• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?

|
Google Oneindia Kannada News

ಆನ್ ಲೈನ್ ನಲ್ಲಿ ಕನ್ನಡದಲ್ಲಿ ಬರೆಯಲು ಸಾಹಸ ಪಡುವ ಕಾಲ ಈಗಿಲ್ಲ. ಅನೇಕ ಟೂಲ್ ಗಳು ಲಭ್ಯವಿದೆ. ಲಿಪಿಕಾರ್, ಗೂಗಲ್ ವಾಯ್ಸ್ ನಂತರ ಈಗ ಮತ್ತೊಂದು ಅಪ್ಲಿಕೇಷನ್ ಜನಪ್ರಿಯತೆ ಗಳಿಸುತ್ತಿದೆ. ದನಿಯನ್ನು ಅಕ್ಷರ ರೂಪಕ್ಕಿಳಿಸುವ Kannada Voice Notes ಅಪ್ಲಿಕೇಷನ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...

ಧ್ವನಿಗ್ರಹಣ ಮಾಡಿಕೊಂಡು ಅದನ್ನು ಪಠ್ಯವಾಗಿ ಪರಿವರ್ತಿಸುವ ಹೊಸ ಮಾದರಿಯ ಸಾಧನಕ್ಕೆ ಬಹುತೇಕ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಾವು ಮಾತಾಡಿದ್ದನ್ನು ಗ್ರಹಿಸಿ ಅದನ್ನು ಪಠ್ಯ ರೂಪಕ್ಕೆ ಪರಿವರ್ತಿಸಿ ಕೊಡುವುದು ಇದರ ಕೆಲಸ.

ಕನ್ನಡದಲ್ಲಿ 'ನ್ಯಾವಿಗೇಶನ್' ಹಾಗೂ 'ದನಿಯಿಂದ ಪಠ್ಯ' ತಂತ್ರಾಂಶಕನ್ನಡದಲ್ಲಿ 'ನ್ಯಾವಿಗೇಶನ್' ಹಾಗೂ 'ದನಿಯಿಂದ ಪಠ್ಯ' ತಂತ್ರಾಂಶ

ಆಂಡ್ರಾಯ್ಡ್ ಫೋನುಗಳಲ್ಲಿ ಈ ಕೀಬೋರ್ಡನ್ನು ಸಕ್ರಿಯಗೊಳಿಸಿಕೊಂಡು ಇದರಲ್ಲಿರುವ ಮೈಕ್ ಬಟನ್ ಆನ್ ಮಾಡಿಕೊಂಡು ನಮಗೆ ಏನು ಬರೆಯಬೇಕಿರುತ್ತದೋ ಅದನ್ನು ಮಾತಾಡಿದರೆ ಅಕ್ಷರ ರೂಪದಲ್ಲಿ ಟೈಪ್ ಮಾಡಿ ತೆರೆಯಮೇಲೆ ತೋರಿಸುತ್ತದೆ. ಇಂಗ್ಲೀಷ್ ಮುಂತಾದ ಭಾಷೆಗಳಿಗೆ ಈ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ಮೊದಲೇ ತಯಾರಾಗಿವೆ.

ಎಲ್ಲೆಡೆ ಲಿಪಿಕಾರ ಮೊಬೈಲ್ ಅಪ್ಲಿಕೇಷನ್ ಸುದ್ದಿ ಸದ್ದುಎಲ್ಲೆಡೆ ಲಿಪಿಕಾರ ಮೊಬೈಲ್ ಅಪ್ಲಿಕೇಷನ್ ಸುದ್ದಿ ಸದ್ದು

ಆದರೆ, ಕನ್ನಡದಲ್ಲಿ ನಿಖರವಾಗಿ ಫಲಿತಾಂಶ ಹೊರ ಹಾಕಬಲ್ಲ ತಂತ್ರಾಂಶಗಳ ಕೊರತೆ ಇತ್ತು. ಆದರೆ, ಈಗ ಸ್ಪಷ್ಟವಾಗಿ ಮಾತನಾಡಿದ್ದನ್ನು ಕನ್ನಡ ಲಿಪಿಯನ್ನು ಪ್ರಕಟಿಸುತ್ತದೆ. ಹಾಗಾದರೆ, ಕನ್ನಡ ವಾಯ್ಸ್ ನೋಟ್ ಆಪ್ ಬಳಸುವುದು ಹೇಗೆ? ಮುಂದೆ ಓದಿ...

'ವಾಯ್ಸ್ ನೋಟ್ಸ್' ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

'ವಾಯ್ಸ್ ನೋಟ್ಸ್' ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಗೂಗಲ್‌ ಪ್ಲೇ ಸ್ಟೋರ್(Kannada Voice Notes ಎಂದು ಸರ್ಚ್ ಮಾಡಿ) ಮೂಲಕ ಉಚಿತವಾಗಿ 'ವಾಯ್ಸ್ ನೋಟ್ಸ್' ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಕೀ ಬೋರ್ಡ್ ಗೊಂದಲ ನಿಮಗೆ ಬೇಕಿಲ್ಲ. ನಿಮ್ಮದೇ ಭಾಷೆಯಲ್ಲಿ ಯೋಚಿಸಿ ಮಾತನಾಡಿ, ಸಂದೇಶ ಕಳಿಸಿ.

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಫೇಸ್‌ ಬುಕ್‌, ವಾಟ್ಸಾಪ್, ಇಮೇಲ್‌, ನೋಟ್ ಪ್ಯಾಡ್, ಆಫೀಸ್ ಸಾಧನಗಳ ಜತೆಗೆ ಲಿಪಿಕಾರ್ ಕೀ ಬೋರ್ಡ್ ಬಳಸಬಹುದಾಗಿದೆ.

ನೋಂದಣಿ ಮಾಡಿಕೊಳ್ಳಿ

ನೋಂದಣಿ ಮಾಡಿಕೊಳ್ಳಿ

ಆಂಡ್ರಾಯ್ಡ್ ವರ್ಷನ್ 5 ಅಥವಾ ಅದಕ್ಕಿಂತ ಹೆಚ್ಚಿರುವ ಮೊಬೈಲ್ ಗಳಲ್ಲಿ ಲಿಪಿಕಾರ್ ಸುಲಭವಾಗಿ ಬಳಸಬಹುದು. ಪ್ಲೇ ಸ್ಟೋರಿನಿಂದ ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಂಡ ಬಳಿಕ ಎನೇಬಲ್ ಮಾಡಬೇಕು. ನೋಂದಣಿ ಮಾಡಿಕೊಳ್ಳಬೇಕು. 5ಎಂಬಿ ತೂಗುವ ಆಪ್ ಸಾವಿರಕ್ಕೂ ಅಧಿಕ ಬಾರಿ ಡೌನ್ ಲೋಡ್ ಆಗಿದೆ

ದನಿಯಿಂದ ಅಕ್ಷರಕ್ಕೆ

ದನಿಯಿಂದ ಅಕ್ಷರಕ್ಕೆ

* ಇಲ್ಲಿ ಯಾವುದೇ ಟೈಪಿಂಗ್ ಟೂಲ್ ಲಭ್ಯವಿಲ್ಲ
* ಧ್ವನಿ ರೆಕಾರ್ಡ್ ಬಟನ್ ಒತ್ತಿ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿ
* ಮಾತನಾಡಿದ್ದು ಮುಗಿದ ಬಳಿಕ ಅದೇ ಬಟನ್ ಒತ್ತಿ, ರೆಕಾರ್ಡ್ ಪೂರ್ಣಗೊಳಿಸಿ
* ನಿಮ್ಮ ವಾಯ್ಸ್ ನೋಟ್ ಸೇವ್ ಆಗಿರುತ್ತದೆ. ಇದನ್ನು ಸೇವ್ಡ್ ವಾಯ್ಸ್ ನೋಟ್ಸ್ ನಲ್ಲಿ ನೋಡಬಹುದು.
* ಈ ವಾಯ್ಸ್ ನೋಟನ್ನು ತಕ್ಷಣವೇ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ವಿವಿಧೆಡೆ ಹಂಚಿಕೊಳ್ಳಬಹುದು.

ಇನ್ನಷ್ಟು ಸುಲಭಗೊಳಿಸಬಹುದು

ಇನ್ನಷ್ಟು ಸುಲಭಗೊಳಿಸಬಹುದು

ಮೇಲ್ನೋಟಕ್ಕೆ ಹಲವರಿಗೆ ತಕ್ಷಣಕ್ಕೆ ಇದೊಂದು ಅದ್ಭುತ ಸಾಧನದಂತೆ ಕಂಡು ಬಂದಿದೆ. ಕೆಲವರಿಗೆ ಹಲವು ದೋಷಗಳು ಕಂಡು ಬಂದಿವೆ.
* ಈ ಸಾಧನದ ಪ್ರತಿಕ್ರಿಯೆ ಅವಧಿ ಇನ್ನಷ್ಟು ಹೆಚ್ಚಿಸಬಹುದು
* ಹೆಚ್ಚು ಸೆಕೆಂಡುಗಳ ಕಾಲ ಧ್ವನಿ ರೆಕಾರ್ಡ್ ಮಾಡುವುದಕ್ಕೆ ಅವಕಾಶ ಬೇಕು.
* ಆಪಲ್ ಸಾಧನಗಳಲ್ಲಿ ಇನ್ನು ಈ ಟೂಲ್ ಏಕೆ ಲಭ್ಯವಿಲ್ಲ.
* ವಾಕ್ಯಗಳಲ್ಲಿ ದೋಷಗಳಿದ್ದರೆ ಮತ್ತೆ ತಿದುತ್ತಾ ಕೂರಬೇಕು.
* ಅಲ್ಪ ವಿರಾಮ (,), ಪೂರ್ಣ ವಿರಾಮ (.) ಮಂತಾದ ವಿಶೇಷ ಚಿನ್ಹೆ ಬಳಕೆ ನಿಮ್ಮ ಮಾತಿನ ಮೇಲೆ ಅವಲಂಬಿತವಾಗಿರುತ್ತದೆ.

English summary
Here are the steps to show how to use Kannada Voice Notes App. Speak in Kannada and convert your voice to text in Kannada. Share the notes on any social media. Get your hands off the keyboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X