ ತಿಂಗಳು ಜೂನ್‌ನಲ್ಲಿ ಅರಂಭಗೊಳ್ಳಲಿರುವ ಐಕಿಯಾ (Ikea) ಫರ್ನಿಚರ್ ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನ ನೀಡಲಾಗಿದೆ. ಸ್ವಿಟ್ಚರ್‌ಲೆಂಡ್ ದೇಶದ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ (World Economic Forum) ಸಭೆಯಲ್ಲಿ ಇಂಕಾ ಗ್ರೂಪ್‌ನ (Ingka Group) ಸಿಇಒ ಜೆಸ್ಪೆರ್ ಬ್ರೋಡನ್ ಅವರು ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ, ಬೆಂಗಳೂರಿನಲ್ಲಿ Ikea Store ಉದ್ಘಾಟನಾ ಕಾರ್ಯಕ್ರಮಕ್ಕೆ ಬರಬೇಕೆಂದು ಅಧಿಕೃತವಾಗಿ ಆಮಂತ್ರಣವನ್ನೂ ಮಾಡಿದರೆನ್ನಲಾಗಿದೆ. ಪೀಠೋಪಕರಣ (Furniture) ತಯಾರಿಸಲು ಸ್ಥಳೀಯವಾಗಿ ಲಭ್ಯ ಇರುವ ಬಿದಿರು ಮೊದಲಾದ ವಸ್ತುಗಳ ಲಭ್ಯತೆ ಮತ್ತು ಸಮಸ್ಯೆಗಳ ಬಗ್ಗೆ ಸಿಎಂ ಜೊತೆ ಕಂಪನಿಯ ಸಿಇಒ ಚರ್ಚೆ ಕೂಡ ಮಾಡಿರುವುದು ತಿಳಿದುಬಂದಿದೆ.

ದಾವೋಸ್ ನಗರದಲ್ಲಿ ಸಿಎಂ ಬೊಮ್ಮಾಯಿ ಜೊತೆ ಸಚಿವರಾದ ಡಾ. ಅಶ್ವತ್ಥನಾರಾಯಣ ಮತ್ತು ಮರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನಿ ಕಾರ್ಯದರ್ಶಿ ಎನ್ ಮಂಜುನಾಥ್, ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ, ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಮೊದಲಾದವರು ಇದ್ದರು.

ಬಂಡವಾಳ ಹೂಡಿಕೆದಾರರನ್ನುಕರ್ನಾಟಕ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ: ಸಿಎಂಬಂಡವಾಳ ಹೂಡಿಕೆದಾರರನ್ನುಕರ್ನಾಟಕ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ: ಸಿಎಂ

ಭಾರತದ ಹಲವು ನಗರಗಳಲ್ಲಿ Ikea ಸ್ಟೋರ್‌ಗಳಿವೆ. ಪೀಠೋಪಕರಣಗಳ ಕಂಪನಿಯಾದ ಐಕಿಯಾದ ಭಾರತ ವಿಭಾಗದ ಮುಖ್ಯ ಕಚೇರಿ ಇರುವುದು ಬೆಂಗಳೂರಿನಲ್ಲೇ. ಮುಂದಿನ ತಿಂಗಳು ಬೆಂಗಳೂರಿನ ನಾಗಸಂದ್ರದಲ್ಲಿ ಅದರ ಒಂದು ಪೀಠೋಪಕರಣ ಮಳಿಗೆ ಆರಂಭವಾಗುತ್ತದೆ.

Ikea Store to Open at Bengaluru in June, Ingka Group CEO invites CM Bommai for inauguration

ಹೂಡಿಕೆದಾರರಿಗೆ ಸಿಎಂ ಕರೆ:
ಇದೇ ವೇಳೆ ದಾವೋಸ್‌ನಲ್ಲಿ ಕರ್ನಾಟಕದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ಆಯಿತು. ಬೆಂಗಳೂರಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಜಾಗತಕ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಬೆಂಗಳೂರು ಟೆಕ್ ಸಮಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.

Ikea Store to Open at Bengaluru in June, Ingka Group CEO invites CM Bommai for inauguration

ರಾಜ್ಯದಲ್ಲಿ ವ್ಯವಹಾರಕ್ಕೆ ಪೂರಕವಾದ ವಾತಾವರಣ ಇರುವ ಬಗ್ಗೆ ಹೂಡಿಕೆದಾರರ ಗಮನ ಸೆಳೆಯುವ ಪ್ರಯತ್ನಗಳನ್ನು ಮುಖ್ಯಮಂತ್ರಿಗಳು ಮತ್ತು ಸಚಿವರು ಮಾಡಿದರು. ಯಾವುದೇ ಉದ್ಯಮಕ್ಕೂ ಅಗತ್ಯ ಇರುವ ಮಾನವ ಸಂಪನ್ಮೂಲ ಹಾಗೂ ಇತರ ಮೂಲಭೂತ ಸೌಕರ್ಯ ವ್ಯವಸ್ಥೆ ಕರ್ನಾಟಕದಲ್ಲಿ ಇದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Karnataka Chief Minister Basavaraj Bommai met the CEO of Ingka Group (Ikea), Jesper Brodin, at the World Economic Forum Meet, being held in Switzerland's Davos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X