ವೊಡಾಫೋನ್ ಜತೆ ವಿಲೀನಕ್ಕೆ ಐಡಿಯಾ ಅಸ್ತು, 80 ಸಾವಿರ ಕೋಟಿ ಆದಾಯ!

ಸುಮಾರು ಎರಡು ವರ್ಷಗಳ ಈ ವಿಲೀನ ಪ್ರಕ್ರಿಯೆ ನಡೆಯಲಿದ್ದು, ಭಾರತದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಲಿರುವ ವೊಡಾಫೋನ್ ಜತೆಗಿನ ಐಡಿಯಾ ಒಪ್ಪಂದದ ಮೌಲ್ಯ 80, 000 ಕೋಟಿ ರು ಮೀರಲಿದೆ.

ಬೆಂಗಳೂರು, ಮಾರ್ಚ್ 20: ವೋಡಾಫೋನ್ ಜತೆ ವಿಲೀನ ಪ್ರಕ್ರಿಯೆಗೆ ಐಡಿಯಾ ಸೆಲ್ಯುಲಾರ್ ಬೋರ್ಡ್ ಮೀಟಿಂಗ್ ನಲ್ಲಿ ಒಪ್ಪಿಗೆ ಸಿಕ್ಕಿದ್ದು, ವಿಲೀನ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಐಡಿಯಾ ಸಂಸ್ಥೆ ಸೋಮವಾರ ಪ್ರಕಟಿಸಿದೆ.

ಸುಮಾರು ಎರಡು ವರ್ಷಗಳ ಈ ವಿಲೀನ ಪ್ರಕ್ರಿಯೆ ನಡೆಯಲಿದ್ದು, ಭಾರತದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಲಿರುವ ವೊಡಾಫೋನ್ ಜತೆಗಿನ ಐಡಿಯಾ ಡೀಲ್ ನಂತರ ಸಂಸ್ಥೆಯ ಆದಾಯ 80, 000 ಕೋಟಿ ರು ಮೀರಲಿದೆ. [ಜಿಯೋ ಪ್ರೈಮ್ vs ಏರ್ ಟೆಲ್, ವೋಡಾಫೋನ್, ಐಡಿಯಾ]

ಭಾರತದ ಸುಮಾರು 37 ಬಿಲಿಯನ್ ಡಾಲರ್ ಟೆಲಿಕಾಂ ಸೇವಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ಮಹತ್ವ ಹೆಜ್ಜೆ ಇಟ್ಟಿದೆ. ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ.

Idea Cellular, Vodafone to merge India's Largest telecom operator worth Rs 80,000 crore

ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ 19ರಷ್ಟು ಪಾಲು ಹೊಂದಿರುವ ಐಡಿಯಾ ಒಂದಾಗಲಿದೆ. [ವೊಡಾಫೋನ್ ಫ್ರೀ ಆಫರ್ ಏನು ಕೊಡುತ್ತೆ: ಟ್ವಿಟ್ಟರಲ್ಲಿ ಪ್ರಶ್ನೆ]

ಹೀಗಾಗಿ, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ.ಸದ್ಯ ಶೇ 33ರಷ್ಟು ಪಾಲುಹೊಂದಿರುವ ಭಾರ್ತಿ ಏರ್ ಟೆಲ್ ಲಿಮಿಟೆಡ್ ಸಂಸ್ಥೆ ಅಗ್ರಸ್ಥಾನದಲ್ಲಿದೆ.

ರಿಲಯನ್ಸ್ ಜಿಯೋ ಉಚಿತ ಕರೆ ಹಾಗೂ ಡಾಟಾ ಸೇವೆಯನ್ನು ಮಾರ್ಚ್ 2017ರ ತನಕ ವಿಸ್ತರಿಸಿದ ಬಳಿಕ ಇತರೆ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈ ಒಪ್ಪಂದದ ಬಗ್ಗೆ ವೊಡಾಫೋನ್ ಸಂಸ್ಥೆ ನೀಡಿರುವ ಮಾಧ್ಯಮ ಪ್ರಕಟಣೆ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+