• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಹ್ಯುಂಡೈ ಕ್ರೆಟಾ 5 ವರ್ಷದಲ್ಲಿ 5 ಲಕ್ಷ ಮಾರಾಟ

|

ನವದೆಹಲಿ, ಆಗಸ್ಟ್‌ 11: ಕೊರಿಯಾದ ಕಾರು ತಯಾರಕ ಹ್ಯುಂಡೈ ಕ್ರೆಟಾ ಭಾರತದಲ್ಲಿ ಐದು ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಅಂದರೆ ಪ್ರತಿವರ್ಷ ಸರಾಸರಿ ಒಂದು ಲಕ್ಷ ಕ್ರೆಟಾ ಎಸ್‌ಯುವಿಗಳನ್ನು ಕಂಪನಿಯು ಮಾರಾಟ ಮಾಡಿದೆ.

ಹ್ಯುಂಡೈ ಇಂಡಿಯಾ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಜುಲೈ 2015 ರಲ್ಲಿ ಬಿಡುಗಡೆ ಮಾಡಿತು. ಜೊತೆಗೆ ಮಾರ್ಚ್ 2020 ರಲ್ಲಿ ಎರಡನೇ ತಲೆಮಾರಿನ ಮಾದರಿಯನ್ನು ಬಿಡುಗಡೆ ಮಾಡಿತು. ಆದರೆ ನಂತರದಲ್ಲಿ ಕೊರೊನಾವೈರಸ್ ಅಡೆತಡೆಗಳ ಹೊರತಾಗಿಯೂ ಹ್ಯುಂಡೈ ಕ್ರೆಟಾ ಮೇ, ಜೂನ್ ಮತ್ತು ಜುಲೈನಲಲ್ಇ ಎಸ್‌ಯುವಿಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

5,000 ರೂಪಾಯಿಗೆ Honda Jazz ಕಾರು ಬುಕ್ ಮಾಡಿ

ಜುಲೈ 2020 ರಲ್ಲಿ ಹ್ಯುಂಡೈ ಇಂಡಿಯಾ 29,413 ಕಾರುಗಳನ್ನು ಮಾರಾಟ ಮಾಡಿತು ಮತ್ತು ಕಂಪನಿಯು ಹೊಸ ಮಾದರಿಯ ಕ್ರೆಟಾದ 11,549 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಈ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ (ಮಾರಾಟ, ಮಾರುಕಟ್ಟೆ ಮತ್ತು ಸೇವೆ) ತರುಣ್ ಗರ್ಗ್, "ಹ್ಯುಂಡೈ ಕ್ರೆಟಾ 2015 ರಲ್ಲಿ ಪ್ರಾರಂಭವಾದಾಗಿನಿಂದಲೂ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಬ್ಲಾಕ್‌ಬಸ್ಟರ್ ಮಾದರಿಯಾಗಿದೆ. ಭಾರತದಲ್ಲಿ ಕ್ರೆಟಾದ ಪ್ರಾಬಲ್ಯವು ಹ್ಯುಂಡೈನ ತಾಂತ್ರಿಕ ಪರಾಕ್ರಮ ಮತ್ತು ನಾವೀನ್ಯತೆಯಿಂದ ಹೊರಹೊಮ್ಮುತ್ತದೆ'' ಎಂದಿದ್ದಾರೆ.

ಇದರ ಹೊರತಾಗಿಯು ಜುಲೈ ತಿಂಗಳಿನಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಮಾರಾಟವು ಶೇಕಡಾ 28ರಷ್ಟು ಕುಸಿದಿದೆ. ಆದರೆ ಕ್ರೆಟಾ ಡೀಸೆಲ್ ರೂಪಾಂತರಗಳ ಬುಕ್ಕಿಂಗ್ ಹೆಚ್ಚಿದೆ. ಒಟ್ಟು ಸ್ವೀಕರಿಸಿದ ಬುಕ್ಕಿಂನಲ್ಲಿ ಶೇಕಡಾ 60ರಷ್ಟಿದೆ.

English summary
South Korean carmaker Hyundai Creta has crossed the 5 lakh sales unit mark in India. Hyundai India launched the compact SUV in July 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X