ಐಸಿಐಸಿಐ -ವಿಡಿಯೋಕಾನ್ ಕೇಸ್: ದೀಪಕ್ ಬಂಧಿಸಿದ ಇಡಿ
ಮುಂಬೈ, ಸೆ. 7: ಸರಿ ಸುಮಾರು 3,250 ಕೋಟಿ ರು ಮೌಲ್ಯದ ಐಸಿಐಸಿಐ -ವಿಡಿಯೋಕಾನ್ ಸಾಲ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳಾದ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ವಿಚಾರಣೆ ಇನ್ನು ಜಾರಿಯಲ್ಲಿದೆ.

ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3,250 ಕೋಟಿರೂ.ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ. ಐಸಿಐಸಿಐನ ಮಾಜಿ ಎಂಡಿ ಚಂದಾ ಕೊಚ್ಚಾರ್ ಹಾಗೂ ಕುಟುಂಬಕ್ಕೆ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಗೂ ಅಧಿಕ ಮೊತ್ತ ಸಿಕ್ಕಿದೆ. ಇದು ಸದ್ಯದ ಲೆಕ್ಕಾಚಾರವಾಗಿದ್ದು, ಕಿಕ್ ಬ್ಯಾಕ್ ಮೊತ್ತ ಇನ್ನು ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.
ಧೂತ್ ಹಾಗೂ ಇದೇ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಮತ್ತಿಬ್ಬರು ಸಂಬಂಧಿಕರ ಜತೆ ಸೇರಿ 2008ರಲ್ಲಿ ಆರಂಭಿಸಿದ್ದ ಕಂಪೆನಿ. ಆ ನಂತರ ಈ ಕಂಪೆನಿಯ ಮಾಲೀಕತ್ವವನ್ನು ಕೊಚ್ಚರ್ ಗೆ ಸೇರಿದ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ. ಈ ಪ್ರಕ್ರಿಯೆ ನಡೆಯುವ ಆರು ತಿಂಗಳ ಮುಂಚೆ ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗ್ರೂಪ್ ಗೆ 3,250 ಕೋಟಿ ರುಪಾಯಿ ಸಾಲ ಮಂಜೂರಾಗಿದ್ದು, 2017ರಲ್ಲಿ ಆ ಸಾಲದ ಪೈಕಿ ಹತ್ತಿರ ಹತ್ತಿರ 2,810 ಕೋಟಿ ರುಪಾಯಿಯನ್ನು ನಾನ್ ಪರ್ಫಾಮಿಂಗ್ ಅಸೆಟ್ (ಎನ್ ಪಿಎ) ಎಂದು ಘೋಷಿಸಿದ್ದು, ಮರು ಪಾವತಿಸಿಲ್ಲ ಎಂದು ಆರೋಪಿಸಲಾಗಿತ್ತು.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications